– ಸ್ಟೇಡಿಯಂನತ್ತ ಟೀಂ ಇಂಡಿಯಾ
ಅಹಮದಾಬಾದ್: ವಿಶ್ವಕಪ್ 2023ರ (World Cup 2023) ಫೈನಲ್ ಪಂದ್ಯಕ್ಕೆ ಈಗಾಗಲೇ ಕ್ಷಣಗಣನೆ ಪ್ರಾರಂಭವಾಗಿದೆ. ನಗರದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಮೂರನೇ ಏಕದಿನದ ವಿಶ್ವಕಪ್ಗಾಗಿ ಹೋರಾಟ ನಡೆಸಲಿದೆ. ಈ ನಡುವೆ ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ (Sachin Tendulkar) ಅವರು ಪಂದ್ಯ ಪ್ರಾರಂಭಕ್ಕೂ ಗಂಟೆಗಳ ಮೊದಲು ಅಹಮದಾಬಾದ್ಗೆ ಆಗಮಿಸಿದ್ದಾರೆ.
#WATCH | Former Indian cricketer Sachin Tendulkar says “I have come here to extend my good wishes. Hopefully, we will lift the trophy today. Everyone was waiting for this day…” pic.twitter.com/XYHliO843n
— ANI (@ANI) November 19, 2023
Advertisement
ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಮಾಜಿ ಕ್ರಿಕೆಟಿಗ, ಎಲ್ಲರೂ ಈ ದಿನಕ್ಕಾಗಿ ಕಾಯುತ್ತಿದ್ದಾರೆ. ನಾನು ಟೀಂ ಇಂಡಿಯಾಗೆ ಶುಭಾಶಯ ಹೇಳಲು ಬಂದಿದ್ದೇನೆ. ವಿಶ್ವಕಪ್ಗಾಗಿ ಹಣಾಹಣಿಯಲ್ಲಿರುವ ಭಾರತ ಟ್ರೋಫಿ ಎತ್ತಿಹಿಡಿಯುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತದ ಗೆಲುವಿಗಾಗಿ ಇಶನ್ ಕಿಶನ್ ಕುಟುಂಬಸ್ಥರಿಂದ ವಿಶೇಷ ಪೂಜೆ
Advertisement
#WATCH | Gujarat: Indian Cricket Team leaves for Narendra Modi Stadium in Ahmedabad for the ICC Cricket World Cup final match against Australia. pic.twitter.com/OVAjZRXwjk
— ANI (@ANI) November 19, 2023
Advertisement
ವಿಶ್ವಕಪ್ಗಾಗಿ ಹೋರಾಟ ನಡೆಸಲಿರುವ ಕ್ರಿಕೆಟಿಗರು ಈಗಾಗಲೇ ಸ್ಟೇಡಿಯಂಗೆ ಲಗ್ಗೆಯಿಟ್ಟಿದ್ದಾರೆ. ಇಂದು ಮಧ್ಯಾಹ್ನ 2 ಗಂಟೆಗೆ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ವಿಶ್ವಕಪ್ ಫೈನಲ್ ಪಂದ್ಯ ಪ್ರಾರಂಭವಾಗಲಿದೆ. ಮೋದಿ ಸ್ಟೇಡಿಯಂನೆಡೆಗೆ ಸಾವಿರಾರು ಕ್ರಿಕೆಟ್ ಅಭಿಮಾನಿಗಳ ದಂಡು ಹೊರಟಿದೆ. ಭಾರತಕ್ಕೆ ಕಪ್ ಒಲಿದು ಬರಲಿ ಎಂದು ದೇಶಾದ್ಯಂತ ಎಲ್ಲೆಡೆ ಪೂಜೆ ಪುನಸ್ಕಾರಗಳು ನೆರವೇರಿಸಲಾಗುತ್ತಿದೆ. ಇದನ್ನೂ ಓದಿ: 13 ವಿಶ್ವಕಪ್ನಲ್ಲಿ 8ನೇ ಬಾರಿ ಫೈನಲ್- 5 ಬಾರಿ ಚಾಂಪಿಯನ್ ಆಗಿರೋ ಆಸ್ಟ್ರೇಲಿಯಾ