ರಾಮನಗರ: ಶಾರ್ಟ್ ಸರ್ಕ್ಯೂಟ್‌ನಿಂದಾಗಿ (Short Circuit) ಮನೆ ಹೊತ್ತಿ ಉರಿದಿರುವ ಘಟನೆ ರಾಮನಗರ (Ramanagara) ತಾಲೂಕಿನ ವಡೇರಹಳ್ಳಿ (Vaderahalli) ಗ್ರಾಮದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
ವಡೇರಹಳ್ಳಿ ಗ್ರಾಮದ ಗುರು ಎಂಬವರಿಗೆ ಸೇರಿದ ಮನೆಯಲ್ಲಿ ಎಸಿಯಿಂದ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಕಾಣಿಸಿಕೊಂಡಿದೆ. ನೋಡನೋಡುತ್ತಿದ್ದಂತೆ ಇಡೀ ಮನೆಗೆ ಬೆಂಕಿ ಆವರಿಸಿ ಗೃಹೋಪಯೋಗಿ ವಸ್ತುಗಳು ಸಂಪೂರ್ಣ ಸುಟ್ಟುಕರಕಲಾಗಿವೆ. ಇದನ್ನೂ ಓದಿ: ಜಮೀರ್ ಸುಮ್ಮನಿದ್ರೆ ಅದೇ ದೊಡ್ಡ ಸೇವೆ: ಜೋಶಿ
ಮನೆಯಲ್ಲಿ ಎಲ್ಲರೂ ಮಲಗಿದ್ದ ವೇಳೆ ಘಟನೆ ನಡೆದಿದ್ದು, ಬೆಂಕಿ ಶಾಖ ತಟ್ಟುತ್ತಿದ್ದಂತೆಯೇ ಮನೆ ಮಂದಿ ಹೊರಗೆ ಓಡಿಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಶಿವಾನಂದ ಪಾಟೀಲ್ ಅವರೇ ನನಗೆ ಹೇಳೋಕೆ ನೀವ್ಯಾರು? – ಎಂ.ಬಿ ಪಾಟೀಲ್ ಗರಂ