6 ರಿಂದ 12 ವರ್ಷ ವಯಸ್ಸಿನ 21 ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಹಾಸ್ಟೆಲ್ ವಾರ್ಡನ್ ಯುಮ್ಕೆನ್ ಬಾಗ್ರಾ ಎಂಬಾತ ವಿಶೇಷ ಪೋಕ್ಸೋ ನ್ಯಾಯಾಲಯದಿಂದ ಜಾಮೀನಿನ ಮೇಲೆ ಹೊರಗಿದ್ದಾನೆ. ಈ ವಿಚಾರ ಮುಖ್ಯ ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರ ಪೀಠದ ಗಮನಕ್ಕೆ ಬಂದಿದ್ದು ಕೆಳ ಹಂತದ ನ್ಯಾಯಾಲಯ ನೀಡಿದ್ದ ಜಾಮೀನನ್ನು ರದ್ದುಗೊಳಿಸಿ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ. ಇದನ್ನೂ ಓದಿ: ಮುತ್ತು ಕೊಡುವ ವೇಳೆ ನೆನಪಾದ ಸೇಡು – ಗಂಡನ ನಾಲಿಗೆಗೆ ಹಲ್ಲಿನಲ್ಲೇ ಕತ್ತರಿ
ಆರೋಪಿ 2019 ರಿಂದ 2022ರ ನಡುವೆ 6 ರಿಂದ 12 ವರ್ಷ ವಯಸ್ಸಿನ 21 ಮಕ್ಕಳ ಮೇಲೆ (15 ಬಾಲಕಿಯರು ಮತ್ತು 6 ಬಾಲಕರು) ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಹೆಚ್ಚಿನ ಮಕ್ಕಳ ವೈದ್ಯಕೀಯ ವರದಿಗಳಲ್ಲಿ ದೌರ್ಜನ್ಯ ಎಸಗಿರುವುದು ದೃಢಪಟ್ಟಿದೆ. ಆದರೂ ಫೆಬ್ರವರಿ 23 ರ ಜಾಮೀನು ಆದೇಶವನ್ನು ಪರಿಶೀಲಿಸಿದಾಗ ವಿಶೇಷ ಪೋಕ್ಸೋ ನ್ಯಾಯಾಲಯವು 2012ರ ಪೋಕ್ಸೊ ಕಾಯಿದೆಯ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಡ್ಡಾಯ ನಿಬಂಧನೆಗಳನ್ನು ನಿರ್ಲಕ್ಷಿಸಿದೆ ಎಂದು ಹೈಕೋರ್ಟ್ ಚಾಟಿ ಬೀಸಿದೆ. ಅಲ್ಲದೇ ಅರುಣಾಚಲ ಅಡ್ವೊಕೇಟ್ ಜನರಲ್ ಕುಟುಂಬದ ಸದಸ್ಯರಿಗೆ ಸಂಪೂರ್ಣ ಭದ್ರತೆ ನೀಡುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿದೆ.
Advertisement
Advertisement
ಆರೋಪಿ ಸುಮಾರು 3 ವರ್ಷಗಳ ಅವಧಿಯಲ್ಲಿ ಅಮಾನುಷ ರೀತಿಯಲ್ಲಿ ವರ್ತಿಸಿ ಚಿಕ್ಕ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇಂತಹ ಗಂಭೀರ ವಿಚಾರವಿದ್ದಾಗ ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಕಾಯಬೇಕಾಗಿಲ್ಲ. ವಿಚಾರಣೆಗಳನ್ನು ಪ್ರತ್ಯೇಕಿಸುವ ಮೂಲಕವೂ ವಿಚಾರಣೆಯನ್ನು ಮುಂದುವರಿಸಬಹುದು ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.
Advertisement
Advertisement
ವಿಶೇಷ ನ್ಯಾಯಾಧೀಶರು ನೀಡಿದ ಆದೇಶವನ್ನು ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿ ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಿಜೋರಾಂ ಮತ್ತು ಅಸ್ಸಾಂನ ಪೋಕ್ಸೋ (POCSO) ನ್ಯಾಯಾಲಯಗಳಲ್ಲಿ ನಿಯೋಜಿಸಲಾದ ವಿಶೇಷ ನ್ಯಾಯಾಧೀಶರನ್ನು ಸಂವೇದನಾಶೀಲಗೊಳಿಸುವ ತುರ್ತು ಅಗತ್ಯವಿದೆ ಎಂದು ಪೀಠ ಆದೇಶದಲ್ಲಿ ಉಲ್ಲೇಖಿಸಿದೆ. ಅಲ್ಲದೇ ನ್ಯಾಯಾಂಗ ಅಧಿಕಾರಿಗಳಿಗೆ ಶೀಘ್ರದಲ್ಲೇ ತರಬೇತಿ ಆಯೋಜಿಸಲಿರುವುದಾಗಿ ನ್ಯಾಯಾಲಯ ತಿಳಿಸಿದೆ. ಇದನ್ನೂ ಓದಿ: 5 ವರ್ಷಗಳಲ್ಲಿ ಕಾನೂನು ಹೋರಾಟಕ್ಕೆ ಕೇಂದ್ರ ಖರ್ಚು ಮಾಡಿದ್ದೆಷ್ಟು?
Web Stories