ಬೆಂಗಳೂರು: ಅಡುಗೆ ಎಣ್ಣೆ ಮೇಲೆ ಆಹಾರ ಮತ್ತು ಸುರಕ್ಷತಾ ಇಲಾಖೆ ಮೆಗಾ ಅಪರೇಷನ್ ಮಾಡಿದೆ. ಬೇಕರಿ, ಹೋಟೆಲ್‌ನಲ್ಲಿ ಎಣ್ಣೆ ಮರುಬಳಕೆ ಮಾಡುವಂತಿಲ್ಲ ಅಂತಾ ಈಗಾಗಲೇ ಇಲಾಖೆ ಆದೇಶ ಮಾಡಿದೆ. ಇದ್ರ ಬೆನ್ನಲ್ಲೇ ಈಗ ಹೋಟೆಲ್‌ನವರು ಅಡುಗೆ ಎಣ್ಣೆಯ ಫ್ಯಾಟ್ ಚೆಕ್ಕಿಂಗ್‌ಗೆ ಮುಂದಾಗಿದ್ದಾರೆ. ಹೀಗಾಗಿ ಡಿವೈಸ್ ಖರೀದಿ ಮಾಡಲು ಮುಂದಾಗಿದ್ದು ಈ ಡಿವೈಸ್ ಮೂಲಕ ಅಡುಗೆ ಎಣ್ಣೆಯ ಗುಣಮಟ್ಟ ಪರೀಕ್ಷಿಸಬಹುದಾಗಿದೆ.
ಆದ್ರೆ ಈ ಡಿವೈಸ್ ಬೆಲೆ ಬರೋಬ್ಬರಿ 50 ಸಾವಿರ ರೂ. ಇದೆ. ಆದ್ದರಿಂದ ಮಾಲೀಕರು ಕಳವಳಕ್ಕೀಡಾಗಿದ್ದಾರೆ. ಸದ್ಯ ಆಹಾರ ಇಲಾಖೆ ಜೊತೆ ಈ ಬಗ್ಗೆ ಮಾತುಕತೆ ನಡೆಸಲು ನಿರ್ಧರಿಸಿದ್ದು ಕಾರ್ಯಾಗಾರ ನಡೆಸುವಂತೆಯೂ ಮನವಿ ಮಾಡಿದ್ದಾರೆ. ಜೊತೆಗೆ ಕಡಿಮೆ ದರದಲ್ಲಿ ಡಿವೈಸ್ ಖರೀದಿ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಲು ತಯಾರಾಗಿದ್ದಾರೆ. ಇದನ್ನೂ ಓದಿ: ಚೀನಾ ಉದ್ಯಮಿಯಿಂದ 100 ಕೋಟಿ ರೂ. ಬಂಡವಾಳ ಹೂಡಿಕೆ
ಇನ್ನೂ ಇಲಾಖೆಯ ಆದೇಶವನ್ನ ಪಾಲಿಸೋದು ಜನರ ಆರೋಗ್ಯದ ದೃಷ್ಟಿಯಿಂದ ಉತ್ತಮ. ಆದ್ರೆ ಕೆಲ ಗೊಂದಲವಿದ್ದು ಇದನ್ನು ಬಗೆಹರಿಸಿಕೊಳ್ಳುತ್ತೇವೆ. ಗ್ರಾಹಕರಿಗೆ ಗುಣಮಟ್ಟದ ಆಹಾರ ನೀಡೋದೇ ನಮ್ಮ ಉದ್ದೇಶ ಅಂದಿದ್ದಾರೆ. ಇದನ್ನೂ ಓದಿ: ಹಿರಿಯ ಐಪಿಎಸ್ ಅಧಿಕಾರಿ ಬಿ.ದಯಾನಂದ್, ಪೊಲೀಸ್ ಆಯುಕ್ತ ಸೀಮಂತ್ ಕುಮಾರ್‌ಗೆ ರಾಷ್ಟ್ರಪತಿ ಪದಕ
ಸರ್ಕಾರವೇನೂ ಆದೇಶ ಮಾಡಿದೆ. ಇದ್ರ ಅನುಷ್ಟಾನ ಸಮರ್ಪಕವಾಗಿ ಆಗುತ್ತಿದ್ಯಾ ಏನು ಅನ್ನೋದ್ರ ಬಗ್ಗೆಯೂ ಇಲಾಖೆ ಗಮನ ಹರಿಸಬೇಕಿದೆ. ಇದನ್ನೂ ಓದಿ: ದೇಶದಲ್ಲಿ ಕರ್ನಾಟಕವೊಂದು ಆರ್ಥಿಕ ದೇಶ: ಬ್ರಿಡ್ಜ್ ಟು ಬೆಂಗಳೂರು ಕಾರ್ಯಕ್ರಮದಲ್ಲಿ ಸಿಎಂ ಅಭಿಪ್ರಾಯ