ಚಿತ್ರದುರ್ಗ: ಹೊಸದುರ್ಗ ತಾಲೂಕಿನಲ್ಲಿ ಬಲವಂತದ ಮತಾಂತರವಾಗಿಲ್ಲ ಎಂದು ವರದಿ ನೀಡಿರುವ ತಹಶೀಲ್ದಾರ್ ತಿಪ್ಪೇಸ್ವಾಮಿಯನ್ನು ರಾಜ್ಯ ಸರ್ಕಾರ ಎತ್ತಂಗಡಿ ಮಾಡಿದೆ.
ಕಳೆದ ವಿಧಾನಸಭೆ ಅಧಿವೇಶನದಲ್ಲಿ ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರು, ಸ್ವತಃ ಅವರ ತಾಯಿ ಸೇರಿದಂತೆ ಸುಮಾರು 140 ಕ್ಕೂ ಅಧಿಕ ಹಿಂದೂಗಳು, ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದಾರೆ. ಅವರಿಗೆ ಇಲ್ಲಸಲ್ಲದ ಆಮಿಷವೊಡ್ಡಿ, ಒತ್ತಾಯಪೂರ್ವಕವಾಗಿ ಕ್ರೈಸ್ತಮಿಷಿನರಿಗಳು ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದನ್ನೂ ಓದಿ: ಬಲವಂತದ ಮತಾಂತರ ಜಾಮೀನುರಹಿತ ಅಪರಾಧ
ಇನ್ನು ಸರ್ಕಾರದ ಆದೇಶದಂತೆ ಸ್ಥಳ ಪರಿಶೀಲನೆ ನಡೆಸಿದ್ದ ಹೊಸದುರ್ಗದ ತಹಶೀಲ್ದಾರ್ ತಿಪ್ಪೇಸ್ವಾಮಿ ಅವರು, ನವೆಂಬರ್ 30 ರಂದು ಚಿತ್ರದುರ್ಗ ಜಿಲ್ಲಾಧಿಕಾರಿ ಮೂಲಕ ಪರಿಶೀಲನೆ ನಡೆಸಿದ್ದು, ತಾಲೂಕಿನಾದ್ಯಂತ ಬಲವಂತದ ಮತಾಂತರವಾಗಿಲ್ಲ. ಅವರೆಲ್ಲರೂ ಸ್ವಇಚ್ಛೆಯಿಂದ ಪೂಜಾ ಕೈಂಕರ್ಯ ಹಾಗೂ ಪ್ರಾರ್ಥನೆ ಸಲ್ಲಿಸುತಿದ್ದಾರೆಂದು ಸರ್ಕಾರಕ್ಕೆ ವರದಿ ನೀಡಿದ್ದರು. ಇದರಿಂದ ಆಕ್ರೋಶಗೊಂಡ ಶಾಸಕ ಗೂಳಿಹಟ್ಟಿ ಶೇಖರ್ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿ ತಹಶೀಲ್ದಾರ್‌ಗೆ ಬಿಗ್ ಶಾಕ್ ನೀಡಿದ್ದಾರೆ.
ತಹಶೀಲ್ದಾರ್‌ಗೆ ಸ್ಥಳ ನಿಯೋಜನೆ ಮಾಡದೇ ತಿಪ್ಪೇಸ್ವಾಮಿ ಅವರನ್ನು ಎತ್ತಂಗಡಿ ಮಾಡಿಸಿದ್ದಾರೆ. ಹೊಸದುರ್ಗಕ್ಕೆ ನೂತನ ತಹಶೀಲ್ದಾರ್ ಆಗಿ ಮಲ್ಲಿಕಾರ್ಜುನ್ ಅವರನ್ನು ನಿಯೋಜಿಸಲಾಗಿದೆ. ವರ್ಗಾವಾಗಿರುವ ತಹಶೀಲ್ದಾರ್ ತಿಪ್ಪೇಸ್ವಾಮಿ ಅವರನ್ನು ಹೊಸದುರ್ಗದಲ್ಲಿಯೇ ಮುಂದುವರಿಸುವಂತೆ ಸಿಎಂಗೆ ಪತ್ರ ಬರೆದು ಹೊಸದುರ್ಗ ಶಾಸಕ ಶೇಖರ್ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಅನ್ಯಕೋಮಿನ ಯುವಕನ ಜೊತೆ ಹಿಂದೂ ಯುವತಿ ಲಾಡ್ಜ್‌ನಲ್ಲಿ ಪತ್ತೆ