ಸಲಿಂಗ ಸಂಬಂಧ ಕಾನೂನುಬದ್ಧಗೊಳಿಸಿದರೆ ಅಸ್ವಸ್ಥತೆ ಹೆಚ್ಚಳ – RSS ಮಹಿಳಾ ಅಂಗ ಸಂಸ್ಥೆ ಕಳವಳ

Public TV
1 Min Read
Same sex marriage

ನವದೆಹಲಿ: ಅನೇಕ ವೈದ್ಯರು ಹಾಗೂ ವೈದ್ಯಕೀಯ ವೃತ್ತಿಪರರು ಸಲಿಂಗ ಸಂಬಂಧ (Homosexuality) ಒಂದು ಅಸ್ವಸ್ಥತೆ ಎಂಬ ಅಭಿಪ್ರಾಯ ಹೊಂದಿದ್ದಾರೆ. ಸಲಿಂಗ ವಿವಾಹವನ್ನು( Same Sex Marriage) ಕಾನೂನುಬದ್ಧಗೊಳಿಸಿದರೆ ಅದು ಸಮಾಜದಲ್ಲಿ ಇನ್ನಷ್ಟು ಹೆಚ್ಚಾಗುತ್ತದೆ ಎಂದು ಆರ್‌ಎಸ್‌ಎಸ್ (RSS) ಮಹಿಳಾ ವಿಭಾಗದ ಅಂಗ ಸಂಸ್ಥೆ ಸಂವರ್ಧಿನಿ ನ್ಯಾಸ್ (Samwardhini Nyas) ತನ್ನ ಸಮೀಕ್ಷೆಯ ವರದಿಯಲ್ಲಿ ತಿಳಿಸಿದೆ.

supreme court same sex marriages

 

ಅಧುನಿಕ ವಿಜ್ಞಾನದ ಎಂಟು ವಿಭಿನ್ನ ಚಿಕಿತ್ಸಾ ಕಾರ್ಯದಲ್ಲಿ ತೊಡಗಿರುವ 318 ವೈದ್ಯರಿಂದ ಪ್ರತಿಕ್ರಿಯೆಗಳನ್ನು ಸಂಗ್ರಹಿಸಿ ಸಂಶೋಧನಾ ವರದಿ ತಯಾರಿಸಲಾಗಿದೆ. ಇದರಲ್ಲಿ 70% ನಷ್ಟು ವೈದ್ಯರು ಸಲಿಂಗ ಸಂಬಂಧ ಒಂದು ಅಸ್ವಸ್ಥತೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ 83% ಸಲಿಂಗ ಸಂಬಂಧ ಹೊಂದಿರುವ ವ್ಯಕ್ತಿಗಳಿಗೆ ಲೈಂಗಿಕ ರೋಗಗಳು ಹರಡುವುದು ವರದಿಯಿಂದ ದೃಡಪಟ್ಟಿದೆ ಎಂದು ರಾಷ್ಟ್ರ ಸೇವಿಕಾ ಸಮಿತಿಯ ಹಿರಿಯ ಕಾರ್ಯನಿರ್ವಹಣಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಸುಡಾನ್ ಸಂಘರ್ಷ – 17 ವಿಮಾನಗಳು, 5 ಹಡಗುಗಳು, 3,862 ಭಾರತೀಯರ ರಕ್ಷಣೆ

ಸಮೀಕ್ಷೆಯ ಪ್ರಶ್ನಾವಳಿಗೆ ಪ್ರತಿಕ್ರಿಯಿಸಿದ 67% ಕ್ಕಿಂತ ಹೆಚ್ಚು ವೈದ್ಯರು ಸಲಿಂಗ ಸಂಬಂಧದ ಪೋಷಕರು ತಮ್ಮ ಸಂತತಿಯನ್ನು ಸರಿಯಾಗಿ ಬೆಳೆಸಲು ಸಾಧ್ಯವಿಲ್ಲ ಎಂದು ಭಾವಿಸಿದ್ದಾರೆ. ಅಂತಹ ಮಾನಸಿಕ ಅಸ್ವಸ್ಥತೆಯ (Psychological Disorder) ರೋಗಿಗಳನ್ನು ಗುಣಪಡಿಸಲು ಸಮಾಲೋಚನೆ ಉತ್ತಮ ಆಯ್ಕೆಯಾಗಿದೆ. ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸುವ ಬೇಡಿಕೆಯ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಸಾರ್ವಜನಿಕ ಅಭಿಪ್ರಾಯವನ್ನು ತೆಗೆದುಕೊಳ್ಳಬೇಕು ಎಂದು ಸಂವರ್ಧಿನಿ ನ್ಯಾಸ್ ಅವರ ಸಮೀಕ್ಷೆ ಶಿಫಾರಸು ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ (D Y Chandrachud) ನೇತೃತ್ವದ ಸಂವಿಧಾನ ಪೀಠವು ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಿರುವ ಅರ್ಜಿಗಳ ವಾದವನ್ನು ಆಲಿಸುತ್ತಿರುವ ಹಿನ್ನೆಲೆಯಲ್ಲಿ ಸಂವರ್ಧಿನಿ ನ್ಯಾಸ್ ಈ ಸಮೀಕ್ಷೆಯನ್ನು ನಡೆಸಿದೆ. ಸಮೀಕ್ಷೆಗೆ ಪ್ರತಿಕ್ರಿಯಿಸಿದ 57% ಕ್ಕಿಂತ ಹೆಚ್ಚು ವೈದ್ಯರು ಈ ವಿಷಯದಲ್ಲಿ ಸುಪ್ರೀಂ ಕೋರ್ಟ್‍ನ (Supreme Court) ಮಧ್ಯಸ್ಥಿಕೆಯನ್ನು ನಿರಾಕರಿಸಿದ್ದಾರೆ ಎಂದು ಸಂಸ್ಥೆ ಹೇಳಿಕೊಂಡಿದೆ. ಇದನ್ನೂ ಓದಿ: ಸೇನಾ ವಾಹನದ ಮೇಲೆ ದಾಳಿ – ಓರ್ವ ಉಗ್ರನ ಹತ್ಯೆ

Share This Article