ಸೌಂದರ್ಯಕ್ಕೆ ಮತ್ತೊಂದು ಹೆಸರೇ ಹನಿ ರೋಸ್ (Honey Rose). ಇವರು ಮಾಡಿದ ಸಿನಿಮಾಗಳಿಗಿಂತ ಇವರ ಹಾಟ್ ಹಾಟ್ ಫೋಟೋಗಳು ಸಖತ್ ಸದ್ದು ಮಾಡುತ್ತವೆ. ನಡು ವಯಸ್ಸಿಗೆ ಹತ್ತಿರವಾಗಿರುವ ಹನಿ ಸೌಂದರ್ಯದ (Beauty) ಬಗ್ಗೆ ಹಲವರು ಕಾಮೆಂಟ್ ಮಾಡುತ್ತಲೇ ಇರುತ್ತಾರೆ. ಅದಕ್ಕೆ ಸ್ಪಷ್ಟನೆ ಕೊಟ್ಟರೂ ಈ ಪ್ರಶ್ನೆಗಳು ಮಾತ್ರ ನಿಲ್ಲದೇ ಇರುವುದಕ್ಕೆ ಹನಿಗೆ ಬೇಸರವಿದೆಯಂತೆ.
ಮಾನಸ್ಟರ್, ಬಿಗ್ ಬ್ರದರ್, ವೀರ ಸಿಂಹ ರೆಡ್ಡಿ (Veera Simha Reddy) ಸಿನಿಮಾಗಳಲ್ಲಿ ನಾಯಕಿಯಾಗಿ ಹನಿ ರೋಸ್ ನಟಿಸಿದ್ದಾರೆ. ಮೋಹನ್ ಲಾಲ್, ಬಾಲಯ್ಯ (Balayya) ಅವರಂತಹ ದಿಗ್ಗಜ ನಟರಿಗೆ ನಾಯಕಿಯಾಗಿ ಮೋಡಿ ಮಾಡಿದ್ದಾರೆ. ನೋಡಲು ಫಿಟ್ ಮತ್ತು ಮುದ್ದಾಗಿರೋ ಹನಿ ರೋಸ್ ಅವರು ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಅದಕ್ಕೆ ಅವರು ಇಷ್ಟು ಮುದ್ದಾಗಿ ಕಾಣ್ತಿದ್ದಾರೆ ಅಂತೆಲ್ಲಾ ಸುದ್ದಿ ಹರಿದಾಡುತ್ತಲೇ ಇರುತ್ತದೆ. ಈಗಾಗಲೇ ಅದಕ್ಕೆ ಸ್ಪಷ್ಟನೆ ಕೊಟ್ಟಿದ್ದರೂ, ಮತ್ತೆ ಇದೀಗ ಇನ್ನೊಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:‘ಬಾಹುಬಲಿ’ ಪ್ರಭಾಸ್ ಫೇಸ್‌ಬುಕ್ ಅಕೌಂಟ್ ಹ್ಯಾಕ್
ಸೋಷಿಯಲ್ ಮೀಡಿಯಾದಲ್ಲಿ ಅವರ ಬೋಲ್ಡ್ ಫೋಟೋಗಾಗಿಯೇ ಕಾಯುವ ಫ್ಯಾನ್ಸ್ ಇದ್ದಾರೆ. ಹನಿ ರೋಸ್ ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಂಡಿದ್ದು, ಇದೇ ಅವರ ಸೀಕ್ರೆಟ್ ಎಂದು ಅನೇಕರು ಆರೋಪಿಸಿದ್ರು. ಈಗ ನಟಿ ತಾನು ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾಗಿಲ್ಲ ಎಂದು ಮತ್ತೆ ಸ್ಪಷ್ಟಪಡಿಸಿದ್ದಾರೆ. ನನಗೆ ದೇವರು ಈ ಅಂದ ಕೊಟ್ಟಿದ್ದು ಬಿಟ್ರೆ ಬೇರೇನೂ ಇಲ್ಲ ಎಂದಿದ್ದಾರೆ. ನಾನು ಯಾವುದೇ ಸರ್ಜರಿ ಮಾಡಿಸಿಕೊಂಡು ಸೌಂದರ್ಯ ಹೆಚ್ಚಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ, ಪ್ರಶ್ನೆಗಳು ನಿಲ್ಲದೇ ಇರುವುದಕ್ಕೆ ಬೇಸರಿಸಿಕೊಂಡಿದ್ದಾರೆ.
ಸದ್ಯ ‘ರಾಚೆಲ್’ (Rachel) ಎಂಬ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಭಿನ್ನವಾಗಿರುವ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ನಟಿ ಫಸ್ಟ್ ಲುಕ್ ಕೂಡ ಅಭಿಮಾನಿಗಳ ಗಮನ ಸೆಳೆದಿದೆ. ಕನ್ನಡ, ಮಲಯಾಳಂ ಸೇರಿದಂತೆ ಬಹುಭಾಷೆಗಳಲ್ಲಿ ರಾಚೆಲ್ ಸಿನಿಮಾ ಮೂಡಿ ಬರಲಿದೆ.
Web Stories