ಉಡುಪಿ: ಹಿಜಬ್ (Hijab) ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ (Supreme Court) ಭಿನ್ನ ತೀರ್ಪು ವ್ಯಕ್ತವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ದುಲಿಯಾ ಅವರು ನೀಡಿದ ತೀರ್ಪಿನ ಬಗ್ಗೆ ಹಿಜಬ್ ಪರ ವಿದ್ಯಾರ್ಥಿನಿ ಆಲಿಯಾ ಅಸ್ಸಾದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
This judgement upheld the rights of victims girls. Hon’ble justice dhulia’s statement has further strengthen our hope in fair judgement and continued constitutional value atleast in minuscule. Thousand of hijabis students are waiting resume their education. tawakkaltu alAllah
— Aliya Assadi (@Aliyassadi) October 13, 2022
Advertisement
ಉಡುಪಿ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಆಲಿಯಾ ಅಸ್ಸಾದಿ ಹಿಜಬ್ ಹೋರಾಟದ ನೇತೃತ್ವ ವಹಿಸಿದ ವಿದ್ಯಾರ್ಥಿನಿ. ಮಾರ್ಚ್ 15ರ ಹೈಕೋರ್ಟ್ (High Court) ತೀರ್ಪಿನ ನಂತರ ಆಲಿಯಾ ಮತ್ತು ತಂಡ ಉಡುಪಿಯಲ್ಲಿ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿಲ್ಲ. ಇದೀಗ ಸುಪ್ರೀಂಕೋರ್ಟ್‍ನಲ್ಲಿ ದ್ವಿಸದಸ್ಯ ಪೀಠದಿಂದ ವಿಸ್ತೃತ ಪೀಠಕ್ಕೆ ವರ್ಗಾವಣೆಯಾಗಿದೆ. ಈ ಸಂಬಂಧ ವಿದ್ಯಾರ್ಥಿನಿ ಭರವೆಸಯ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಹಿಜಬ್ ಆಯ್ಕೆಯ ವಿಷಯ: ನ್ಯಾ.ಹೇಮಂತ್ ಗುಪ್ತಾ, ನ್ಯಾ. ಧುಲಿಯಾ ಆದೇಶದಲ್ಲಿ ಏನಿದೆ?
Advertisement
Advertisement
ಈ ತೀರ್ಪು ಸಂತ್ರಸ್ತ ಹೆಣ್ಣು ಮಕ್ಕಳ ಹಕ್ಕುಗಳನ್ನು ಎತ್ತಿ ಹಿಡಿದಿದೆ. ಗೌರವಾನ್ವಿತ ನ್ಯಾಯಮೂರ್ತಿ ದುಲಿಯಾ ಅವರ ಹೇಳಿಕೆಯು ನ್ಯಾಯಯುತ ತೀರ್ಪಿನಲ್ಲಿನ ನಮ್ಮ ಭರವಸೆಯನ್ನು ಮತ್ತಷ್ಟು ಬಲಪಡಿಸಿದೆ. ಕನಿಷ್ಠ ಪಕ್ಷದಲ್ಲಿ ಸಾಂವಿಧಾನಿಕ ಮೌಲ್ಯವನ್ನು ಮುಂದುವರೆಸಿದೆ. ಸಾವಿರಾರು ವಿದ್ಯಾರ್ಥಿನಿಯರು ತಮ್ಮ ಶಿಕ್ಷಣವನ್ನು ಪುನರಾರಂಭಿಸಲು ಕಾಯುತ್ತಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಹಿಜಬ್ ಕೇಸ್- ಸುಪ್ರೀಂನಿಂದ ಭಿನ್ನ ತೀರ್ಪು ಪ್ರಕಟ