ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ (Chikkaballapura) ತಾಲೂಕು ಜಕ್ಕಲಮಡುಗು ಜಲಾಶಯಕ್ಕೆ ಬಾಗಿನ ಅರ್ಪಣೆಗೆ ಸಂಸದ ಸುಧಾಕರ್ ಆಗಮಿಸುವಷ್ಟರಲ್ಲಿ ಹೆಜ್ಜೇನು ಹುಳುಗಳು ದಾಳಿ ನಡೆಸಿದ್ದು ದಾಳಿಯಿಂದ ನಗರಸಭಾ ಸದಸ್ಯರು ಸೇರಿ ಹಲವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಅಂದಹಾಗೆ ಜಕ್ಕಲಮಡುಗು ಜಲಾಶಯ ನಿನ್ನೆಯಷ್ಟೇ ಕೋಡಿ ಹರಿದಿರುವ ಹಿನ್ನಲೆಯಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ತೆರಳಿ ಶಾಸ್ತ್ರೋಕ್ತವಾಗಿ ಬಾಗಿನ ಅರ್ಪಿಸಿದ್ದರು. ಇದನ್ನೂ ಓದಿ: ಕೆಂಗೇರಿ ಕೆರೆಯಲ್ಲಿ ಮುಳುಗಿ ಮೃತಪಟ್ಟ ಇಬ್ಬರು ಮಕ್ಕಳ ಕುಟುಂಬಕ್ಕೆ 5 ಲಕ್ಷ ಪರಿಹಾರ: ಡಿಕೆಶಿ ಘೋಷಣೆ
ಇಂದು ಬೆಳಗ್ಗೆ 11 ಗಂಟೆಗೆ ಸಂಸದ ಸಧಾಕರ್ ಸಹ ಬಾಗಿನ ಅರ್ಪಣೆಗೆ ಸಮಯ ನಿಗದಿ ಮಾಡಿದ್ದರು. ಆದ್ರೆ ರಾಹುಕಾಲ ಸಮಯ ಸರಿ ಇಲ್ಲ ಅಂತ ಹಾಗೂ ವಿವಿಧ ಕಾರ್ಯಕ್ರಮಗಳ ಒತ್ತಡದಿಂದ ಸಂಜೆ 4 ಗಂಟೆಗೆ ಬಾಗಿನ ಕಾರ್ಯಕ್ರಮಕ್ಕೆ ಸಕಲ ತಯಾರಿ ಮಾಡಿಕೊಂಡಿದ್ದರು.
ಇನ್ನೇನು ಸಂಸದ ಸುಧಾಕರ್ ಸಹ ಬಾಗಿನ ಅರ್ಪಣೆಗೆ ಜಲಾಶಯದ ಸಮೀಪ ಆಗಮಿಸಿದ್ರು. ಅಷ್ಟರಲ್ಲೇ ಹೆಜ್ಜೇನು ದಾಳಿ ಮಾಡಿದ್ದು ಬಾಗಿನ ಅರ್ಪಣೆಗೆ ಆಗಮಿಸಿದ್ದ ಅರ್ಚಕರು, ಅಧಿಕಾರಿಗಳು ಸೇರಿ ಸಂಸದ ಸುಧಾಕರ್ ಬೆಂಬಲಿತರು, ನಗರಸಭಾ ಸದಸ್ಯರು ದಿಕ್ಕಾಪಾಲಾಗಿ ಓಡಿದ್ದಾರೆ. ಘಟನೆಯಿಂದ ಬಾಗಿನ ಕಾರ್ಯಕ್ರಮ ರದ್ದು ಮಾಡಿ ಅಲ್ಲಿಂದ ಸಂಸದರು ವಾಪಾಸ್ಸಾಗಿದ್ದಾರೆ. ಇದನ್ನೂ ಓದಿ: ಅಮರಾವತಿ ಡ್ರೋನ್ ಸಮ್ಮೇಳನ 2024 | ಆಕಾಶವನ್ನೇ ಬೆಳಗಿದ 5,500 ಡ್ರೋನ್, 5 ಗಿನ್ನಿಸ್ ರೆಕಾರ್ಡ್