ದಿನದಿಂದ ದಿನಕ್ಕೆ ಬದಲಾಗುತ್ತಿರುವ ವಾತಾವರಣದಿಂದಾಗಿ ಆರೋಗ್ಯವು (Health) ಹದಗೆಡುತ್ತಿದೆ. ನೆಗಡಿ, ಕೆಮ್ಮು, ಜ್ವರದಂತಹ ಸಮಸ್ಯೆ ಅನೇಕರಲ್ಲಿ ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ನೆಗಡಿ, ಜ್ವರ ಬೇಗ ಕಡಿಮೆ ಆದರೂ ಒಣ ಕೆಮ್ಮು (Dry Cough) ಹಾಗೇ ಇರುತ್ತದೆ. ಈ ಒಣ ಕೆಮ್ಮಿನ ಕಿರಿಕಿರಿಯಿಂದ ಮುಕ್ತಿ ಪಡೆಯಲು ಕೆಲವು ಔಷಧಿಗಳನ್ನು ಸಿಂಪಲ್ ಆಗಿ ಮನೆಯಲ್ಲೇ ತಯಾರಿಸಿ.
ತುಳಸಿ: ಹಲವು ಔಷಧೀಯ ಗುಣಗಳನ್ನು ಹೊಂದಿರುವ ತುಳಸಿ ಹಲವು ರೋಗಗಳಿಗೆ ಉತ್ತಮ ಮದ್ದಾಗಿದೆ. ಕೆಮ್ಮನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ನಿಯಮಿತವಾಗಿ ತುಳಸಿ ಎಲೆಗಳನ್ನು ಸೇವಿಸಿ ಚೆನ್ನಾಗಿ ಅಗೆಯಬೇಕು. ಇದಕ್ಕೆ ಚಿಟಿಕೆ ಉಪ್ಪು ಅಥವಾ ಕಾಳುಮೆಣಸಿನ ಪುಡಿಯೊಂದಿಗೆ ಸೇವಿಸಿದರೆ ಕೆಮ್ಮು ಬೇಗ ಕಡಿಮೆಯಾಗುತ್ತದೆ.
Advertisement
Advertisement
ಬಿಸಿ ನೀರು, ಉಪ್ಪು: ಒಣ ಕೆಮ್ಮಿನಿಂದ ಉಂಟಾಗುವ ಅಸ್ವಸ್ಥತೆ ಮತ್ತು ಕಿರಿಕಿರಿ ಕಡಿಮೆ ಮಾಡಲು ಉಪ್ಪು ನೀರಿನಿಂದ ಗಾರ್ಗ್ಲಿಂಗ್ ಮಾಡಿ. ಇದರಿಂದಾಗಿ ಬಾಯಿ ಮತ್ತು ಗಂಟಲಿನ ಬ್ಯಾಕ್ಟೀರಿಯಾ ತೊಲಗಲು ಸಹಾಯ ಮಾಡುತ್ತದೆ. ಒಂದು ಟೀಸ್ಪೂನ್ ಟೇಬಲ್ ಉಪ್ಪನ್ನು ದೊಡ್ಡ ಗಾಜಿನ ಬೆಚ್ಚಗಿನ ನೀರಿನಲ್ಲಿ ಕರಗಿಸಿ, ಗಾರ್ಗ್ಲ್ ಮಾಡಿ. ಇದರಿಂದ ಕೆಮ್ಮು ಕಡಿಮೆ ಆಗುತ್ತದೆ. ಇದನ್ನೂ ಓದಿ: ವಯಸ್ಸಾದ ಲಕ್ಷಣ ಕಾಣಬಾರದೇ, ಹಾಗಾದರೆ ತುಪ್ಪ ಸೇವಿಸಿ
Advertisement
Advertisement
ಜೇನುತುಪ್ಪ, ಶುಂಠಿ: ಕೆಮ್ಮಿಗೆ ಜೇನುತುಪ್ಪ ಮತ್ತು ಶುಂಠಿ ಎರಡೂ ಅತ್ಯುತ್ತಮ ಔಷಧವೆಂದು ಸಾಬೀತಾಗಿದೆ. ಅಗತ್ಯ ಪ್ರಮಾಣದ ಶುಂಠಿ ರಸದೊಂದಿಗೆ ಜೇನುತುಪ್ಪವನ್ನು ಬೆರೆಸಿ ಸೇವಿಸಿದರೇ, ಕಡಿಮೆ ದಿನಗಳಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಇದರಿಂದ ದೇಹಕ್ಕೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಒಂದು ಚಮಚ ಶುಂಠಿ ರಸಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ದಿನಕ್ಕೆ ಎರಡು ಬಾರಿ ಈ ರಸ ಕುಡಿಯುವುದರಿಂದ ಬಹುಬೇಗ ಕೆಮ್ಮು ಕಡಿಮೆ ಮಾಡುತ್ತದೆ.
ತುಪ್ಪ ಮತ್ತು ಕರಿ ಮೆಣಸು: ತುಪ್ಪವು ಗಂಟಲನ್ನು ಮೃದುವಾಗಿಡುವ ಕೆಲಸ ಮಾಡುತ್ತದೆ. ಜೊತೆಗೆ ಕೆಮ್ಮು ಹೆಚ್ಚು ಕಾಣಿಸಿಕೊಂಡರೆ ಕರಿ ಮೆಣಸು ಉತ್ತಮ ಔಷಧವಾಗಿದೆ. ಕರಿಮೆಣಸಿನ ಪುಡಿಯ ಜೊತೆ ತುಪ್ಪ ಬೆರೆಸಿ ತಿಂದರೆ ಒಣ ಕೆಮ್ಮಿನಿಂದ ಮುಕ್ತಿ ಪಡೆಯಬಹುದು. ನಿಯಮಿತವಾಗಿ ದಿನಕ್ಕೆ ಎರಡು ಬಾರಿ ಹೀಗೆ ಮಾಡಿದ್ದಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು.
ಈರುಳ್ಳಿ ರಸ: ಈರುಳ್ಳಿ ಕೇವಲ ಆಹಾರಕ್ಕೆ ಪರಿಮಳವೊಂದೇ ಅಲ್ಲದೇ, ಔಷಧಿಗೂ ಬಳಸುತ್ತಾರೆ. ಈರುಳ್ಳಿ ಸಾರವು ಉರಿಯೂತದ ಪರಿಣಾಮವನ್ನು ಹೊಂದಿದೆ. ಇದರಿಂದಾಗಿ ಶ್ವಾಸನಾಳವನ್ನು ಸಡಿಲಗೊಳಿಸುತ್ತದೆ. ಇದು ಕೆಮ್ಮು ಸೆಳೆತವನ್ನು ಕಡಿಮೆ ಮಾಡುತ್ತದೆ. ಈರುಳ್ಳಿ ರಸಕ್ಕೆ ಜೇನುತುಪ್ಪ ಹಾಕಿ, ಮಿಶ್ರಣ ಮಾಡಬೇಕು. ಈ ಒಂದು ಚಮಚ ಮಿಶ್ರಣವನ್ನು ದಿನಕ್ಕೆ ಎರಡು ಬಾರಿ ಅಥವಾ ಮೂರು ಬಾರಿ ತೆಗೆದುಕೊಳ್ಳಿ.
ಏಲಕ್ಕಿ: ಒಣ ಕೆಮ್ಮಿಗೆ ಏಲಕ್ಕಿ ಪರಿಣಾಮಕಾರಿ ಆಯುರ್ವೇದ ಪರಿಹಾರವಾಗಿದೆ. ಇದು ಗಂಟಲನ್ನು ಶಮನಗೊಳಿಸಲು ಮತ್ತು ಉಸಿರಾಟದ ಪ್ರದೇಶವನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ. ಏಲಕ್ಕಿ ಶ್ವಾಸನಾಳದ ಉರಿಯೂತವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ಇದನ್ನೂ ಓದಿ: ಸೆಣಬಿನ ಬೀಜದ ಎಣ್ಣೆ ಬಗ್ಗೆ ತಿಳಿದಿದ್ದೀರಾ? ಇದರಲ್ಲಿದೆ ತ್ವಚೆ ಸೌಂದರ್ಯದ ಗುಟ್ಟು