ನವದೆಹಲಿ: ಹುವಾವೇ ಹಾನರ್ ಕಂಪನಿ ಇದೇ ಮೊದಲ ಬಾರಿಗೆ ದೀಪಾವಳಿ ಸಮಯದಲ್ಲಿ ಒಟ್ಟು 10 ಲಕ್ಷಕ್ಕೂ ಅಧಿಕ ಫೋನ್ ಗಳನ್ನು ಮಾರಾಟ ಮಾಡಿದೆ.
ದೀಪಾವಳಿ ಹಿನ್ನೆಲೆಯಲ್ಲಿ ಆನ್‍ಲೈನ್ ಶಾಪಿಂಗ್ ತಾಣಗಳಾದ ಫ್ಲಿಪ್ ಕಾರ್ಟ್, ಅಮೆಜಾನ್ ಮತ್ತು ಹಾನರ್ ಸ್ಟೋರ್ ಮೂಲಕ ಈ ವಿಶೇಷ ಸಾಧನೆ ನಿರ್ಮಾಣವಾಗಿದೆ ಎಂದು ಹಾನರ್ ಹೇಳಿಕೊಂಡಿದೆ.
Advertisement
2017ರ ದೀಪಾವಳಿಗೆ ಹೋಲಿಸಿದರೆ ಈ ಬಾರಿಯ ವ್ಯವಹಾರ ಶೇ.300 ರಷ್ಟು ಏರಿಕೆಯಾಗಿದೆ. ಬೆಂಗಳೂರು, ಹೈದರಾಬಾದ್, ಚೆನ್ನೈ, ಪುಣೆ ಮತ್ತು ಕೋಲ್ಕತ್ತಾದಲ್ಲಿ ಹೆಚ್ಚಿನ ಫೋನ್ ಗಳು ಮಾರಾಟವಾಗಿದೆ ಎಂದು ತಿಳಿಸಿದೆ.
Advertisement
ಮಧ್ಯಮ ಬೆಲೆಯ ಫೋನ್ ಗಳಾದ ಹಾನರ್ 9ಎನ್, 8 ಎಕ್ಸ್ ಫೋನ್ ಗಳು ಫ್ಲಿಪ್‍ಕಾರ್ಟ್ ಬಿಗ್ ಬಿಲಿಯನ್ ಡೇ ಮತ್ತು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ನಲ್ಲಿ ಹೆಚ್ಚು ಮಾರಾಟವಾಗುವ ಮೂಲಕ ಈ ವಿಶೇಷ ಸಾಧನೆ ಮಾಡಲಾಗಿದೆ ಎಂದು ಕಂಪನಿ ಹೇಳಿದೆ.
Advertisement
ಹಬ್ಬದ ಸಮಯದಲ್ಲಿ ಹಾನರ್ ನ 9ಎನ್, 9ಲೈಟ್, 7ಎಸ್, 9ಐ, 7ಎ, 10 ಫೋನ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದೆ.
Advertisement
https://twitter.com/HiHonorIndia/status/1060487702557147136
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/