– ಹನಿಟ್ರ್ಯಾಪ್ ಗ್ಯಾಂಗ್ ವಿರುದ್ಧ ಸಂತ್ರಸ್ತೆಯಿಂದಲೇ ದೂರು ದಾಖಲು
– ಗ್ಯಾಂಗ್ ಸದಸ್ಯರಿಂದಲೇ ಹನಿಟ್ರ್ಯಾಪ್ ಯುವತಿಯರ ಮೇಲೆ ಅತ್ಯಾಚಾರ ಆರೋಪ
ಕಲಬುರಗಿ: ಜಿಲ್ಲೆಯಲ್ಲಿ ಹನಿಟ್ರ್ಯಾಪ್ ಗ್ಯಾಂಗ್ (Honeytrap Gang) ಸಕ್ರಿಯವಾಗಿದ್ದು, ಗ್ಯಾಂಗ್‌ನ ಸಂತ್ರಸ್ತೆಯೇ ಪೊಲೀಸ್ ಠಾಣೆಗೆ ದೂರು ದಾಖಲಿಸಿರುವ ಘಟನೆ ನಡೆದಿದೆ.
ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳೇ ಈ ಗ್ಯಾಂಗ್‌ನ ಟಾರ್ಗೆಟ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇವರನ್ನು ಪರಿಚಯ ಮಾಡಿಕೊಂಡು ನಂತರ ಸಲುಗೆ ಬೆಳೆಸುತ್ತಾರೆ. ಅದಾದ ಬಳಿಕ ಮಂಚಕ್ಕೆ ಕರೆದು ವೀಡಿಯೋ ಮಾಡಲಾಗುತ್ತಿತ್ತು. ನಂತರ ಗ್ಯಾಂಗ್ ಅವರಿಂದ ಲಕ್ಷ ಲಕ್ಷ ಹಣ ವಸೂಲಿ ಮಾಡುತ್ತಿತ್ತು. ಈ ವಿಚಾರವನ್ನು ಖುದ್ದು ಹನಿಟ್ರ‍್ಯಾಪ್ ಸಂತ್ರಸ್ತೆ ಬಿಚ್ಚಿಟ್ಟಿದ್ದಾಳೆ.ಇದನ್ನೂ ಓದಿ: ಸ್ಮೈಲ್ ಗುರು ರಕ್ಷಿತ್ ಗೆ ನಾಯಕಿಯಾದ ನೆನಪಿರಲಿ ಪ್ರೇಮ್ ಪುತ್ರಿ : ಅಮ್ಮು ಟೈಟಲ್ ರಿವೀಲ್
ಸಂಘಟನೆ ಹೆಸರಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಹುಡುಗಿಯರ ಪರಿಚಯ ಮಾಡಿಕೊಂಡು ಹನಿಟ್ರ್ಯಾಪ್‌ಗೆ ಬಳಸಿಕೊಳ್ಳಲಾಗುತ್ತಿದೆ. ಹುಡುಗಿಯರ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಆಟವಾಡುತ್ತಿದ್ದಾರೆ. 10ಕ್ಕೂ ಹೆಚ್ಚು ಹುಡುಗಿಯರನ್ನಿಟ್ಟುಕೊಂಡು ಹನಿಟ್ರ‍್ಯಾಪ್ ನಡೆಸುತ್ತಿದ್ದು, ಇದರಿಂದಾಗಿ ಹತ್ತಾರು ಕುಟುಂಬಗಳು ಬಲಿಯಾಗಿವೆ.
ಕಲಬುರಗಿ (Kalaburagi) ಮೂಲದ ಉದ್ಯಮಿಯಿಂದ 40 ಲಕ್ಷ ರೂ. ಹಣವನ್ನು ವಸೂಲಿ ಮಾಡಿಸಿಕೊಂಡಿದ್ದಾರೆ. ಮುಂಬೈ ಮೂಲದ ಯುವತಿಯ ಮೂಲಕ ಉದ್ಯಮಿಯನ್ನು ಬಲೆಗೆ ಬೀಳಿಸಿಕೊಂಡಿದ್ದರು. ಸಾಮಾಜಿಕ ಜಾಲತಾಣ ಮೂಲಕ ಉದ್ಯಮಿ ಹಾಗೂ ಯುವತಿಯನ್ನು ಪರಿಚಯ ಮಾಡಿಸಿದ್ದರು. ಅದಾದ ಬಳಿಕ ಲಾಡ್ಜ್‌ಗೆ ಕರೆಸಿ ರಾಸಲೀಲೆ ವಿಡಿಯೋ ಮಾಡಿಟ್ಟಿದ್ದರು. ಹನಿಟ್ರ‍್ಯಾಪ್‌ಗೆ ಹೆದರಿ ಈಗಾಗಲೇ ಉದ್ಯಮಿ 40 ಲಕ್ಷ ರೂ. ನೀಡಿದ್ದಾರೆ.ಇದನ್ನೂ ಓದಿ: ಸ್ಯಾಂಡಲ್ ವುಡ್ ನಲ್ಲಿ ಗಣಪನ ಸಂಭ್ರಮ: ಸ್ಟಾರ್ ಗಳ ಸಮಾಗಮ
ಆ ಗ್ಯಾಂಗ್ ಸದಸ್ಯರು ಬಲವಂತವಾಗಿ ಹನಿಟ್ರ‍್ಯಾಪ್ ಯುವತಿಯರ ಜೊತೆ ಅತ್ಯಾಚಾರ ನಡೆಸುತ್ತಿದ್ದಾರೆ. ಸದ್ಯ ಸಂತ್ರಸ್ಥೆಯಿಂದಲೇ ಗ್ಯಾಂಗ್ ವಿರುದ್ಧ ದೂರು ದಾಖಲಾಗಿದ್ದು, ಹನಿಟ್ರ್ಯಾಪ್‌ಗೆ ಸಂಬಂಧಿಸಿದಂತೆ ರಾಜು ಲೆಂಗಟಿ, ಪ್ರಭು, ಶ್ರೀಕಾಂತ್ ರೆಡ್ಡಿ, ಮಂಜು ಭಂಡಾರಿ ಸೇರಿದಂತೆ 8 ಜನರ ವಿರುದ್ಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ (Station Bazar Police Station) ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ.