ದೆವ್ವಗಳೇ ಕನ್ನಡದಲ್ಲಿ ಸಕ್ಸಸ್ ಸೂತ್ರದಂತೆ ಬಳಕೆಯಾಗುತ್ತಿವೆ. ಇದರಲ್ಲಿ ಒಂದಷ್ಟು ನವೀನ ಪ್ರಯೋಗಗಗಳು ಆಗುತ್ತಿವೆಯಾದರೂ ಮತ್ತೆ ಕೆಲ ಚಿತ್ರಗಳು ನಿಜಕ್ಕೂ ಭೂತದರ್ಶನ ಮಾಡಿಸುವಂತಿರುತ್ತವೆ. ಸದ್ಯ ಕನ್ನಡದಲ್ಲಿ ಈವರೆಗೂ ಬಂದ ಎಲ್ಲಾ ಹಾರರ್ (Horror) ಸಿನಿಮಾಗಳನ್ನೂ ಮೀರಿಸುವ ಚಿತ್ರವೊಂದು ಸದ್ದಿಲ್ಲದೆ ತಯಾರಾಗುತ್ತಿದೆ. ಅದು ಅಮರಾವತಿ.
ಬ್ರಾಡ್ ವೇ ಪಿಚ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ವಾಸು (Vasu) ಅವರ ಸಾರಥ್ಯವಿದೆ. ಪ್ರಿಯಾ (Priya), ರಮ್ಯಾ ಮತ್ತು ಕೃಷ್ಣ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಮೊದಲ ಹಂತದ ಚಿತ್ರೀಕರಣ ಚಾಲನೆಯಲ್ಲಿದ್ದು, ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಇದನ್ನೂ ಓದಿ:‘ಬಾಹುಬಲಿ’ ಪ್ರಭಾಸ್‌ಗೆ ಸ್ಟಾರ್ ನಟ ಕಮಲ್ ಹಾಸನ್ ವಿಲನ್
ಹೊಸ ರೀತಿಯಲ್ಲಿ ಸಿನಿಮಾ ತಯಾರಾಗುತ್ತಿರುವುದರಿಂದ ಅಮರಾವತಿ (Amravati) ಚಿತ್ರ ಕರ್ನಾಟಕ ಮಾತ್ರವಲ್ಲದೆ ಇಡೀ ಭಾರತದಲ್ಲೇ ಸಂಚಲನ ಸೃಷ್ಠಿಸುತ್ತದೆ ಎನ್ನುವುದು ತಂಡದ ನಂಬಿಕೆ. ಆ ರೀತಿಯಲ್ಲಿ ಕಥಾವಸ್ತು ಮತ್ತು ಮೇಕಿಂಗ್ ಇರಲಿದೆಯಂತೆ.