Honeymoon Murder | ರಾಜ್‌ನ ಆಭರಣ, 5 ಲಕ್ಷ ನಗದು, ಪಿಸ್ತೂಲ್ ಇದ್ದ ಹಂತಕಿಯ ಬ್ಯಾಗ್ ಮುಚ್ಚಿಟ್ಟಿದ್ದ ಫ್ಲ್ಯಾಟ್‌ ಓನರ್ ಅರೆಸ್ಟ್

Public TV
3 Min Read
Sonam Raghuvanshi honeymoon murder

-ಮೇ 26ರಿಂದ ಜೂ.8ರವೆರೆಗೆ ಫ್ಲ್ಯಾಟ್‌ನಲ್ಲಿ ವಾಸವಿದ್ದ ಸೋನಮ್ ರಘುವಂಶಿ

ಶಿಲ್ಲಾಂಗ್: ಮೇಘಾಲಯಕ್ಕೆ (Meghalaya) ಹನಿಮೂನ್‌ಗೆ (Honeymoon) ತೆರಳಿದ್ದಾಗ ಪತಿಯನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಚಕ ಸಂಗತಿಗಳು ಬಯಲಾಗುತ್ತಿವೆ. ಹತ್ಯೆ ಬಳಿಕ ಸೋನಮ್ ರಹಸ್ಯವಾಗಿ ಸೇರಿಕೊಂಡಿದ್ದ ಫ್ಲ್ಯಾಟ್‌ನ ಮಾಲೀಕನನ್ನು ಇದೀಗ ಮೇಘಾಲಯ ಪೊಲೀಸರು (Meghalaya Police) ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಸಿಲೋಮ್ ಜೇಮ್ಸ್ ಎಂದು ಗುರುತಿಸಲಾಗಿದ್ದು, ಪ್ರಕರಣದ 4 ಆರೋಪಿಗಳ ಪೈಕಿ ಒಬ್ಬನಾದ ವಿಶಾಲ್ ಸಿಂಗ್ ಚೌಹಾನ್‌ಗೆ ಫ್ಲ್ಯಾಟ್‌ ಅನ್ನು ಬಾಡಿಗೆಗೆ ನೀಡಿದ್ದ ಎನ್ನಲಾಗಿದೆ.ಇದನ್ನೂ ಓದಿ: ಆಂಧ್ರ ಮಾಜಿ ಸಿಎಂ ಜಗನ್ ರ‍್ಯಾಲಿ ವೇಳೆ ಅವಘಡ – ಕಾರಿನಡಿ ಸಿಲುಕಿ ವೃದ್ಧ ಸಾವು

ಮೇಘಾಲಯ ವಿಶೇಷ ತನಿಖಾ ತಂಡದ ಮಾಹಿತಿ ಪ್ರಕಾರ, ಮೇ 23ರಂದು ಪತಿ ರಾಜಾ ರಘುವಂಶಿಯ ಕೊಲೆ ಮಾಡಿದ ಬಳಿಕ ಸೋನಮ್ ಗುಪ್ತವಾಗಿ ಇಂದೋರ್‌ನ ಫ್ಲ್ಯಾಟ್‌ನಲ್ಲಿ ಮೇ 26ರಿಂದ ಜೂ.8ರವರೆಗೆ ವಾಸವಾಗಿದ್ದಳು. ಬಳಿಕ ಅಲ್ಲಿಂದ ಘಾಜಿಪುರಕ್ಕೆ ತೆರಳುವಾಗ ತನ್ನ ಫೋನ್, 5 ಲಕ್ಷ ರೂ., ರಾಜ್ ಆಭರಣ ಹಾಗೂ ಒಂದು ಪಿಸ್ತೂಲ್ ಇದ್ದ ಕಪ್ಪು ಬಣ್ಣದ ಬ್ಯಾಗ್‌ವೊಂದನ್ನು ಬಿಟ್ಟುಹೋಗಿದ್ದಳು ಎಂದು ತಿಳಿದುಬಂದಿದೆ.

ತನಿಖೆ ವೇಳೆ, ಫ್ಲ್ಯಾಟ್‌ ಮೇಲೆ ಪೊಲೀಸರು ದಾಳಿ ನಡೆಸಿದಾಗ ಯಾವುದೇ ರೀತಿಯ ಬ್ಯಾಗ್ ಪತ್ತೆಯಾಗಿರಲಿಲ್ಲ. ಬಳಿಕ ಫ್ಲಾö್ಯಟ್ ಮಾಲೀಕನನ್ನು ಪೊಲೀಸರು ಎರಡು ಬಾರಿ ವಿಚಾರಣೆಗೆ ಕರೆದಿದ್ದರು. ಆದರೆ ವಿಚಾರಣೆ ವೇಳೆ ಮಾಲೀಕ ಯಾವುದೇ ವಿಷಯವನ್ನು ಬಾಯಿಬಿಟ್ಟಿರಲಿಲ್ಲ. ಅದಾದ ನಂತರ ಫ್ಲ್ಯಾಟ್‌ನ ಸಿಸಿಟಿವಿ ಕ್ಯಾಮೆರಾವನ್ನು ಪರಿಶೀಲಿಸಿದಾಗ, ಮಾಲೀಕ ಬ್ಯಾಗ್ ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಪತ್ತೆಯಾಗಿತ್ತು. ದೃಶ್ಯಗಳ ಆಧಾರದ ಮೇಲೆ ಮಾಲೀಕನನ್ನು ಮತ್ತೆ ವಿಚಾರಣೆಗೆ ಕರೆದಾಗ, ನಾನು ಭೋಪಾಲ್‌ಗೆ ಹೊರಟಿದ್ದೆ. ಸ್ವಲ್ವ ಸಮಯದ ನಂತರ ಮಾತನಾಡುವುದಾಗಿ ತಿಳಿಸಿದ್ದ. ಪೊಲೀಸರು ಕೆಲವು ಸಮಯದ ನಂತರ ಕರೆ ಮಾಡಿದಾಗ ಮಾಲೀಕನ ಫೋನ್ ಸ್ವಿಚ್ ಆಫ್ ಆಗಿತ್ತು ಎಂದು ತಿಳಿದು ಬಂದಿದೆ.ಇದನ್ನೂ ಓದಿ: ದೊಡ್ಡ ದೊಡ್ಡ ಡ್ರೋನ್ ಬಳಸಿ ಹವಾಯ್‌ಗೆ ಸೊಳ್ಳೆಗಳ ಬಿಡುಗಡೆ – ಇಲ್ಲದಿದ್ರೆ ಈ ಪ್ರಭೇದವೇ ನಾಶವಾಗುತ್ತಂತೆ!

ತನಿಖೆಗಿಳಿದ ಪೊಲೀಸರು, ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಮಾಲೀಕ ಜೇಮ್ಸ್‌ನ್ನು ಮಧ್ಯಪ್ರದೇಶದ ಭೋನ್ರಾಸಾ ಟೋಲ್ ಗೇಟ್‌ನಲ್ಲಿ ಬಂಧಿಸಿದ್ದಾರೆ. ಸದ್ಯ ಜೇಮ್ಸ್‌ನನ್ನು ಕಸ್ಟಡಿಗೆ ಪಡೆದ ಪೊಲೀಸರು, ವಿಚಾರಣೆ ನಡೆಸಲಿದ್ದಾರೆ. ಬಳಿಕ ಶಿಲ್ಲಾಂಗ್‌ಗೆ ಕರೆದೊಯ್ಯಲಿದ್ದಾರೆ.

ಏನಿದು ಪ್ರಕರಣ?
ಇಂದೋರ್ ಮೂಲದ ರಾಜಾ ರಘುವಂಶಿ ಮತ್ತು ಸೋನಮ್ ಕಳೆದ ಮೇ 11ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ನವದಂಪತಿ ಮೇ 20ರಂದು ಹನಿಮೂನ್‌ಗೆಂದು ಮೇಘಾಲಯಕ್ಕೆ ತೆರಳಿದ್ದರು. ಶಿಲ್ಲಾಂಗ್‌ನ ಬಾಲಾಜಿ ಅತಿಥಿಗೃಹದಲ್ಲಿ ಉಳಿದುಕೊಂಡಿದ್ದ ಅವರು ಮೇ 22ರ ಬೆಳಗ್ಗೆ ದ್ವಿಚಕ್ರ ವಾಹನವೊಂದನ್ನು ಬಾಡಿಗೆ ಪಡೆದು ಅತಿಥಿ ಗೃಹದಿಂದ ಜನಪ್ರಿಯ ಪ್ರವಾಸಿ ತಾಣ ಸೊಹ್ರಾಕ್ಕೆ ತೆರಳಿದ್ದರು. ಈ ವೇಳೆ ಅವರು 2 ಲಗೇಜ್ ಬ್ಯಾಗ್ ತಮ್ಮೊಂದಿಗೆ ತೆಗೆದುಕೊಂಡಿದ್ದರು. ಮೇ 25ರೊಳಗೆ ಹಿಂತಿರುಗುವುದಾಗಿ ಅತಿಥಿ ಗೃಹದ ವ್ಯವಸ್ಥಾಪಕರಿಗೆ ತಿಳಿಸಿದ್ದರು. ಮೇ 23ರಂದು ಮೌಲಾಖಿಯಾತ್ ಗ್ರಾಮ ತಲುಪಿದ ದಂಪತಿ, ನೊಂಗ್ರಿಯಾಟ್‌ನ ಶಿಪಾರಾ ಹೋಂಸ್ಟೇಯಲ್ಲಿ ವಾಸ್ತವ್ಯ ಹೂಡಿದ್ದರು. ಆ ಬಳಿಕ ದಂಪತಿ ನಿಗೂಢವಾಗಿ ನಾಪತ್ತೆಯಾಗಿದ್ದರು. ಇದಾದ 1 ದಿನದ ಬಳಿಕ ಅವರು ಬಾಡಿಗೆಗೆ ಪಡೆದಿದ್ದ ಸ್ಕೂಟಿ ಸೊಹ್ರಾರಿಮ್ ಬಳಿ ಪತ್ತೆಯಾಗಿತ್ತು. 11 ದಿನಗಳ ಹುಡುಕಾಟದ ಬಳಿಕ ಶಿಲ್ಲಾಂಗ್ ಪೊಲೀಸರು ಆಳವಾದ ಕಂದಕವೊಂದರಲ್ಲಿ ರಾಜಾ ರಘುವಂಶಿ ಅವರ ಮೃತದೇಹವನ್ನು ಪತ್ತೆ ಹಚ್ಚಿದ್ದರು. ಅವರನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ದೃಢಪಡಿಸಿದ್ದರು.

ರಾಜಾ ರಘುವಂಶಿಯ ಕೊಲೆ ನಂತರ ಇನ್ನೊಬ್ಬ ಮಹಿಳೆಯನ್ನು ಕೊಂದು ಶವವನ್ನು ಸುಟ್ಟು, ಆಕೆಯನ್ನೇ ಸೋನಮ್ ಎಂದು ನಂಬಿಸಬೇಕೆಂದು ಕೊಂಡಿದ್ದರು. ಸತ್ಯ ಬಯಲಾಗುವವರೆಗೂ ಸೋನಮ್‌ನ್ನು ಎಲ್ಲಿಯಾದರೂ ಅಡಗಿಸಿಡುವ ಯೋಜನೆ ಹಾಕಿಕೊಂಡಿದ್ದರು ಎಂದು ತನಿಖೆಯಲ್ಲಿ ಬಯಲಾಗಿದೆ.ಇದನ್ನೂ ಓದಿ: ಇರಾನ್ ಅಧ್ಯಕ್ಷರಿಗೆ ಪ್ರಧಾನಿ ಮೋದಿ ಕರೆ – ಇಸ್ರೇಲ್‌ನೊಂದಿಗಿನ ಸಂಘರ್ಷ ಶಮನಕ್ಕೆ ಸಲಹೆ

Share This Article