ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ, ನಟಿಸುತ್ತಿರುವ ‘ಯುಐ’ ಸಿನಿಮಾಗೆ ಸದ್ದಿಲ್ಲದೇ ಎಂಟ್ರಿ ಕೊಟ್ಟಿದ್ದಾರೆ ಹಾಟ್ ತಾರೆ ಸನ್ನಿ ಲಿಯೋನ್. ಈ ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರವೊಂದನ್ನು ಮಾಡಿದ್ದು, ಅವರ ಭಾಗದ ಶೂಟಿಂಗ್ ಕೂಡ ಮುಗಿದಿದೆ ಎನ್ನಲಾಗುತ್ತಿದೆ. ಈ ಸಿನಿಮಾದ ಮೂಲಕ ಮತ್ತೆ ಸನ್ನಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.
ಸನ್ನಿ ಲಿಯೋನ್ ಭಾಗದ ಶೂಟಿಂಗ್ ಬೆಂಗಳೂರಿನಲ್ಲಿ ನಡೆದಿದ್ದು, ಯುಐನಲ್ಲಿ ಪ್ರಮುಖ ಪಾತ್ರವನ್ನೇ ಅವರು ನಿರ್ವಹಿಸಿದ್ದಾರಂತೆ. ಈವರೆಗೂ ಕನ್ನಡ ಸಿನಿಮಾ ರಂಗದಲ್ಲಿ ಸನ್ನಿ ಕೇವಲ ಹಾಡಿನಲ್ಲಿ ಮಾತ್ರ ಬಂದು ಹೋಗಿದ್ದು, ಈ ಸಿನಿಮಾದಲ್ಲಿ ತುಂಬಾ ಹೊತ್ತು ಸ್ಕ್ರೀನ್ ಮೇಲೆ ಇರುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಕುರಿತಾಗಿ ಸಿನಿಮಾ ರಂಗ ಯಾವುದೇ ಮಾಹಿತಿ ನೀಡಿಲ್ಲ.
ಹಲವು ವರ್ಷಗಳ ನಂತರ ಉಪೇಂದ್ರ ಮತ್ತೆ ನಿರ್ದೇಶನ ಮಾಡುತ್ತಿದ್ದು, ಅಪರೂಪದ ಕಥೆಯೊಂದನ್ನು ಈ ಚಿತ್ರಕ್ಕಾಗಿ ಹೆಣೆದಿದ್ದಾರಂತೆ. ನೂರಕ್ಕೂ ಹೆಚ್ಚು ಕಲಾವಿದರು ಈ ಸಿನಿಮಾದಲ್ಲಿ ಇರುವುದು ಮತ್ತೊಂದು ವಿಶೇಷ. ಉಪೇಂದ್ರ ಪಾತ್ರ ಕೂಡ ಹೊಸ ರೀತಿಯಲ್ಲಿ ಇದ್ದು, ಹೆಸರಾಂತ ಅನೇಕ ಕಲಾವಿದರು ತಾರಾಗಣದಲ್ಲಿ ಇದ್ದಾರೆ. ಈಗಾಗಲೇ ಸಿನಿಮಾದ ಪೋಸ್ಟರ್, ಫಸ್ಟ್ ಲುಕ್ ಕೂಡ ರಿಲೀಸ್ ಆಗಿದ್ದು, ಸಾಕಷ್ಟು ಕುತೂಹಲ ಕೂಡ ಮೂಡಿದೆ. ಇದನ್ನೂ ಓದಿ:ಪ್ರಭಾಸ್ ಲವ್ ಲೈಫ್ ಬಗ್ಗೆ ಸುಳಿವು ಕೊಟ್ಟ ವರುಣ್ ಧವನ್
ಸನ್ನಿ ಕನ್ನಡದಲ್ಲಿ ಹಲವಾರು ಹಾಡುಗಳಲ್ಲಿ ಕಾಣಿಸಿಕೊಂಡರೂ, ಜೋಗಿ ಪ್ರೇಮ್ ಸಿನಿಮಾದ ಶೇಷಮ್ಮ ಹಾಡಿನ ಮೂಲಕ ಫೇಮಸ್ ಆಗಿದ್ದರು. ಯುಐ ಬಂದ ನಂತರ ಈ ಚಿತ್ರದ ಮೂಲಕ ಮತ್ತಷ್ಟು ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಶೂಟಿಂಗ್ ಮುಗಿಸಿಕೊಂಡು, ಸನ್ನಿ ಅಭಿಮಾನಿಗಳಿಗೆ ಕುತೂಹಲ ಮೂಡಿಸಿದ್ದಾರೆ.