ಗೃಹ ಸಚಿವರೇ ನಿಮ್ಮದು ಯಾವ ನ್ಯಾಯ? ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಏಕೆ?- ಸಾರ್ವಜನಿಕರಿಂದ ತರಾಟೆ

Public TV
1 Min Read
G.Parameshwar

– ಜೈಲಿನಲ್ಲಿ ದರ್ಶನ್‌ಗೆ ವಿವಿಐಪಿ ಟ್ರೀಟ್ಮೆಂಟ್
– ತಾರಕಕ್ಕೇರಿದ ಸಾರ್ವಜನಿಕ ಆಕ್ರೋಶ

ಬೆಂಗಳೂರು: ಗೃಹ ಸಚಿವರೇ (Home Minister) ನಿಮ್ಮದು ಯಾವ ನ್ಯಾಯ? ಗುಬ್ಬಿ ಮೇಲೆ ಬ್ರಹ್ಮಾಸ್ತ್ರ  ಏಕೆ? ಜೈಲಿನಲ್ಲಿ ವಿವಿಐಪಿ ಟ್ರೀಟ್ಮೆಂಟ್ ಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಹಲವು ಪ್ರಶ್ನೆಗಳು ಎದ್ದಿವೆ.

ದೊಡ್ಡವರ ತಪ್ಪು ಇಲ್ಲವಾ? ಉನ್ನತ ಅಧಿಕಾರಿಗಳನ್ನ ಏಕೆ ಅಮಾನತು ಮಾಡಿಲ್ಲ? ಬರೀ ಕೆಳಹಂತದ ಅಧಿಕಾರಿಗಳಷ್ಟೇ ನಿಮ್ಮ ಟಾರ್ಗೆಟಾ ಎಂಬ ಸಾರ್ವಜನಿಕರ ಆಕ್ರೋಶ ಜೋರಾಗಿದೆ. ಇದನ್ನೂ ಓದಿ: ಪರಮೇಶ್ವರ್‌ಗೆ ಮುಜುಗರ: ವಿಧಾನಸೌಧದಲ್ಲಿ ಮಾಧ್ಯಮಗಳ ಮೇಲೆ ಗರಂ

ಜೈಲಿನ ರಾಜಾತಿಥ್ಯ ವಿಚಾರದಲ್ಲಿ ಮೇಲಾಧಿಕಾರಿಗಳ ಹೊಣೆಗಾರಿಕೆ ಜವಾಬ್ದಾರಿ ಇಲ್ಲವಾ? ಜೈಲು ಸೂಪರಿಡೆಂಟ್, ಜೈಲು ಎಎಸ್‌ಪಿ ಜವಾಬ್ದಾರಿ ಏನು? ಕಾರಾಗೃಹ ಡಿಜಿಪಿ ಜವಾಬ್ದಾರಿ ಏನು? ಮೇಲಧಿಕಾರಿಗಳ ಮೇಲೆ ಕ್ರಮ ಯಾವಾಗ? ಈ ಎಲ್ಲ ಪ್ರಶ್ನೆಗಳಿಗೆ ಗೃಹ ಸಚಿವ ಪರಮೇಶ್ವರ್ (GParameshwar) ಅವರೇ ಉತ್ತರ ಕೊಡಬೇಕಿದೆ ಎಂದು ಪ್ರಶೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಇದನ್ನೂ ಓದಿ: ಜೈಲಿನಲ್ಲಿ ಕೊಲೆ ಆರೋಪಿ ದರ್ಶನ್‌ಗೆ ರಾಜಾತಿಥ್ಯ ನೀಡಿದ ಪ್ರಕರಣದಲ್ಲಿ ಲೋಪ ಆಗಿರೋದು ಸತ್ಯ: ರಾಮಲಿಂಗಾರೆಡ್ಡಿ

ಈ ನಡುವೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ (R Ashok) ಮಾತನಾಡಿ, ಜೈಲಿನಲ್ಲಿ ಫೋಟೋ ತೆಗೆಯೋಕೆ ಮೊಬೈಲ್ ಎಲ್ಲಿಂದ ಸಿಕ್ಕಿತ್ತು? ಪರಮೇಶ್ವರ್ ಹೇಳಿಕೆ ಕೊಟ್ಟಿದ್ದಾರೆ. ಆದರೆ ಇದೆಲ್ಲ ನುಳುಚಿಕೊಳ್ಳುವ ವಿಚಾರ ಎಂದು ಟೀಕಿಸಿದರು. ಇದನ್ನೂ ಓದಿ: ದರ್ಶನ್‌ನನ್ನು ಬೇರೆ ಜೈಲಿಗೆ ಕಳಿಸಿ: ಸಿಎಂ ತಾಕೀತು

ಜೈಲಲ್ಲಿ ರಾಜಾರೋಷವಾಗಿ ಅಕ್ರಮ ನಡೆಯುತ್ತಿದೆ. ಜೈಲಲ್ಲಿ ನಡೆದ ಘಟನೆಯಿಂದ ಕಾನೂನು ಸುವ್ಯವಸ್ಥೆ ಸರಿಯಾಗಿಲ್ಲ. ಕಾಂಗ್ರೆಸ್ (Congress) ಸರ್ಕಾರ ಇದಕ್ಕೆ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು. ಇಷ್ಟೆಲ್ಲಾ ಅತ್ಯಾಚಾರ ಆಗುತ್ತಿದೆ, ಕೆಲ ಮಂತ್ರಿಗಳು ನಮಗೆ ಯಾವ ಖಾತೆ ಸಿಗುತ್ತೆ, ಯಾವ ಖಾತೆ ಹೋಗುತ್ತೆ ಎಂಬ ಭೀತಿಯಲ್ಲಿದ್ದಾರೆ ಎಂದು ವ್ಯಂಗ್ಯ ಮಾತುಗಳನ್ನಾಡಿದರು. ಇದನ್ನೂ ಓದಿ: ಸಿದ್ದರಾಮಯ್ಯ ಕಂಡರೆ ಬಿಜೆಪಿಯವರಿಗೆ ಭಯ, ನಮ್ಮನ್ನು ಏನು ಮಾಡಲು ಸಾಧ್ಯವಿಲ್ಲ: ಪ್ರದೀಪ್ ಈಶ್ವರ್ ಕಿಡಿ

Share This Article