ಉಡುಪಿ| ಹೋಟೆಲ್ ಬಾಣಸಿಗ ಭೀಕರ ಹತ್ಯೆ – ಬಿಯರ್ ಬಾಟಲಿ ಗಾಜಿನಿಂದ ಕತ್ತು ಸೀಳಿ ಕೊಲೆ

Public TV
1 Min Read
udupi murder

ಉಡುಪಿ: ಹೋಟೆಲ್ ಕಾರ್ಮಿಕರೊಬ್ಬರನ್ನು ಬಿಯರ್ ಬಾಟಲಿ ಗಾಜಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ಮಣಿಪಾಲ ಅನಂತ ಕಲ್ಯಾಣನಗರ ಸಮೀಪ ಮೃತದೇಹ ಬೆಳಗ್ಗೆ ಕಂಡುಬಂದಿದ್ದು, ಮೃತರನ್ನು ಕೇರಳ ಕಾಸರಗೋಡಿನ ಶ್ರೀಧರ್ ನಾಯಕ ಎಂದು ಗುರುತಿಸಲಾಗಿದೆ.

ಮಣಿಪಾಲದ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದು, ಬೆಳಗ್ಗೆ ಬಾಡಿಗೆ ಮನೆಯಿಂದ ಹೋಟೆಲ್‌ಗೆ ಹೋಗುತ್ತಿದ್ದರು ಎಂಬ ಮಾಹಿತಿಯಿದೆ. ದುಷ್ಕರ್ಮಿಗಳು ಕುತ್ತಿಗೆಯನ್ನು ಬಿಯರ್ ಬಾಟಲಿಯಿಂದ ಕೊಯ್ದು ಹತ್ಯೆ ಮಾಡಿರುವುದು ಎಂದು ಶಂಕಿಸಲಾಗಿದೆ.

ಕೊಲೆ ಯಾವ ಕಾರಣಕ್ಕೆ ನಡೆದಿದೆ ಮತ್ತು ಯಾರು ಮಾಡಿದ್ದಾರೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಾಗಿದೆ. ಸ್ಥಳಕ್ಕೆ ಉಡುಪಿ ಎಸ್‌ಪಿ ಡಾ. ಕೆ.ಅರುಣ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಣಿಪಾಲ ಇನ್‌ಸ್ಪೆಕ್ಟರ್ ದೇವರಾಜ್ ನೇತೃತ್ವದಲ್ಲಿ ತನಿಖೆ ನಡೆಸುತ್ತಿದ್ದು, ಆರೋಪಿಗಳ ಪತ್ತೆಗೆ ಬೆನ್ನುಬಿದ್ದಿದ್ದಾರೆ. ಸ್ಥಳೀಯರ, ಪರಿಚಯಸ್ಥರ ವಿಚಾರಣೆ ನಡೆಯುತ್ತಿದೆ.

Share This Article