– ಮಹಿಳಾ ಭದ್ರತಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ
– ಕೆಲಸದಿಂದ ತೆಗೆದ ಮೇಲೆ ದೂರು ದಾಖಲು
ಕಲಬುರಗಿ: ಇಎಸ್‍ಐ ಆಸ್ಪತ್ರೆಯ ಡೀನ್ ಸೆಕ್ಯೂರಿಟಿ ಗಾರ್ಡ್ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕಲಬುರಗಿಯ ಇಎಸ್‍ಐ ಆಸ್ಪತ್ರೆಯ ಡೀನ್ ಡಾ. ನಾಗರಾಜ್, ವಿದ್ಯಾರ್ಥಿಗಳಿಗೆ ಪಾಠ ಹೇಳುವ ಬದಲು ಬಿಹಾರ ಮೂಲದ ಇಲ್ಲಿನ ಸೆಕ್ಯೂರಿಟಿ ಗಾರ್ಡ್‌ಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ನೀನು ಇಲ್ಲಿ ಕೆಲಸ ಮಾಡಬೇಕು ಎಂದರೆ, ನನ್ನ ಜೊತೆ ಸಹಕರಿಸಬೇಕು ಇಲ್ಲ ಕೆಲಸದಿಂದ ತೆಗೆಯುವುದ್ದಾಗಿ ಹೇಳಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ನೊಂದ ಮಹಿಳೆ ಈ ಕುರಿತು ಕಲಬುರಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ ಈ ವೈದ್ಯ ನಾಗರಾಜ್ ಕನ್ನಡದ ಖ್ಯಾತ ನಟನ ಸಹೋದರಾನಾಗಿದ್ದು, ಹೀಗಾಗಿ ಪೊಲೀಸರು ಬಂಧಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ಡಾ. ನಾಗರಾಜ್ ಸಂಪರ್ಕ ಮಾಡಿದರೆ, ನಾನು ರಿಯಾಕ್ಟ್ ಮಾಡಲ್ಲ ಎಂದು ಹೇಳಿ ಕಾಲ್ ಕಟ್ ಮಾಡಿದ್ದಾರೆ. ಸಂತ್ರಸ್ತೆ ಕೆಲಸದಿಂದ ತೆಗೆದ ಮೇಲೆ ಡೀನ್ ಡಾ.ನಾಗರಾಜ್ ಮೇಲೆ ಕಿರುಕುಳದ ಆರೋಪ ಮಾಡಿದ್ದು ಹಲವು ಅನುಮಾನ ಮೂಡಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸಂತ್ರಸ್ತೆ, ನಾನು ಬಿಹಾರ ಮೂಲದವಳಾಗಿದ್ದು, 2017ರಿಂದ ಕಲಬುರಗಿ ಇಎಸ್‍ಐ ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದೇನೆ. ಇಲ್ಲಿಗೆ ಡಾ. ನಾಗರಾಜ್ ಡೀನ್ ಆಗಿ 2017-18ರಲ್ಲಿ ಬಂದಿದ್ದಾರೆ. ಆಗ ಪಿಆರ್ ಕಟ್ಟಡದಲ್ಲಿ ನಾನು ರಾತ್ರಿ ಪಾಳೆಯದಲ್ಲಿ ಕೆಲಸ ಮಾಡುತ್ತಿದ್ದೆ. ಆಗ ಇವರು ಅಲ್ಲಿಗೆ ಬಂದು ನನಗೆ ಅನೈತಿಕ ಸಂಬಂಧ ಮಾಡುವಂತೆ ಹೇಳುತ್ತಿದ್ದರು. ಅದಕ್ಕೆ ನಾನು ಒಪಲಿಲ್ಲ ಹೀಗಾಗಿ ಮೇ 15ಕ್ಕೆ ನೌಕರಿಯಿಂದ ತೆಗೆದಿದ್ದಾರೆ.
ನಾಗರಾಜ್ ನನಗೆ ಅನೈತಿಕ ಸಂಬಂಧ ಮಾಡುವಂತೆ ಬೆದರಿಕೆ ಹಾಕುತ್ತಿದ್ದರು. ಆದರೆ ನಾನು ಒಪ್ಪದೇ ಇಲ್ಲಿ ಹೊಟ್ಟೆ ಪಾಡಿಗಾಗಿ ಕೆಲಸ ಮಾಡಲು ಇಲ್ಲಿಗೆ ಬಂದಿದ್ದೇನೆ. ಹೀಗಾಗಿ ಇದೀಗ ಅವರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದೇನೆ. ಆದರೆ ಇಲ್ಲಿಯವರೆಗೆ ಯಾವುದೇ ಫಲಿತಾಂಶ ಬಂದಿಲ್ಲ. ಹೀಗಾಗಿ ನ್ಯಾಯ ಯಾವಾಗ ಸಿಗುತ್ತೆ ಎಲ್ಲಿ ಸಿಗುತ್ತೆ ಎಂದು ಗೊತ್ತಾಗುತ್ತಿಲ್ಲ. ಮಹಿಳೆಯರ ಮೇಲೆ ಎಲ್ಲಿಯವರೆಗೆ ಅತ್ಯಾಚಾರ ನಡೆಯುತ್ತೆ, ಏಕೆಂದರೆ ನಾವು ಬಿಹಾರದವರಾಗಿದ್ದು, ತಪ್ಪು ಕೆಲಸ ಮಾಡಲು ಬಂದಿಲ್ಲ ಎಂದು ಸಂತ್ರಸ್ತೆ ದೂರಿದ್ದಾರೆ.