ಶಿಲ್ಲಾಂಗ್: ಹನಿಮೂನ್‌ನಲ್ಲಿ ಪತಿಯನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಣಕ್ಕೊಂದು ರೋಚಕ ಮಾಹಿತಿಗಳು ಬಯಲಾಗುತ್ತಿದ್ದು, ಹಂತಕಿ ಸೋನಮ್ ಕೊಲೆ ಮಾಡಲು 4 ಲಕ್ಷ ರೂ.ಗೆ ನೀಡಿದ್ದ ಸುಪಾರಿಯನ್ನು 20 ಲಕ್ಷ ರೂ.ಗೆ ಏರಿಸಿದ್ದಳು ಎನ್ನುವುದು ಬೆಳಕಿಗೆ ಬಂದಿದೆ.
ವಿವಾಹವಾದ ಕೆಲವೇ ದಿನಗಳಲ್ಲಿ ಹಂತಕಿ ತನ್ನ ಪ್ರಿಯಕರ ರಾಜ್ ಕುಶ್ವಾಹ ಜೊತೆ ಸೇರಿಕೊಂಡು ಕೊಲೆಗೆ ಪ್ಲ್ಯಾನ್ ಮಾಡಿದ್ದಳು. ಜೊತೆಗೆ ಒನ್-ವೇ ಟಿಕೆಟ್ ಮಾತ್ರ ಬುಕ್ ಮಾಡಲಾಗಿತ್ತು. ಯೋಜನೆಯಂತೆ ಸೊಹ್ರಾಕ್ಕೆ ತೆರಳಿದ ಬಳಿಕ ಪತಿ ರಾಜ ರಘುವಂಶಿ ಹತ್ಯೆಗೆ ಸೋನಮ್ ಬಾಡಿಗೆ ಹಂತಕರನ್ನು ನೇಮಿಸಿದ್ದಳು. ಜೊತೆಗೆ ಕೊಲೆ ಬಳಿಕ 4 ಲಕ್ಷ ರೂ. ಕೊಡುವುದಾಗಿ ಸುಪಾರಿ ನೀಡಿದ್ದಳು.ಇದನ್ನೂ ಓದಿ: ಇಂದು ಮಧ್ಯರಾತ್ರಿ ಮೇಘಾಲಯಕ್ಕೆ ಹಂತಕಿ ಸೋನಮ್
ಮೇ 23ರಂದು ಸೋನಮ್ ಮತ್ತು ರಾಜಾ ರಘುವಂಶಿ ಸೊಹ್ರಾದಲ್ಲಿನ ಜಲಪಾತವನ್ನು ನೋಡಲು ಶಿಖರವನ್ನು ಹತ್ತಿಕೊಂಡು ಹೋಗುತ್ತಿದ್ದರು. ಈ ವೇಳೆ ಹಂತಕರು ಅವರನ್ನು ಹಿಂಬಾಲಿಸುತ್ತಿದ್ದರು. ಇದನ್ನರಿತ ಸೋನಮ್ ನಿರ್ಜನ ಪ್ರದೇಶ ಕಾಣಿಸಿದಂತೆ ಆಯಾಸವಾದಂತೆ ನಟಿಸಿದ್ದಳು. ಆಗ ಹಂತಕರನ್ನು ಕೊಲೆ ಮಾಡುವಂತೆ ಕೇಳಿಕೊಂಡಿದ್ದಾಳೆ. ಆದರೆ ಹಂತಕರು ತಾವು ಆಯಾಸಗೊಂಡಿರುವುದಾಗಿ ತಿಳಿಸಿದ್ದಾರೆ. ಇದರಿಂದ ಸೋನಮ್ ಸುಪಾರಿ ಹಣವನ್ನು 4 ಲಕ್ಷ ರೂ.ದಿಂದ 20 ಲಕ್ಷ ರೂ.ಗೆ ಹೆಚ್ಚಿಸಿದ್ದಳು. ಜೊತೆಗೆ ಕೊಲೆಯಾದ ಬಳಿಕ ತನ್ನ ಪತಿ ಹಣವನ್ನು ಕಂದಕಕ್ಕೆ ಎಸೆಯಲು ಹಂತಕರಿಗೆ ಸಹಾಯ ಮಾಡಿದ್ದಳು ಎಂದು ವರದಿಯಾಗಿದೆ,
ಏನಿದು ಪ್ರಕರಣ?
ಇಂದೋರ್ ಮೂಲದ ರಾಜಾ ರಘುವಂಶಿ ಮತ್ತು ಸೋನಮ್ ಕಳೆದ ಮೇ 11ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ನವದಂಪತಿ ಮೇ 20ರಂದು ಹನಿಮೂನ್‌ಗೆಂದು ಮೇಘಾಲಯಕ್ಕೆ ತೆರಳಿದ್ದರು. ಶಿಲ್ಲಾಂಗ್‌ನ ಬಾಲಾಜಿ ಅತಿಥಿಗೃಹದಲ್ಲಿ ಉಳಿದುಕೊಂಡಿದ್ದ ಅವರು ಮೇ 22ರ ಬೆಳಗ್ಗೆ ದ್ವಿಚಕ್ರ ವಾಹನವೊಂದನ್ನು ಬಾಡಿಗೆ ಪಡೆದು ಅತಿಥಿ ಗೃಹದಿಂದ ಜನಪ್ರಿಯ ಪ್ರವಾಸಿ ತಾಣ ಸೊಹ್ರಾಕ್ಕೆ ತೆರಳಿದ್ದರು. ಈ ವೇಳೆ ಅವರು 2 ಲಗೇಜ್ ಬ್ಯಾಗ್ ತಮ್ಮೊಂದಿಗೆ ತೆಗೆದುಕೊಂಡಿದ್ದರು. ಮೇ 25ರೊಳಗೆ ಹಿಂತಿರುಗುವುದಾಗಿ ಅತಿಥಿ ಗೃಹದ ವ್ಯವಸ್ಥಾಪಕರಿಗೆ ತಿಳಿಸಿದ್ದರು. ಮೇ 23ರಂದು ಮೌಲಾಖಿಯಾತ್ ಗ್ರಾಮ ತಲುಪಿದ ದಂಪತಿ, ನೊಂಗ್ರಿಯಾಟ್‌ನ ಶಿಪಾರಾ ಹೋಂಸ್ಟೇಯಲ್ಲಿ ವಾಸ್ತವ್ಯ ಹೂಡಿದ್ದರು. ಆ ಬಳಿಕ ದಂಪತಿ ನಿಗೂಢವಾಗಿ ನಾಪತ್ತೆಯಾಗಿದ್ದರು. ಇದಾದ 1 ದಿನದ ಬಳಿಕ ಅವರು ಬಾಡಿಗೆಗೆ ಪಡೆದಿದ್ದ ಸ್ಕೂಟಿ ಸೊಹ್ರಾರಿಮ್ ಬಳಿ ಪತ್ತೆಯಾಗಿತ್ತು. 11 ದಿನಗಳ ಹುಟುಕಾಟದ ಬಳಿಕ ಶಿಲ್ಲಾಂಗ್ ಪೊಲೀಸರು ಆಳವಾದ ಕಂದಕವೊಂದರಲ್ಲಿ ರಾಜಾ ರಘುವಂಶಿ ಅವರ ಮೃತದೇಹವನ್ನು ಪತ್ತೆ ಹಚ್ಚಿದ್ದರು. ಅವರನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ದೃಢಪಡಿಸಿದ್ದರು.
ಹೃದ್ರೋಗಿಯಾಗಿದ್ದ ಸೋನಂ ತಂದೆ ದೇವಿ ಸಿಂಗ್, ತನ್ನ ಕಾರ್ಖಾನೆಯಲ್ಲೇ ಕೆಲಸ ಮಾಡ್ತಿದ್ದ ರಾಜ್‌ಗೆ ಕೊಟ್ಟು ಮದ್ವೆ ಮಾಡಲು ಒಪ್ಪಿಕೊಳ್ಳಲ್ಲ ಅನ್ನೋದು ಸೋನಂಗೆ ಗೊತ್ತಿತ್ತು. ಹಾಗಾಗಿಯೇ ಮಾಸ್ಟರ್ ಪ್ಲ್ಯಾನ್ ಮಾಡಿದ್ದಳು. ಮೊದಲು ರಾಜನನ್ನ ಮದುವೆ ಆಗಿಬಿಡೋಣ, ಅವನನ್ನು ಕೊಂದಮೇಲೆ ವಿಧವೆ ಅನ್ನೋ ಮಮಕಾರದಲ್ಲಾದ್ರೂ ರಾಜ್‌ಗೆ ತನ್ನನ್ನು ಕೊಟ್ಟು ಮದುವೆ ಮಾಡುತ್ತಾರೆ ಎಂಬುದು ಅವಳ ಪ್ಲ್ಯಾನ್ ಆಗಿತ್ತು ಅನ್ನೋದು ಪೊಲೀಸರ ವಿಚಾರಣೆ ವೇಳೆ ತಿಳಿದುಬಂದಿದೆ.ಇದನ್ನೂ ಓದಿ: ಲವ್ವರ್ ಜೊತೆಯೇ ಓಡಿ ಹೋಗಬಹುದಿತ್ತು, ನನ್ನ ಅಣ್ಣನನ್ನು ಯಾಕೆ ಕೊಂದ್ಲು?- ಹತ್ಯೆಯಾದ ರಘುವಂಶಿ ಸಹೋದರಿ ಕಣ್ಣೀರು