ಲಂಡನ್: ಕಾಮನ್‍ವೆಲ್ತ್ ಗೇಮ್ಸ್ 2022ರ ಪುರುಷರ 73 ಕೆ.ಜಿ ವಿಭಾಗದ ವೇಟ್‍ಲಿಫ್ಟಿಂಗ್ ಸ್ಫೆರ್ಧೆಯಲ್ಲಿ 20ರ ಹರೆಯದ ಅಚಿಂತ್ ಶೆಯುಲಿ ಚಿನ್ನದ ಪದಕ ಗೆದ್ದು ದಾಖಲೆ ನಿರ್ಮಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಪದಕ ಗೆದ್ದಾಗಿದೆ ಇನ್ನಾದರೂ ಸಿನಿಮಾ ನೋಡು ಎಂದು ಅಭಿನಂದಿಸಿದ್ದಾರೆ.
Advertisement
ಬರ್ಮಿಂಗ್‍ಹ್ಯಾಮ್‍ನಲ್ಲಿ ನಡೆಯುತ್ತಿರುವ 22ನೇ ಕಾಮನ್‍ವೆಲ್ತ್ ಗೇಮ್ಸ್‌ನಲ್ಲಿ ಅಚಿಂತ್ ಶೆಯುಲಿ ಒಟ್ಟು ದಾಖಲೆಯ 313 ಕೆ.ಜಿ ತೂಕ ಎತ್ತಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದರು. ಆ ಬಳಿಕ ಮೋದಿ ಅಚಿಂತ್‍ಗೆ ಪದಕ ಗೆದ್ದಾಗಿದೆ ಇನ್ನಾದರೂ ಸಿನಿಮಾ ನೋಡಲು ಟೈಮ್ ಸಿಗಬಹುದು ಎಂದು ಟ್ವಿಟ್ಟರ್ ಮೂಲಕ ಶುಭಾಶಯ ಕೋರಿದ್ದಾರೆ. ಮೋದಿ ಈ ರೀತಿ ಶುಭಕೋರಲು ಕಾರಣವಿದೆ. ಇದನ್ನೂ ಓದಿ: IND vs WI 2nd T20: ಎರಡು ಗಂಟೆ ತಡವಾಗಿ ಪಂದ್ಯ ಆರಂಭ – ಕಾರಣ ಮಾತ್ರ ಸಿಂಪಲ್
Advertisement
Advertisement
ಕಾಮನ್‍ವೆಲ್ತ್ ಗೇಮ್ಸ್‌ಗೆ ತೆರಳುವ ಮುನ್ನ ಭಾರತದ ಕ್ರೀಡಾಪಟುಗಳೊಂದಿಗೆ ಮೋದಿ ಸಂವಾದ ನಡೆಸಿದ್ದರು. ಈ ವೇಳೆ ಅಚಿಂತ್ ಜೊತೆ ಮಾತನಾಡುತ್ತಿದ್ದಂತೆ ಹೇಗೆ ಅಭ್ಯಾಸ ಮಾಡಿದ್ದೀರಿ, ನಿಮ್ಮ ಕುಟುಂಬದ ಬಗ್ಗೆ ಹೇಳಿ ಎಂದು ಮೋದಿ ಕೇಳಿದ್ದರು, ಈ ವೇಳೆ ಅಚಿಂತ್ ಕುಟುಂಬದ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಆ ಬಳಿಕ ಸಿನಿಮಾ ನೋಡುತ್ತಿಯಾ ಎಂದು ಕೇಳಿದ್ದರು. ಈ ವೇಳೆ ಅಚಿಂತ್ ಇಲ್ಲ ಸರ್ ಟೈಮ್ ಸಿಗುತ್ತಿಲ್ಲ. ಅಭ್ಯಾಸಕ್ಕೆ ಟೈಮ್ ಮೀಸಲಿಟ್ಟಿದ್ದೇನೆ ಎಂದಿದ್ದರು. ಹಾಗಾಗಿ ಮೋದಿ ಇದೀಗ ಪದಕ ಗೆದ್ದಾಗಿದೆ ಈಗ ಸಿನಿಮಾ ನೋಡಲು ಸಮಯವಕಾಶ ಸಿಗಲಿದೆ ಅಂದುಕೊಂಡಿದ್ದೇನೆ ಎಂದು ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ಅಂದು ಟೈಲರ್, ಇಂದು ಚಿನ್ನದ ಹುಡುಗ – ಇದು 20ರ ಹರೆಯದ ಅಚಿಂತ್ ಸಾಧನೆಯ ಕಥೆ
Advertisement
ಅಂದು ಮೋದಿ, ಅಚಿಂತ್ ಕುಟುಂಬದ ಬಗ್ಗೆ ತಿಳಿಸುತ್ತಿದ್ದಂತೆ ನಿಮ್ಮ ಕುಟುಂಬಕ್ಕೆ ನಾನು ನೆರವಾಗುತ್ತೇನೆ. ಮುಂದಿನ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾಗವಹಿಸುತ್ತಿರುವ ನಿನಗೆ ನಿನ್ನ ತಾಯಿ ಮತ್ತು ದೇಶದ ಜನತೆಯ ಆರ್ಶೀವಾದವಿದೆ ಉತ್ತಮವಾಗಿ ಆಟ ಪ್ರದರ್ಶಿಸು ಎಂದು ಹಾರೈಸಿದ್ದರು.
Before our contingent left for the Commonwealth Games, I had interacted with Achinta Sheuli. We had discussed the support he received from his mother and brother. I also hope he gets time to watch a film now that a medal has been won. pic.twitter.com/4g6BPrSvON
— Narendra Modi (@narendramodi) August 1, 2022
ಅಚಿಂತ್ ಶೆಯುಲಿ 2001ರ ನವೆಂಬರ್ 24 ರಂದು ಪಶ್ಚಿಮ ಬಂಗಾಳ ಜನಿಸಿದರು. ಬಡ ಕುಟುಂಬದವರಾದ ಶೆಯುಲಿ ತಂದೆ 2013ರಲ್ಲಿ ನಿಧನದ ಬಳಿಕ ಕುಟುಂಬದ ಭಾರವೆಲ್ಲ ಅಣ್ಣನ ಮೇಲಿತ್ತು. ಈ ವೇಳೆ ಶೆಯುಲಿ ಅಣ್ಣನ ಸಹಾಯಕ್ಕೆ ನಿಂತಿದ್ದರು. ಶೆಯುಲಿ ಅಣ್ಣ ಟೈಲರ್ ಆಗಿದ್ದು ಬಟ್ಟೆಗಳನ್ನು ಹೊಲಿದು ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದರು. ಈ ವೇಳೆ ಬಟ್ಟೆಗಳಿಗೆ ಬಟನ್ ಹಾಕಿ ಹೊಲಿಗೆಗೆ ಶೆಯುಲಿ ಸಹಾಯ ಮಾಡುತ್ತಿದ್ದರು. ಜೊತೆಗೆ ಜಿಮ್‍ನಲ್ಲಿ ಕಸರತ್ತು ನಡೆಸುತ್ತಿದ್ದರು. ಆ ಬಳಿಕ ಅಣ್ಣನ ಮಾತಿನಂತೆ ವೇಟ್‍ಲಿಫ್ಟಿಂಗ್‍ನಲ್ಲಿ ಆಸಕ್ತಿತೋರಿ ತರಬೇತಿ ಪಡೆದರು.
ಅಚಿಂತ್ ಶೆಯುಲಿ 2010ರಿಂದ ವೇಟ್‍ಲಿಫ್ಟಿಂಗ್‍ನಲ್ಲಿ ತೊಡಗಿಕೊಂಡು 2012ರಿಂದ ಜಿಲ್ಲಾ ಮಟ್ಟದಲ್ಲಿ ಸ್ಪರ್ಧಿಸಿ ಪದಕ ಬೇಟೆ ಆರಂಭಿಸಿದರು. 2019ರಲ್ಲಿ ಕಾಮನ್‍ವೆಲ್ತ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನದ ಪದಕ ಗೆದ್ದಿದ್ದರು. 2021ರ ಜೂನಿಯರ್ ವರ್ಲ್ಡ್ ವೇಟ್‍ಲಿಫ್ಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದರು. ಇದೀಗ ಕಾಮನ್‍ವೆಲ್ತ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.