ಊಟಕ್ಕಾಗಲಿ, ಇಡ್ಲಿ, ದೋಸೆಗಾಗಲಿ ಯಾವುದಕ್ಕೂ ಹೊಂದಿಕೊಳ್ಳುತ್ತದೆ ಈ ಹುರುಳಿ ಚಟ್ನಿ ಪುಡಿ. ಮುಖ್ಯವಾಗಿ ಕೆಲಸಕ್ಕೆ ಹೋಗೋ ಮಹಿಳೆಯರು ಬೆಳಗ್ಗೆ ತಿಂಡಿ ಮಾಡಿದಾಗಲೆಲ್ಲಾ ಚಟ್ನಿ ಅಥವಾ ಸಾಂಬಾರ್ ತಯಾರಿಸಲು ಸಮಯವಿಲ್ಲ ಎಂದಾದರೆ ಈ ಚಟ್ನಿ ಪುಡಿ ಖಂಡಿತಾ ನಿಮ್ಮ ಸಹಾಯಕ್ಕೆ ಬರುತ್ತದೆ. ಊಟಕ್ಕೂ ಇದು ಸೂಪರ್ ಎನಿಸುತ್ತದೆ. ಸುಲಭದ ಹುರುಳಿ ಚಟ್ನಿ ಪುಡಿ (Horse gram chutney powder) ರೆಸಿಪಿ ಇಲ್ಲಿದೆ.
ಬೇಕಾಗುವ ಪದಾರ್ಥಗಳು:
ಹುರುಳಿ – 1 ಕಪ್
ಉದ್ದಿನಬೇಳೆ – ಕಾಲು ಕಪ್
ಒಣ ತೆಂಗಿನ ತುರಿ – ಕಾಲು ಕಪ್
ಕೆಂಪು ಮೆಣಸಿನಕಾಯಿ – ಕಾಲು ಕಪ್
ಹುಣಿಸೆಹಣ್ಣು – ನಿಂಬೆ ಗಾತ್ರದಷ್ಟು
ಕರಿಬೇವಿನ ಎಲೆ – ಕೆಲವು
ಬೆಲ್ಲ – ಸಣ್ಣ ತುಂಡು (ಐಚ್ಛಿಕ)
ಉಪ್ಪು – ರುಚಿಗೆ ತಕ್ಕಷ್ಟು
ಸಾಸಿವೆ – 1 ಟೀಸ್ಪೂನ್
ಅರಿಶಿನ – 1 ಟೀಸ್ಪೂನ್
ಹಿಂಗ್ – 1 ಟೀಸ್ಪೂನ್
ತೆಂಗಿನ ಎಣ್ಣೆ – 3 ಟೀಸ್ಪೂನ್ ಇದನ್ನೂ ಓದಿ: ಸಖತ್ ಟೇಸ್ಟಿ ಕರಿಬೇವು ಸೊಪ್ಪಿನ ಚಟ್ನಿ ರೆಸಿಪಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಪ್ಯಾನ್‌ನಲ್ಲಿ ಹುರುಳಿಯನ್ನು ಹಾಕಿ, ಮಧ್ಯಮ ಉರಿಯಲ್ಲಿ ಪರಿಮಳ ಬರುವವರೆಗೆ ಹುರಿದುಕೊಳ್ಳಿ. ಹುರುಳಿ ಸ್ವಲ್ಪ ಬಣ್ಣ ಬದಲಾದ ಬಳಿಕ ಅದನ್ನು ತಣ್ಣಗಾಗಲು ಪಕ್ಕಕಿಡಿ.
* ಈಗ ಉದ್ದಿನಬೇಳೆಯನ್ನು ಪ್ರತ್ಯೇಕವಾಗಿ ಪರಿಮಳ ಬರುವವರೆಗೆ ಹುರಿದುಕೊಳ್ಳಿ. ಬಳಿಕ ಪಾತ್ರೆಗೆ ವರ್ಗಾಯಿಸಿ, ತಣ್ಣಗಾಗಲು ಬಿಡಿ.
* ಇದೀಗ ಪ್ಯಾನ್‌ಗೆ ಒಣ ಕೊಬ್ಬರಿ ಹಾಕಿ, ಕಡಿಮೆ ಉರಿಯಲ್ಲಿ ಗರಿಗರಿಯಾಗುವವರೆಗೆ ಹುರಿದುಕೊಳ್ಳಿ. ಇದನ್ನು ಪ್ರತ್ಯೇಕ ಪಾತ್ರೆಗೆ ವರ್ಗಾಯಿಸಿ ತಣ್ಣಗಾಗಲು ಬಿಡಿ.
* ಈಗ ಪ್ಯಾನ್‌ಗೆ 1 ಟೀಸ್ಪೂನ್ ಎಣ್ಣೆ ಹಾಕಿ, ಕಡಿಮೆ ಉರಿಯಲ್ಲಿ ಕೆಂಪು ಮೆಣಸನ್ನು ಹುರಿದುಕೊಳ್ಳಿ. ನಡುವೆ ಕರಿಬೇವಿನ ಎಲೆಗಳನ್ನು ಸೇರಿಸಿ, ಗರಿಗರಿಯಾಗುವವರೆಗೆ ಹುರಿದುಕೊಳ್ಳಿ. ಬಳಿಕ ಅದನ್ನು ತಣ್ಣಗಾಗಲು ಪಕ್ಕಕ್ಕಿಡಿ.
* ಈಗ ಹುಣಿಸೆಹಣ್ಣನ್ನು ಚಿಕ್ಕ ಚಿಕ್ಕ ಚೂರುಗಳನ್ನಾಗಿ ಮಾಡಿ, ಕಡಿಮೆ ಉರಿಯಲ್ಲಿ ಗರಿಗರಿಯಾಗುವವರೆಗೆ ಹುರಿದುಕೊಳ್ಳಿ. ಬಳಿಕ ಹುರಿದ ಎಲ್ಲಾ ಪದಾರ್ಥಗಳನ್ನೂ ತಣ್ಣಗಾಗಲು ಬಿಡಿ.
* ಈಗ ಒಂದು ಮಿಕ್ಸರ್ ಜಾರ್ ತೆಗೆದುಕೊಂಡು, ಅದರಲ್ಲಿ ಹುರಿದ ಹುರುಳಿ ಹಾಗೂ ಉದ್ದಿನ ಬೇಳೆಯನ್ನು ಹಾಕಿ ಒರಟಾಗಿ ಪುಡಿ ಮಾಡಿ, ಬಳಿಕ ಒಂದು ಪಾತ್ರೆಗೆ ವರ್ಗಾಯಿಸಿ.
Advertisement
Advertisement
* ಬಳಿಕ ಕೆಂಪು ಮೆಣಸಿನಕಾಯಿ ಹಾಗೂ ಕರಿಬೇವಿನ ಮಿಶ್ರಣ, ಹುಣಿಸೆಹಣ್ಣು, ತೆಂಗಿನ ತುರಿಯನ್ನು ಮಿಕ್ಸರ್ ಜಾರ್‌ಗೆ ಹಾಕಿ, ಉಪ್ಪು ಹಾಗೂ ಬೆಲ್ಲವನ್ನು ಸೇರಿಸಿ, ಚೆನ್ನಾಗಿ ಪುಡಿ ಮಾಡಿಕೊಳ್ಳಿ.
* ಈಗ ಒಂದು ಕಡಾಯಿ ತೆಗೆದುಕೊಂಡು, ಅದರಲ್ಲಿ ಉಳಿದಿರುವ ಎಣ್ಣೆ ಹಾಕಿ, ಬಿಸಿಯಾದ ಬಳಿಕ ಸಾಸಿವೆ, ಹಿಂಗ್ ಹಾಗೂ ಅರಿಶಿನ ಹಾಕಿ ಸಿಡಿಸಿ.
* ಉರಿಯನ್ನು ಆಫ್ ಮಾಡಿ, ಅದಕ್ಕೆ ಪುಡಿ ಮಾಡಿದ ಹುರುಳಿ, ಉದ್ದಿನಬೇಳೆ ಮಿಶ್ರಣ ಹಾಗೂ ಪುಡಿ ಮಾಡಿದ ಎಲ್ಲಾ ಪದಾರ್ಥಗಳನ್ನು ಸೇರಿಸಿ ಮಿಶ್ರಣ ಮಾಡಿ.
* ಇದೀಗ ಎಲ್ಲಾ ಮಿಶ್ರಣವನ್ನು ಕೊನೆ ಬಾರಿ ಮಿಕ್ಸರ್ ಜಾರ್‌ಗೆ ಹಾಕಿ 1-2 ಸುತ್ತು ಗ್ರೈಂಡ್ ಮಾಡಿ. ಇದರಿಂದ ಚಟ್ನಿ ಪುಡಿ ಏಕ ಸಮಾನವಾಗಿ ಮಿಶ್ರಣವಾಗುತ್ತದೆ.
* ಇದೀಗ ಹುರುಳಿ ಚಟ್ನಿ ಪುಡಿ ತಯಾರಾಗಿದ್ದು, ಗಾಳಿಯಾಡದ ಬಿಗಿ ಡಬ್ಬಿಯಲ್ಲಿ ಸಂಗ್ರಹಿಸಿಡಿ. ಇದನ್ನು ನೀವು 6 ತಿಂಗಳ ವರೆಗೆ ಬೇಕೆಂದಾಗ ಸವಿಯಬಹುದು. ಇದನ್ನೂ ಓದಿ: ಮೊಳಕೆಯೊಡೆದ ಹೆಸರುಕಾಳಿನಿಂದ ಮಾಡಿ ಆರೋಗ್ಯಕರ ಕೋಸಂಬರಿ
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k