ಬೆಂಗಳೂರು: ವಾಲ್ಮೀಕಿ ನಿಗಮದ (Valmiki Development Corporation) ಅಧಿಕಾರಿ ಆತ್ಮಹತ್ಯೆ ವಿಚಾರ ಸಚಿವ ನಾಗೇಂದ್ರ ತಲೆದಂಡಕ್ಕೆ ಪುರಾವೆಗಳು ಬೇಕಲ್ಲವಾ? ಡೆತ್‌ನೋಟ್‌ನಲ್ಲಿ ಸಚಿವರು ಮೌಖಿಕ ಆದೇಶ ಕೊಟ್ಟಿದ್ದಾರೆ ಅಂತಿದೆ. ಡೆತ್‌ನೋಟ್ ಪರಿಶೀಲನೆ ಆಗಬೇಕು ಎಂದು ಗೃಹ ಸಚಿವ ಜಿ.ಪರಮೇಶ್ವರ್ (G.Parameshwar) ಹೇಳಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನು ಡೆತ್‌ನೋಟ್ ನೋಡಿಲ್ಲ. ಅದನ್ನ ಪರಿಶೀಲನೆ ಮಾಡ್ತಾರೆ. ಡೆತ್‌ನೋಟ್ ಪರಿಶೀಲನೆ ಆಗುವ ವರೆಗೆ ಸ್ಪಷ್ಟವಾಗಿ ಹೇಳಲು ಬರಲ್ಲ. ಕೆಲವೊಂದು ಸಂದರ್ಭಗಳಲ್ಲಿ ಬೇಗ ಡೆತ್‌ನೋಟ್ ಸಿಗುತ್ತೆ. ಕೆಲವು ಬಾರಿ ತಡವಾಗಿ ಸಿಗುತ್ತೆ. ಎಲ್ಲ ಆದ್ಮೇಲೆ ಡೆತ್‌ನೋಟ್ ಸಿಕ್ಕ ಉದಾಹರಣೆಗಳು ಇವೆ. ಡೆತ್‌ನೋಟ್ ಸತ್ಯಾಸತ್ಯತೆ ಪರಿಶೀಲನೆ ಮಾಡಿ ಮುಂದಕ್ಕೆ ಹೋಗುತ್ತೇವೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 88 ಕೋಟಿ ಅಕ್ರಮ – ಎಂಡಿ, ಲೆಕ್ಕಾಧಿಕಾರಿ ಅಮಾನತು
Advertisement
Advertisement
ಈಶ್ವರಪ್ಪ ಪ್ರಕರಣವನ್ನು ಇದಕ್ಕೆ ಹೋಲಿಕೆ ಮಾಡಬೇಡಿ. ಆ ಪ್ರಕರಣದಲ್ಲಿ ಈಶ್ವರಪ್ಪ ಹೆಸರಿತ್ತು. ಇಲ್ಲಿ ಆ ರೀತಿ ಆಗಿಲ್ಲ. ತನಿಖೆ ಆಗುವ ವರೆಗೆ ಕಾಯಬೇಕಲ್ವಾ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.
Advertisement
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣದ ತನಿಖೆಗೆ ಆದೇಶವಾಗಿದೆ. ತನಿಖೆ ಬಳಿಕ ಎಲ್ಲಾ ಗೊತ್ತಾಗುತ್ತೆ. ಒಂದು ಅಕೌಂಟ್‌ನಿಂದ ಇನ್ನೊಂದು ಅಕೌಂಟ್‌ಗೆ ಹಣ ವರ್ಗಾವಣೆ ಆಗಿ ಹೋಗಿದೆ. ಅಲ್ಲಿಂದ ನಾಲ್ಕೈದು ಅಕೌಂಟ್‌ಗೆ ಹಣ ಹೋಗಿದೆ. ತನಿಖೆ ಆಗುವ ವರೆಗೂ ಏನೂ ಹೇಳಲು ಆಗಲ್ಲ ಎಂದರು. ಇದನ್ನೂ ಓದಿ: ಏರ್‌ಪೋರ್ಟ್‌ನಲ್ಲೇ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಎಸ್‍ಐಟಿ ಸಿದ್ಧತೆ: ಪರಮೇಶ್ವರ್
Advertisement
ನಿನ್ನೆ 185 ಕೋಟಿ ಅಂತಾ ಹೇಳಿದ್ರೆ, ಇವತ್ತು 97 ಕೋಟಿ ಅಂತಾ ಹೇಳುತ್ತಿದ್ದಾರೆ. ಎಲ್ಲವೂ ತನಿಖೆಯಲ್ಲಿ ಗೊತ್ತಾಗುತ್ತೆ ಎಂದು ತಿಳಿಸಿದರು.