ಹನಿಟ್ರ್ಯಾಪ್ ಪ್ರಕರಣ – ಡಿಜಿಗೆ ದೂರು ಕೊಡಲು ರಾಜಣ್ಣ ಪುತ್ರಗೆ ಸಿಎಂ ಸೂಚನೆ

Public TV
1 Min Read
Rajendra Rajanna

ಬೆಂಗಳೂರು: ರಾಜ್ಯದಲ್ಲಿ ಹನಿಟ್ರ್ಯಾಪ್ (Honeytrap case) ಹಂಗಾಮಾ ತೀವ್ರಗೊಳ್ಳುತ್ತಿದೆ. ಇದರ ನಡುವೆ ಸಚಿವ ರಾಜಣ್ಣ ಪುತ್ರ, ಎಂಎಲ್‍ಸಿ ರಾಜೇಂದ್ರ (Rajendra Rajanna) ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನು ಭೇಟಿ ಮಾಡಿ ಘಟನೆ ಬಗ್ಗೆ ವಿವರ ನೀಡಿದ್ರು. ಈ ಸಂಬಂಧ ಡಿಜಿಗೆ ದೂರು ಕೊಡಲು ಸಿಎಂ ಸೂಚಿಸಿದ್ದಾರೆ.

Rajendra Rajanna Siddaramaiah 1

ವಕೀಲರ ಜೊತೆ ಸಮಾಲೋಚನೆ ನಡೆಸಿ ಒಂದೆರಡು ದಿನದಲ್ಲಿ ದೂರು ಕೊಡ್ತೇನೆ. ಹನಿಟ್ರ್ಯಾಪ್ ಹಿಂದೆ ತುಂಬಾ ದೊಡ್ಡ ವ್ಯಕ್ತಿಗಳು ಇದ್ದಾರೆ ಅಂತ ರಾಜೇಂದ್ರ ಪುನರುಚ್ಛರಿಸಿದ್ರು. ಇನ್ನೂ ಹನಿಟ್ರ್ಯಾಪ್ ಪ್ರಕರಣದ ವಿಚಾರವಾಗಿ ಘರ್ಜಿಸುವ ಹುಲಿಗೆ ಸಿಡಿ ತೋರಿಸುವ ಕೆಲಸ ಆಗ್ತಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಡಿಕೆಶಿಯ ಹಲೋ ವ್ಯಂಗ್ಯಕ್ಕೆ ಅಷ್ಟೇ ವ್ಯಂಗ್ಯವಾಗಿ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.

ಹನಿಟ್ರ್ಯಾಪ್ ಆರೋಪ ಇದು ಮೊದಲೂ ಅಲ್ಲ, ಕೊನೆಯೂ ಅಲ್ಲ, ಮುಂದೆನೂ ಬರಬಹುದು. ನನಗೆ ಹಿನ್ನೆಡೆ ಆಗಲ್ಲ. ನಾನೇನೂ ಕಳ್ಳತನ ಮಾಡಿಲ್ಲ. ಎರಡ್ಮೂರು ದಿನದಲ್ಲಿ ದೂರು ನೀಡ್ತೇನೆ ಎಂದು ಸಚಿವ ರಾಜಣ್ಣ ಹೇಳಿದ್ರು.

ರಾಜಣ್ಣ (K.N Rajanna) ಅಗ್ರೆಸ್ಸಿವ್ ಧೋರಣೆ ಕಡಿಮೆ ಆಗಲ್ಲ ಎಂದು ಸಚಿವ ಮಹದೇವಪ್ಪ ಹೇಳಿದ್ದು, ನಾನು ಎಲ್ರಿಗೂ ಹಲೋ ಅಂತೇನೆ ಎಂದು ಡಿಸಿಎಂಗೆ ಟಾಂಗ್ ಕೊಟ್ರು. ಹನಿಟ್ರ್ಯಾಪ್ ಬೆಳವಣಿಗೆಗಳ ಬಗ್ಗೆ ಕೆ.ಸಿ ವೇಣುಗೋಪಾಲ್ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಹನಿಟ್ರ್ಯಾಪ್ ಬಗ್ಗೆ ಸದನದಲ್ಲಿ ಚರ್ಚೆ ಮಾಡಬಾರದಿತ್ತು ಎಂದು ಮಾಜಿ ಸಿಎಂ ಮೊಯ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Share This Article