ಕೋಲಾರ: ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ (BJP) ಸಂಸದ ಮುನಿಸ್ವಾಮಿ (S. Muniswamy) ಹಾಗೂ ಕಾರ್ಯಕರ್ತರ ಮೇಲೆ ಹೆಜ್ಜೇನು ದಾಳಿ ನಡೆಸಿದ ಘಟನೆ ಕೋಲಾರದ (Kolar) ಜಿಲ್ಲಾಧಿಕಾರಿಗಳ ಕಚೇರಿ ಎದುರು ನಡೆದಿದೆ.
ಪ್ರತಿಭಟನೆ ವೇಳೆ ಏಕಾಏಕಿ ಹೆಜ್ಜೇನು ದಾಳಿ ನಡೆಸಿವೆ. ವ್ಯಕ್ತಿ ಒಬ್ಬನಿಗೆ ವಿಪರೀತವಾಗಿ ಜೇನ್ನೊಣಗಳು ಮುತ್ತಿಗೆ ಹಾಕುತ್ತಿದ್ದಂತೆ ಸಂಸದ ಮುನಿಸ್ವಾಮಿ ಸೇರಿದಂತೆ ಎಲ್ಲಾ ನಾಯಕರು, ಪೊಲೀಸರು ಹಾಗೂ ಕಾರ್ಯಕರ್ತರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಆದರೂ ಮುನಿಸ್ವಾಮಿ ಸೇರಿದಂತೆ ಪತ್ರಕರ್ತರು ಹಾಗೂ ಕೆಲವು ಕಾರ್ಯಕರ್ತರಿಗೆ ಜೇನ್ನೊಣಗಳು ಕಚ್ಚಿವೆ. ಬಳಿಕ ಸಂಸದರು ಜಿಲ್ಲಾಧಿಕಾರಿಗಳ ಕಚೇರಿ ಸೇರಿ ರಕ್ಷಣೆ ಪಡೆದುಕೊಂಡರು. ಇದನ್ನೂ ಓದಿ: ಮೂರು ತಿಂಗಳ ಹಿಂದಷ್ಟೇ ಮದ್ವೆಯಾಗಿದ್ದ ನವವಿವಾಹಿತೆ ಸಾವು
Advertisement
Advertisement
ಹೆಜ್ಜೇನು ದಾಳಿಯಿಂದ ದಿಕ್ಕಪಾಲಾದ ಜನರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲವು ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ವೇಳೆ ತೀವ್ರವಾಗಿ ದಾಳಿಗೊಳಗಾದವರನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು. ಕೆಲವರು ಬೆಂಕಿ ಹಾಕಿ ಜೇನ್ನೊಣಗಳನ್ನು ಓಡಿಸಲು ಪ್ರಯತ್ನಿಸಿದ ಪ್ರಸಂಗವು ನಡೆಯಿತು.
Advertisement
Advertisement
ಸಂಸದರು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಬಳಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕಾರ್ಯಕರ್ತರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ಇದನ್ನೂ ಓದಿ: ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ, ಜೆಡಿಎಸ್ ಕಾರ್ಯಕರ್ತರಿಗೆ ವೀರ ಸಂದೇಶ ಕೊಟ್ಟ ಹೆಚ್‍ಡಿಕೆ
Web Stories