ಚಿಕ್ಕಬಳ್ಳಾಪುರ: ಸ್ಮ್ಯೂಲ್ ಸಿಂಗಿಂಗ್ ಆ್ಯಪ್‍ನಲ್ಲಿ ತನ್ನ ಜೊತೆ ಹಾಡು ಹಾಡುತ್ತಿದ್ದ ಸಹ ಸಿಂಗರ್ ತನಗೆ ಸ್ಪಂದಿಸುತ್ತಿಲ್ಲ ಎಂದು ಮನನೊಂದು ಗೃಹಿಣಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.
ಶಿಲ್ಪಾ(30) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಶಿಲ್ಪಾ ನಗರದ 16ನೇ ವಾರ್ಡಿನ ಗರ್ಲ್ಸ್ ಸ್ಕೂಲ್ ಹಿಂಭಾಗದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ಶಿಲ್ಪಾಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಶಿಲ್ಪಾ ಸ್ಮ್ಯೂಲ್ ಸಿಂಗಿಂಗ್ ಆ್ಯಪ್ ಬಳಸುತ್ತಿದ್ದಳು. ಈ ನಡುವೆ ಶಿಲ್ಪಾ ಸ್ಮ್ಯೂಲ್ ಸಿಂಗಿಂಗ್ ಆ್ಯಪ್‍ನಲ್ಲಿ ಹಾಸನ ಮೂಲದ ಯುವಕನ ಜೊತೆ ಸ್ನೇಹ ಬೆಳೆಸಿದ್ದಾಳೆ.
Advertisement
Advertisement
ಶುಕ್ರವಾರ ತಡರಾತ್ರಿ ಶಿಲ್ಪಾ, ಯುವಕನಿಗೆ ಫೇಸ್‍ಬುಕ್ ಮೆಸೆಂಜರ್ ಮೂಲಕ ಕರೆ ಮಾಡಿದ್ದಾಗ ಆತ ಕರೆ ಸ್ವೀಕರಿಸಿಲ್ಲ. ಕೊನೆಗೆ ತನ್ನನ್ನು ನೀನು ದೂರ ಮಾಡುತ್ತಿದ್ದೀಯಾ ಎಂದು ಮೆಸೇಜ್ ಮಾಡಿದ್ದಾಳೆ. ಹೀಗೆ ಇಬ್ಬರ ನಡುವೆ ಚಾಟಿಂಗ್ ಮುಂದುವರಿದಿದೆ. ಚಾಟಿಂಗ್ ಮಾಡುತ್ತಿದ್ದಾಗಲೇ ಶಿಲ್ಪಾ ಸಾಯುವುದಾಗಿ ಹೇಳಿ ಯುವಕನಿಗೆ ನೇಣಿನ ಫೋಟೋವೊಂದನ್ನು ಕಳುಹಿಸಿದ್ದಾಳೆ. ಫೋಟೋ ಕಳುಹಿಸಿದ ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
Advertisement
Advertisement
ಈ ಘಟನೆ ವೇಳೆ ಊರಿಗೆ ಹೋಗಿದ್ದ ಶಿಲ್ಪಾ ಪತಿ ಬೆಳಗ್ಗೆ ಪತ್ನಿಗೆ ಕರೆ ಮಾಡಿದ್ದಾರೆ. ಪತ್ನಿ ಕರೆ ಸ್ವೀಕರಿಸದಿದ್ದಕ್ಕೆ ಅನುಮಾನಗೊಂಡ ಪತಿ ಮನೆ ಮಾಲೀಕನಿಗೆ ವಿಷಯ ತಿಳಿಸಿದ್ದಾರೆ. ಮನೆಯ ಬಾಗಿಲು ಒಡೆದು ನೋಡಿದ್ದಾಗ ಶಿಲ್ಪಾ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಚಿಕ್ಕಬಳ್ಳಾಪುರ ನಗರ ಪೊಲೀಸರು ಮನೆಗೆ ಭೇಟಿ ನೀಡಿ ಮೃತದೇಹವನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಅಲ್ಲದೆ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.