ಕಲಬುರಗಿ: ಜಿಲ್ಲೆಯಲ್ಲಿ ಕಳೆದ 3 ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ಬಿರುಗಾಳಿ, ಗುಡುಗು, ಮಿಂಚಿನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ.
ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ವೆಂಕಟಾಪುರ(Venkatapura) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಿಂಗಾನಗರ ತಾಂಡಾದಲ್ಲಿ ಮನೆ ಕುಸಿದಿದೆ. ಲಿಂಗಾನಗರದ(Linganagara) ಅನುಷಾಬಾಯಿ ಚವ್ಹಾಣ್ ಎಂಬುವವರಿಗೆ ಸೇರಿದ ಮನೆ ಸಂಪೂರ್ಣ ಕುಸಿದಿದ್ದು, ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅನುಷಾಬಾಯಿ ಅವರ ಪತಿ ಬೇರೆ ಮದುವೆ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದು, ಮೂವರು ಹೆಣ್ಣು ಮಕ್ಕಳ ಪೋಷಣೆ ಅನುಷಾಬಾಯಿ ಅವರ ಮೇಲಿದೆ. ಇದೀಗ ಮನೆಯೂ ಕಳೆದುಕೊಂಡ ಅನುಷಾಬಾಯಿ ಕುಟುಂಬ ಅಕ್ಷರಶಃ ಬೀದಿಗೆ ಬಂದಿದೆ. ಇದನ್ನೂ ಓದಿ: ಫ್ಯಾಂಟಸಿ ಕ್ರಿಕೆಟ್‌ನಲ್ಲಿ ಗೆದ್ದ ಅಭಿಮಾನಿಗೆ ಲ್ಯಾಂಬೊರ್ಗಿನಿ ಕಾರು ಗಿಫ್ಟ್ ಕೊಟ್ಟ ರೋಹಿತ್ ಶರ್ಮಾ
ತಾಲೂಕಿನ ಕೆಲವೆಡೆ ರಸ್ತೆಯಲ್ಲಿ ಮರಗಳು ಉರುಳಿ ಬಿದ್ದು, ಸಂಚಾರಕ್ಕೆ ತೊಂದರೆ ಉಂಟಾಯಿತು. ಸಂಬಂಧಪಟ್ಟ ಅಧಿಕಾರಿಗಳು ಮರ ತೆರವುಗೊಳಿಸಿ, ಸಂಚಾರಕ್ಕೆ ಅನುವು ಮಾಡಿಕೊಟ್ಟರು. ವಿದ್ಯುತ್ ಕಂಬಗಳು ಧರೆಗುರುಳಿದರಿಂದ ಗ್ರಾಮಸ್ಥರು ಕತ್ತಲಲ್ಲಿ ಸಮಯ ಕಳೆಯುವಂತಾಯಿತು. ಇದನ್ನೂ ಓದಿ: PSI ಗಂಡ ಚೆನ್ನಾಗಿ ನೋಡಿಕೊಳ್ತಿಲ್ಲ ಅಂತಾ ಪತ್ನಿ ನೇಣಿಗೆ ಶರಣು!
ಸೋಮವಾರ ಚಿಂಚೋಳಿಯಲ್ಲಿ 40.4 ಮಿ.ಮೀ, ಕುಂಚಾವರಂ 50.4, ಐನಾಪುರ 7.7, ಸುಲೇಪೇಟ 8.8, ಚಿಮ್ಮನಚೋಡ 4, ಕೋಡ್ಲಿ 24.2 ಮಿ.ಮೀ ಮಳೆಯಾಗಿದೆ. ಮಳೆಯಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ತಿಳಿಸಿದ್ದಾರೆ.