ಶಿವಮೊಗ್ಗ: ರಾಜ್ಯ ಸರ್ಕಾರ ಈ ಬಾರಿ ಬೆಳಗಾವಿ ಅಧಿವೇಶನದಲ್ಲಿಯೇ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಹೊರಟಿದೆ. ಇದರ ನಡುವೆಯೇ ಶಿವಮೊಗ್ಗದ ಹೊರ ವಲಯದ ಲಾಡ್ಜ್‌ವೊಂದರಲ್ಲಿ ಹಿಂದೂ ಯುವತಿಯೊಬ್ಬಳು ಅನ್ಯಕೋಮಿನ ಯುವಕನ ಜೊತೆ ಸಿಕ್ಕಿ ಬಿದ್ದಿರುವುದು ಬಜರಂಗದಳ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
Advertisement
ಶಿವಮೊಗ್ಗದ ತೇವರ ಚಟ್ನಹಳ್ಳಿಯ ಲಾಡ್ಜ್‌ವೊಂದಕ್ಕೆ ದಾವಣಗೆರೆ ಮೂಲದ ಹಿಂದೂ ಯುವತಿ ಹಾಗೂ ದಾವಣಗೆರೆ ಜಿಲ್ಲೆಯ ಅನ್ಯಕೋಮಿನ ಯುವಕ ಬಂದಿದ್ದಾರೆ. ಇದನ್ನು ಸ್ಥಳೀಯ ಹಿಂದೂ ಯುವಕರು ಗಮನಿಸಿ ಬಜರಂಗದಳ ಕಾರ್ಯಕರ್ತರ ಗಮನಕ್ಕೆ ತಂದಿದ್ದಾರೆ. ತಕ್ಷಣ ಪೊಲೀಸರ ಜೊತೆ ಲಾಡ್ಜ್‌ಗೆ ಆಗಮಿಸಿದ ಬಜರಂಗದಳ ಕಾರ್ಯಕರ್ತರಿಗೆ ಲಾಡ್ಜ್ ವ್ಯವಸ್ಥಾಪಕ ನಮ್ಮಲ್ಲಿ ಈ ರೀತಿಯ ಯುವಕ – ಯುವತಿ ಯಾರು ಇಲ್ಲ ಎಂದು ತಿಳಿಸಿದ್ದಾನೆ. ಆದರೆ ಅನುಮಾನಗೊಂಡ ಬಜರಂಗದಳ ಕಾರ್ಯಕರ್ತರು ಕೊಠಡಿಯನ್ನು ತೆರೆದು ನೋಡಿದಾಗ ಹಿಂದೂ ಯುವತಿ, ಅನ್ಯಕೋಮಿನ ಯುವಕನ ಜೊತೆ ಇರುವುದು ಪತ್ತೆಯಾಗಿದೆ. ಇದನ್ನೂ ಓದಿ: ಹಿಂದೂ ಯುವತಿಯರ ಕೈಗೆ ತಲ್ವಾರ್ ಕೊಡ್ಬೇಕು, ಅನ್ಯಧರ್ಮೀಯರು ಕಣ್ಣೆತ್ತಿ ನೋಡಿದ್ರೆ ತಲೆ ಕಡೀಬೇಕು: ಸಾಧ್ವಿ ಸರಸ್ವತಿ
Advertisement
Advertisement
ನಂತರ ಯುವಕ ಹಾಗೂ ಯುವತಿಯನ್ನು ಪೊಲೀಸರ ವಶಕ್ಕೆ ನೀಡಿ, ಲಾಡ್ಜ್ ಬಂದ್ ಮಾಡಿಸಿ ಬಜರಂಗದಳ ಕಾರ್ಯಕರ್ತರು ವಾಪಸ್ ತೆರಳಿದ್ದರು. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ ಯುವತಿಯನ್ನು ಆಕೆಯ ಪೋಷಕರ ಜೊತೆ ಕಳುಹಿಸಿಕೊಟ್ಟಿದ್ದರು. ಯುವಕನನ್ನು ಕೂಡ ಬಿಟ್ಟು ಕಳುಹಿಸಿದ್ದಾರೆ. ಅಲ್ಲದೇ ಲಾಡ್ಜ್ ಮಾಲೀಕ ಮತ್ತೆ ಲಾಡ್ಜ್ ತೆರೆದುಕೊಂಡಿದ್ದ. ಇದರಿಂದ ಮತ್ತೆ ಕೆರಳಿದ ಬಜರಂಗದಳ ಕಾರ್ಯಕರ್ತರು ಲಾಡ್ಜ್ ಮುಂಭಾಗ ಪ್ರತಿಭಟನೆ ನಡೆಸಿದರು.ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಬಳಿಕ ಲವ್ ಜಿಹಾದ್ ನಿಷೇಧ ಕಾಯ್ದೆ: ಸುನಿಲ್ ಕುಮಾರ್
Advertisement
ಶಿವಮೊಗ್ಗದ ಹೊರವಲಯದ ಲಾಡ್ಜ್‌ಗಳು ಮತಾಂತರ ಕೇಂದ್ರಗಳಾಗುತ್ತಿವೆ. ಯಾವುದೇ ದಾಖಲಾತಿ ಪಡೆಯದೇ ರೂಂ ನೀಡುತ್ತಿವೆ. ಈ ಕೂಡಲೇ ಅನೈತಿಕ ಚಟುವಟಿಕೆಯಲ್ಲಿ ತೊಡಗಿರುವ ಲಾಡ್ಜ್‌ಗಳನ್ನು ಬಂದ್ ಮಾಡಿಸುವಂತೆ ಬಜರಂಗದಳ ಕಾರ್ಯಕರ್ತರು ಆಗ್ರಹಿಸಿದ್ದಾರೆ.