ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ನಿಮ್ಮದು ಸ್ವಂತ ಮನೆಯಿದ್ದು ಒಂದಷ್ಟು ಬಾಡಿಗೆ ಮನೆ (rented House) ಗಳನ್ನು ನೀಡಿದ್ರೆ ಈ ಸ್ಟೋರಿ ನೋಡ್ಬೇಕು.
ಲಗ್ಗೆರೆಯ ಪಾರ್ವತಿ ನಗರದಲ್ಲಿ ಶಾಂತಮ್ಮ ಒಂಟಿಯಾಗಿ ವಾಸವಿದ್ದಾರೆ. ಕೊರೊನಾ ಬಂದು ಪತಿ ತೀರಿಕೊಂಡಿದ್ರಿಂದ ಒಬ್ಬರೇ ಇದ್ದರು. ಇವರದ್ದೊಂದು ಬಾಡಿಗೆ ಮನೆ ಖಾಲಿ ಇತ್ತು. ಯಾರಾದ್ರೂ ಮನೆ ನೋಡೋಕೆ ಬಂದ್ರೆ ತಾನೆ ಮುಂದೆ ನಿಂತು, ಮನೆ ತೋರಿಸ್ತಿದ್ರು. ಅಂತೆಯೇ ಇಂದು (ಶುಕ್ರವಾರ) ಕೂಡ ಬೆಳಗ್ಗೆ 10 ಗಂಟೆ ಸುಮಾರಿಗೆ ಶಾಂತಮ್ಮ ಮನೆ ಬಳಿ ಬಂದ ಅಪರಿಚಿತ ಮಹಿಳೆಯೊಬ್ಬರು, ಮನೆ ಬಾಡಿಗೆ ಬೇಕಿತ್ತು, ಮನೆ ನೋಡಬದಹುದಾ ಅಂತಾ ಕೇಳಿದ್ರು. ಅಷ್ಟೇ ತಾನೇ ಬನ್ನಿ ತೋರಿಸ್ತಿನಿ ಅಂತಾ ಮನೆ ಬಾಗಿ ಓಪನ್ ಮಾಡಿ ಒಳಗೆ ಕರೆದಿದ್ರು.
Advertisement
Advertisement
ಮನೆ ಒಳಗೆ ಹೋಗ್ತಿದ್ದಂತೆ ಬಾಗಿಲು ಲಾಕ್ ಮಾಡಿದ ಅಪರಿಚಿತ ಮಹಿಳೆ ಶಾಂತಮ್ಮ ಕತ್ತಿನಲ್ಲಿದ್ದ ಚಿನ್ನದ ಸರ ಬಿಚ್ಚುವಂತೆ ಸೂಚಿಸಿದಳು. ಅಷ್ಟರಲ್ಲಿ ಶಾಂತಮ್ಮ ಜೋರಾಗಿ ಕೂಗಿಕೊಳ್ಳೋಕೆ ಶುರು ಮಾಡಿದರು. ಇದರಿಂದ ಗಾಬರಿಯಾದ ಅಪರಿಚಿತ ಮಹಿಳೆ, ಅಲ್ಲೇ ಇದ್ದ ಕಬ್ಬಿಣ ವಸ್ತುವೊಂದರಿಂದ ಶಾಂತಮ್ಮ ತಲೆಗೆ ಬಲವಾಗಿ ಹಲ್ಲೆ ಮಾಡಿ, ಕತ್ತಿನಲ್ಲಿದ್ದ ಚಿನ್ನದ ಸರ ಕಸಿದು ಎಸ್ಕೇಪ್ ಆಗಿದ್ದಾಳೆ. ಇದನ್ನೂ ಓದಿ: 72 ವರ್ಷದ ವೃದ್ಧನನ್ನು ಕೊಂದು ತಿಂದ 40 ಮೊಸಳೆಗಳು!
Advertisement
ಹಾಡಹಗಲೇ ಇಂತಹ ಘಟನೆ ನಡೆದಿರೋದು ನೋಡಿದ ಅಕ್ಕಪಕ್ಕದ ಜನರು, ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ರಸ್ತೆಯಲ್ಲಿ ಬಿಬಿಎಂಪಿ ವತಿಯಿಂದ ಸಿಸಿಟಿವಿ ಹಾಕಿದ್ದಾರೆ. ಆದರೆ ಅದು ಯಾವಾಗಲೂ ರಿಪೇರಿ. ಇದು ವರ್ಕ್ ಆಗಲ್ಲ. ಯಾರು ಏನೇ ಮಾಡಿ ಹೋದ್ರು ಕೇಳೋರಿಲ್ಲ ಅಂತಿದ್ದಾರೆ. ಸದ್ಯ ಶಾಂತಮ್ಮ ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಆರೋಪಿ ಮಹಿಳೆಗಾಗಿ ಹುಡುಕಾಟ ನಡೆಸಿದ್ದಾರೆ.