– ST ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ವಿಶ್ವನಾಥ್ ಹೇಳಿದ್ದೇನು?
ನವದೆಹಲಿ: ಬಿಜೆಪಿಯವರು (BJP) ಸರ್ಕಾರ ಮಾಡುವಾಗ ದಮ್ಮಯ್ಯ ಬನ್ನಿ ಅಂತಾ ಕರೆದರು, ಈಗ ದಮ್ಮಯ್ಯ ಬರ್ತಿವಿ ಅಂದರೂ ಸೇರಿಸಿಕೊಳ್ಳೋರಿಲ್ಲ ಎಂದು ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ (H Vishwanath) ಅಸಮಾಧಾನ ಹೊರಹಾಕಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ಎಸ್.ಟಿ ಸೋಮಶೇಖರ್ (ST Somashekar) ಕಾಂಗ್ರೆಸ್ ಸೇರಲು ಹಾಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ರಾಜೀನಾಮೆ ಕೊಟ್ಟರೆ ಮರುಚುನಾವಣೆ ಆಗಬೇಕು, ಇದನ್ನು ಹೇಗೆ ಮಾಡ್ತಾರೆ ಅಂತಾ ನೋಡಬೇಕಾಗುತ್ತೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಅಕ್ರಮ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು
Advertisement
Advertisement
ಬಿಜೆಪಿ ಹಾಲಿ ಶಾಸಕರಾದ ಎಸ್.ಟಿ ಸೋಮಶೇಖರ್ ಮೂಲತಃ ಕಾಂಗ್ರೆಸ್ಸಿಗರು ಯಾವುದೋ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ತೊರೆದು ಹೋಗಿದ್ದರು, ಅವರು ಮತ್ತೆ ಕಾಂಗ್ರೆಸ್‌ಗೆ ಬರುತ್ತಿದ್ದಾರೆ, ಕಾಂಗ್ರೆಸ್ ಸೇರುವುದು ಒಳ್ಳೆಯ ಬೆಳವಣಿಗೆ. ಬಿಜೆಪಿ ನಾಯಕರು ಕಿರುಕುಳ ಕೊಡುತ್ತಿದ್ದಾರೆ ಅನ್ನೋ ಆರೋಪ ಸರಿಯಾಗಿದೆ. ಬಿಜೆಪಿಯವರು ಸರ್ಕಾರ ಮಾಡುವಾಗ ದಮ್ಮಯ್ಯ ಬನ್ನಿ ಅಂತಾ ಕರೆದರು, ಈಗ ದಮ್ಮಯ್ಯ ಬರ್ತಿವಿ ಅಂದರೂ ಸೇರಿಸಿಕೊಳ್ಳೋರಿಲ್ಲ. ಬಿಜೆಪಿಯವರ ಕೆಲಸವೇ ಸೋಲಿಸೋದು, ಅದ್ಯಾರೋ ಸೈನಿಕ ಅಂತೆ ಎಲೆಕ್ಷನ್ ದುಡ್ಡು ಎತ್ಕೊಂಡ್ ಹೋಗಿದ್ದ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ನಾನು ಜೈಲಿಗೆ ಬೇಕಾದ್ರೂ ಹೋಗ್ತೀನಿ ಆದ್ರೆ, ಕಾಂಗ್ರೆಸ್‍ಗೆ ಹೋಗಲ್ಲ: ಮುನಿರತ್ನ
Advertisement
Advertisement
ಮೋದಿಯಿಂದ ಬೆಂಗಳೂರಿಗೇನು ಉಪಯೋಗ?
ಕಾಂಗ್ರೆಸ್ ಪಕ್ಷಕ್ಕೆ ನಾಯಕರು ಬರಬೇಕು, ದೇಶದಲ್ಲಿ ಕಾಂಗ್ರೆಸ್ ಇನ್ನಷ್ಟು ಬಲಿಷ್ಠ ಆಗಬೇಕು. ಮೋದಿಯವರು ಭೂತಕಾಲದಲ್ಲಿ ಮಾತನಾಡ್ತಾರೆ, ಭೂತಕಾಲದ ಬಗ್ಗೆ ಮಾತನಾಡುವುದರಿಂದ ಉಪಯೋಗವಿಲ್ಲ. ಬೆಂಗಳೂರಿಗೆ (Bengaluru) ನೆಹರು ಬಹಳಷ್ಟು ಯೋಜನೆಗಳನ್ನ ಕೊಟ್ಟಿದ್ದಾರೆ. ಮೋದಿಯಿಂದ (Narendra Modi) ಬೆಂಗಳೂರಿಗೆ ಏನೂ ಉಪಯೋಗ ಆಯ್ತು? ಎನ್ನುವುದು ಮುಖ್ಯ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಚಂದ್ರ ಇನ್ನೂ ಸನಿಹ – ಪ್ರೊಪಲ್ಷನ್ ಮಾಡ್ಯೂಲ್‌ನಿಂದ ಯಶಸ್ವಿಯಾಗಿ ಬೇರ್ಪಟ್ಟ ವಿಕ್ರಮ್ ಲ್ಯಾಂಡರ್
ಜಾತಿ ಆಧಾರಿತ ಗಾದೆಗಳನ್ನ ತೆಗೆದು ಹಾಕಬೇಕು:
ಉಪೇಂದ್ರ ಗಾದೆ ಮಾತು ಹೇಳಿ ಜಾತಿ ನಿಂದನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಕೆಲವು ಗಾದೆಗಳನ್ನ ತೆಗೆದುಹಾಕಬೇಕು. ಹೆಣ್ಣು ಮಕ್ಕಳ ಬಗ್ಗೆಯೂ ಗಾದೆಗಳಿವೆ ಅವುಗಳನ್ನ ತೆಗೆದುಹಾಕಬೇಕು. ಜಾತಿ ಆಧಾರಿತ ಗಾದೆಗಳನ್ನ ತೆಗೆದುಹಾಕಬೇಕು ಎಂದು ಒತ್ತಾಯಿಸಿದ್ದಾರೆ.
Web Stories