LatestMain Post

ಮದುಮಗನ ಕುದುರೆಗಾಡಿಗೆ ಬೆಂಕಿ – ವರ ಬಚಾವ್

ಗಾಂಧಿನಗರ: ಮದುಮಗನನ್ನು ಕೂರಿಸಿಕೊಂಡು ಮೆರವಣಿಗೆ ಹೊರಟ್ಟಿದ್ದ ಕುದುರೆ ಗಾಡಿಗೆ ಬೆಂಕಿ ಹೊತ್ತಿಕೊಂಡ ಘಟನೆ ಗುಜಾರಾತ್ ನ ಪಂಚಮಹಲ್ ಜಿಲ್ಲೆಯಲ್ಲಿ ನಡೆದಿದೆ.

ಗಾಡಿಗೆ ಹೇಗೆ ಬೆಂಕಿ ಹಚ್ಚಿತ್ತು?
ವರನನ್ನು ಮಂಟಪಕ್ಕೆ ಮೆರವಣಿಗೆಯೊಂದಿಗೆ ಕರೆದುಕೊಂಡು ಬರುವಾಗ ಈ ಘಟನೆ ನಡೆದಿದೆ. ರಸ್ತೆಯುದ್ದಕ್ಕೂ ಜನರು ಪಟಾಕಿ ಸಿಡಿಸುತ್ತಾ ನೃತ್ಯ ಮಾಡುತ್ತಾ ಬರುತ್ತಿದ್ದರು. ಈ ವೇಳೆ ಪಟಾಕಿ ಕಿಡಿ ತಗುಲಿ ಕುದುರೆಗಾಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ವರ ಕೂದೆಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಇದನ್ನೂ ಓದಿ: ಖಾಸಗಿ ಜೆಟ್ ಪತನಗೊಂಡು 9 ಮಂದಿ ದುರ್ಮರಣ

ಗಾಬರಿಗೊಂಡ ಜನರು ತಕ್ಷಣವೇ ಪಕ್ಕದಲ್ಲಿದ್ದ ಅಗ್ನಿಶಾಮಕ ದಳದವರಿಗೆ ಫೋನ್ ಮಾಡಿದರು. ಹಾಗೆಯೇ ಸುತ್ತಮುತ್ತಲಿನ ಜನ ನೀರು ಸುರಿದು ನಂದಿಸಿದ್ದು. ಸದ್ಯ ಯಾವುದೇ ಪ್ರಾಣ ಹಾನಿ ಸಂಭವಿಸದೆ ಕುದುರೆ ಸುರಕ್ಷಿತವಾಗಿದೆ ಎಂದು ಅಗ್ನಿಶಾಮಕ ಅಧಿಕಾರಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನವದೆಹಲಿ-ಕರ್ನಾಟಕ ಎಕ್ಸ್‌ಪ್ರೆಸ್‍ನಲ್ಲಿ ಬಾಂಬ್ – ಹುಸಿ ಕರೆಗೆ ಪ್ರಯಾಣಿಕರು ಕಂಗಾಲು

Leave a Reply

Your email address will not be published.

Back to top button