ಬೆಂಗಳೂರು: ಸ್ವಾಗತಕಾರನೊಬ್ಬನು 2.4 ಲಕ್ಷ ರೂ. ಹಣವನ್ನು ಹೋಟೆಲ್ ಮಾಲೀಕರೊಬ್ಬರಿಗೆ ವಂಚಿಸಿ, ಪರಾರಿಯಾದ ಘಟನೆ ಜಯನಗರದಲ್ಲಿ ನಡೆದಿದೆ.
ಮೊರ್ನಾಕ್ ಇಂಟರ್ ನ್ಯಾಷನಲ್ ಹೋಟೆಲ್‍ನಲ್ಲಿ ಕೆಲಸ ಮಾಡುತ್ತಿದ್ದ ಜಾಬಿರ್ ಹುಸೇನ್ ಮೂಲತಃ ಅಸ್ಸಾಂ ರಾಜ್ಯದವನಾಗಿದ್ದಾನೆ. ಜಾಬೀರ್ ಮೂರು ವರ್ಷಗಳಿಂದ ಅದೇ ಹೋಟೆಲ್‍ನಲ್ಲಿ ಕೆಲಸ ಮಾಡಿಕೊಂಡಿದ್ದ. ಇದನ್ನೂ ಓದಿ: ಶಕ್ತಿ ಸ್ವರೂಪಿಣಿ ದೇವಿಯು ಅಪಾರ ದ್ವೇಷದಿಂದ ಕೂಡಿದ ಬಿಜೆಪಿ ನಾಯಕರ ಆತ್ಮವನ್ನು ಶುದ್ಧೀಕರಿಸಲಿ: ಸುರ್ಜೇವಾಲಾ
ಹೋಟೆಲ್‍ಗೆ ಬರುತ್ತಿದ್ದ ಗ್ರಾಹಕರಿಗೆ ಹೋಟೆಲ್ ಬ್ಯಾಂಕ್ ಖಾತೆ ಕೊಡುವುದು ಬಿಟ್ಟು ತನ್ನ ಖಾತೆ ನೀಡಿ ಹಣ ಹಾಕಿಸಿಕೊಳ್ಳುತ್ತಿದ್ದ. ಬಳಿಕ ಕಲೆಕ್ಷನ್ ಆಗಿದ್ದ 2.40 ಲಕ್ಷ ರೂ. ಹಣವನ್ನು ಮಾಲೀಕನಿಗೆ ನೀಡದೇ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಮದ್ಯದ ಬಾಟಲಿಯಿಂದ ಸಿಕ್ಕಿ ಬಿದ್ರು 2 ಕೋಟಿ ಕದ್ದ ಖದೀಮರು
ಏಪ್ರಿಲ್ 3 ರಂದು ಬೆಳಗ್ಗೆ ಟೀ ಕುಡಿದು ಬರುತ್ತೇನೆ ಅಂತ ಹೊರಗಡೆ ಬಂದು ಎಸ್ಕೇಪ್ ಆಗಿದ್ದಾನೆ. ಬಳಿಕ ಆತನ ನಂಬರಿಗೆ ಕರೆ ಮಾಡಿದರೆ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಈ ವೇಳೆ ಹೋಟೆಲ್ ಮಾಲೀಕ ಹರೀಶ್ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೋಲಿಸರು ಆರೋಪಿಗಾಗಿ ಬಲೆ ಬಿಸಿದ್ದಾರೆ.