ಇತ್ತೀಚೆಗೆ ವಿಪರೀತ ಚಳಿಯಿಂದಾಗಿ ಜನರಲ್ಲಿ ಶೀತ (Common Cold), ಕೆಮ್ಮು, ಉಸಿರಾಟದ ತೊಂದರೆ ಸಾಮಾನ್ಯವಾಗಿಯೇ ಕಾಣಿಸಿಕೊಳ್ಳುತ್ತಿದೆ. ಇದರಿಂದಾಗಿ ಅನೇಕರಿಗೆ ಸರಿಯಾಗಿ ಕೆಲಸ ಮಾಡಲು ಆಗುವುದಿಲ್ಲ, ಜೊತೆಗೆ ಶಾಲಾ ವಿದಾರ್ಥಿಗಳಿಗೂ ಪಾಠದ ಕಡೆಯೂ ಗಮನಕೊಡಲಾಗುವುದಂತಹ ಸಮಸ್ಯೆ ಸಾಮಾನ್ಯವಾಗಿದೆ. ಆದರೆ ಈ ಶೀತವನ್ನು ಹೊಗಲಾಡಿಸಲು ಕೆಲವು ಸುಲಭ ಮನೆಮದ್ದುಗಳು (Home Remedies) ಇಲ್ಲಿವೆ.
ಶುಂಠಿ ಟೀ: ಚಹಾ ಪ್ರಿಯರಿಗಂತೂ ಶುಂಠಿ ಚಹಾ ಎಂದರೆ ಅಚ್ಚುಮೆಚ್ಚು. ಶುಂಠಿ ಟೀ ಕುಡಿಯಲು ಉತ್ತಮ ರುಚಿ ಮಾತ್ರವಲ್ಲದೇ ಸಾಮಾನ್ಯ ಶೀತ ಹಾಗೂ ಕೆಮ್ಮನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ ಇದು ಮೂಗು ಕಟ್ಟುವಿಕೆಯನ್ನು ಕಡಿಮೆ ಮಾಡುತ್ತದೆ. ಇದನ್ನೂ ಓದಿ: ನೆಗಡಿಗೆ ರಾಮಬಾಣ – ಶುಂಠಿ ಚಹಾ ರೆಸಿಪಿ
Advertisement
Advertisement
ನಿಂಬೆ, ದಾಲ್ಚಿನ್ನಿ, ಜೇನುತುಪ್ಪದ ಮಿಶ್ರಣ: ನೆಗಡಿ ಹಾಗೂ ಕೆಮ್ಮಿಗೆ ಮತ್ತೊಂದು ಪರಿಣಾಮಕಾರಿ ಮದ್ದು ಎಂದರೆ ನಿಂಬೆ, ದಾಲ್ಚಿನ್ನಿ ಹಾಗೂ ಜೇನು ತುಪ್ಪದ ಮಿಶ್ರಣವಾಗಿದೆ. ಇದನ್ನು ಶೀತವಿದ್ದಾಗ ದಿನಕ್ಕೆ 2 ಬಾರಿ ಸೇವಿಸಬೇಕು. ಇದರಿಂದಾಗಿ ಶೀತ ಹಾಗೂ ಕೆಮ್ಮು ಅತಿ ಬೇಗ ಕಡಿಮೆ ಆಗುತ್ತದೆ.
Advertisement
Advertisement
ಉಗುರು ಬೆಚ್ಚನೆಯ ನೀರು: ಚಳಿಗಾಲದ ಸಮಯದಲ್ಲಿ ಉಗುರು ಬೆಚ್ಚನೆಯ ನೀರು ಕುಡಿಯುವುದರಿಂದ ದೇಹವೂ ಆರಾಮದಾಯಕವಾಗೆನಿಸುತ್ತದೆ. ಸಾಮಾನ್ಯ ಶೀತ, ಕೆಮ್ಮು, ಹಾಗೂ ಗಂಟಲು ನೋವಿರುವವರು ಆಗಾಗ ಬೆಚ್ಚಗಿನ ನೀರನ್ನು ಕುಡಿಯುತ್ತಿರಬೇಕು. ಇದರಿಂದಾಗಿ ಗಂಟಲಿನ ಊರಿತ ಕಡಿಮೆ ಆಗುತ್ತದೆ.
ಅರಿಶಿನ ಹಾಗೂ ಹಾಲು: ಅರಿಶಿನವು ರೋಗನಿರೋಧಕ ಗುಣಕ್ಕೆ ಹೆಸರುವಾಸಿ ಆಗಿದೆ. ಇದು ಅನೇಕ ಅನಾರೋಗ್ಯಕ್ಕೆ ಉತ್ತಮ ಚಿಕಿತ್ಸೆಯಾಗಿದೆ. ಬೆಚ್ಚಗಿನ ಹಾಲಿನಲ್ಲಿ ಅರಿಶಿನ ಬೆರೆಸಿ ಕುಡಿಯುವುದರಿಂದ ಆದಷ್ಟು ಬೇಗ ಶೀತ ಕೆಮ್ಮಿನಿಂದ ಮುಕ್ತಿ ಪಡೆಯಬಹುದು. ಇದನ್ನೂ ಓದಿ: ಆರೋಗ್ಯ ಹೆಚ್ಚಿಸುವ ಬೆಟ್ಟದ ನೆಲ್ಲಿಕಾಯಿ
ಕರಿಮೆಣಸು: ಕರಿಮೆಣಸನ್ನು ಬೆಚ್ಚಗಿನ ನೀರಿನಲ್ಲಿ ಮಿಶ್ರಣ ಮಾಡಿ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಹಾಗೆಯೇ ಇದು ಶೀತ ಮತ್ತು ಕೆಮ್ಮನ್ನು ತಡೆಯುತ್ತದೆ. ಅರ್ಧ ಟೀಸ್ಪೂನ್ ಕರಿಮೆಣಸು ಪುಡಿಯನ್ನು ತುಪ್ಪದೊಂದಿಗೆ ಸೇವಿಸುವುದರಿಂದ ಕೆಮ್ಮು ಸಮಸ್ಯೆಯಿಂದ ಪಾರಾಗಬಹುದು. ಇದನ್ನೂ ಓದಿ: ಒಣ ಕೆಮ್ಮಿಗೆ ಮನೆಯಲ್ಲಿಯೇ ಮಾಡಿ ಸಿಂಪಲ್ ಮದ್ದು
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k