ದೇವನಹಳ್ಳಿಯಲ್ಲಿ ಮರ್ಯಾದಾ ಹತ್ಯೆ – ಅನ್ಯಜಾತಿ ಯುವಕನನ್ನ ಪ್ರೀತಿಸುತ್ತಿದ್ದಳೆಂದು ತಂದೆಯಿಂದಲೇ ಮಗಳ ಕೊಲೆ

Public TV
1 Min Read
Kavana

ಚಿಕ್ಕಬಳ್ಳಾಪುರ (ದೇವನಹಳ್ಳಿ): ದಿನೇ ದಿನೇ ಸಿಲಿಕಾನ್‌ ಸಿಟಿಯಲ್ಲಿ ಹೆಚ್ಚುತ್ತಿರುವ ಅಪರಾಧಗಳೊಂದಿಗೆ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಅನ್ಯಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳೆಂದು (Love) ಮಗಳ ಕತ್ತು ಕೊಯ್ದು ಕೊಲೆ ಮಾಡಿರುವ ತಂದೆ, ತಾನೇ ಪೊಲೀಸರಿಗೆ ಶರಣಾದ ಘಟನೆ ಬುಧವಾರ ತಡರಾತ್ರಿ ದೇವನಹಳ್ಳಿ (Devanahalli) ತಾಲೂಕಿನ ಬಿದಲೂರು ಗ್ರಾಮದಲ್ಲಿ ನಡೆದಿದೆ.

Devanahalli Crime 2

ಯುವತಿ ಕವನ (20) ಮೃತ ದುರ್ದೈವಿ, ಮಂಜುನಾಥ್ (47) ಕೊಲೆ ಮಾಡಿ ಪೋಲಿಸರಿಗೆ ಶರಣಾಗಿರುವ ತಂದೆ. ಮಗಳು ಪ್ರೀತಿ ಮಾಡುತ್ತಿದ್ದ ವಿಷಯ ತಿಳಿದು ಆಕ್ರೋಶಗೊಂಡಿದ್ದ ತಂದೆ, ಮಗಳನ್ನ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ. ಸ್ಥಳಕ್ಕೆ ವಿಶ್ವನಾಥಪುರ ಪೋಲಿಸರು (Vishwanathapura Police) ಭೇಟಿ ಪರಿಶೀಲಿಸಿದ್ದು, ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಚಾಮುಂಡೇಶ್ವರಿ ಬಳಿ ಬೇಡಿಕೊಳ್ಳುವ ಪ್ರತಿಯೊಬ್ಬರು ಮಹಿಷಾ ದಸರಾ ವಿರೋಧ ಮಾಡಬೇಕು: ಪ್ರತಾಪ್ ಸಿಂಹ

Devanahalli Crime

ಕೊಲೆ ಆರೋಪಿ ಮಂಜುನಾಥ್‌ ಕಿರಿಯ ಮಗಳು ಪ್ರೀತಿಸಿ ಬೇರೊಬ್ಬ ಯುವಕನೊಂದಿಗೆ ಪರಾರಿಯಾಗಿದ್ದಳು. ಈ ಹಿನ್ನೆಲೆಯಲ್ಲಿ ಹಿರಿಯ ಮಗಳ ಜೊತೆ ತಡರಾತ್ರಿ ಗಲಾಟೆ ನಡೆದಿತ್ತು. ಚಿಕ್ಕವಳು ಓಡಿ ಹೋದಳು, ನೀನೂ ಸಹ ಅನ್ಯಜಾತಿ ಯವಕನನ್ನ ಪ್ರೀತಿ ಮಾಡ್ತಿದ್ದೀಯಾ? ನಾವು ಊರಲ್ಲಿ ಹೇಗೆ ಮರ್ಯಾದೆಯಿಂದ ಒಡಾಡಬೇಕು ಅಂತಾ ಮಗಳನ್ನ ಕೊಂದೇಬಿಟ್ಟಿದ್ದಾನೆ. ಇದನ್ನೂ ಓದಿ: ರಾಜ್ಯದಲ್ಲಿ ತೀವ್ರಗೊಂಡ ವಿದ್ಯುತ್ ಅಭಾವ- ಸರ್ಕಾರದಿಂದ ಸದ್ದಿಲ್ಲದೇ ಲೋಡ್ ಶೆಡ್ಡಿಂಗ್

ಚಿಕನ್ ಅಂಗಡಿ ಇಟ್ಟುಕೊಂಡಿದ್ದ ಮಂಜುನಾಥ್, ಕೋಳಿ ಕತ್ತರಿಸುವ ಕತ್ತಿಯಿಂದಲೇ ಮಗಳ ಕತ್ತು ಕೊಯ್ದು ಕೊಲೆ ಮಾಡಿ, ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ಇದನ್ನೂ ಓದಿ: ಅತ್ತಿಬೆಲೆ ಪಟಾಕಿ ದುರಂತದಲ್ಲಿ ಗಾಯಗೊಂಡಿದ್ದ ಯುವಕ ದುರ್ಮರಣ- ಸಾವಿನ ಸಂಖ್ಯೆ 16ಕ್ಕೆ ಏರಿಕೆ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article