ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಎಸ್‌ಐಟಿ (SIT) ಅಧಿಕಾರಿಗಳು ಬಂಧಿಸುತ್ತಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ (G.Parameshwar) ತಿಳಿಸಿದರು.
ಪ್ರಜ್ವಲ್ ವಾಪಸ್ ಆಗುವ ಕುರಿತು ಮಾತನಾಡಿದ ಅವರು, ವಾರೆಂಟ್ ಇರುವುದರಿಂದ ಪ್ರಜ್ವಲ್ ರೇವಣ್ಣ ಅವರು ಬರುತ್ತಿದ್ದಂತೆ ಅರೆಸ್ಟ್ ಮಾಡಲೇಬೇಕಲ್ಲವೇ? ಎಸ್‌ಐಟಿಯವರು ಅದನ್ನ ಗಮನಿಸ್ತಾರೆ. ಅವರ ವಿರುದ್ಧ ವಾರೆಂಟ್ ಇರುವುದರಿಂದ ಅರೆಸ್ಟ್ ಮಾಡಬೇಕಲ್ಲ, ಅದನ್ನ ಮಾಡ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಜರ್ಮನಿ ಟೂರ್: 7 ದಿನದ ರಹಸ್ಯ
Advertisement
Advertisement
ಎಲ್ಲಾ ರೀತಿಯಲ್ಲೂ ಕ್ರಮ ತೆಗೆದುಕೊಳ್ಳಬೇಕು. ವಾರೆಂಟ್ ಜಾರಿಯಾಗಿರುವುದರಿಂದ ಅರೆಸ್ಟ್ ಮಾಡಬೇಕು, ಅರೆಸ್ಟ್ ಮಾಡ್ತಾರೆ. ಎಸ್‌ಐಟಿ ಅವರು ಕಾಯ್ತ ಇದ್ದಾರೆ. ಏರ್‌ಪೋರ್ಟ್‌ಗೆ ಬಂದ ಮೇಲೆ ಅರೆಸ್ಟ್ ಮಾಡ್ತಾರೆ. ನಂತರ ಅವರ ಹೇಳಿಕೆಗಳು ಮತ್ತೊಂದು ಪ್ರಕ್ರಿಯೆ ಶುರು ಆಗುತ್ತೆ ಎಂದರು.
Advertisement
ಪೆನ್‌ಡ್ರೈವ್ ಕೇಸಲ್ಲಿ ಹಾಸನದ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರ ಬಂಧನದಲ್ಲಿ ಬಿಜೆಪಿ, ಕಾಂಗ್ರೆಸ್, ದಳ ಅಂತಾ ಪ್ರಶ್ನೆ ಇಲ್ಲ. ಯಾರು ಈ ಪ್ರಕರಣದಲ್ಲಿ ಭಾಗಿಯಾಗಿರುತ್ತಾರೋ ಅಂಥವರನ್ನ ಅರೆಸ್ಟ್ ಮಾಡ್ತಾರೆ. ಇದೀಗ 11 ಜನರನ್ನ ಅರೆಸ್ಟ್ ಮಾಡಿದ್ದಾರೆ. ಯಾರು ಯಾರು ಇದರಲ್ಲಿ ಭಾಗಿಯಾಗಿದ್ದಾರೆ ಎನ್ನುವ ಅನುಮಾನ ಬರುತ್ತೋ, ಅವರನ್ನ ಬಂಧಿಸುತ್ತಾರೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಮಲಗುತ್ತಿದ್ದ ಕೊಠಡಿಯಲ್ಲಿದ್ದ ಹಾಸಿಗೆ, ದಿಂಬು ಇತರೆ ವಸ್ತು ಕೊಂಡೊಯ್ದ ಎಸ್‌ಐಟಿ
Advertisement
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣ ಬಗ್ಗೆ ಪ್ರತಿಕ್ರಿಯಿಸಿ, ಚಂದ್ರಶೇಖರ್ ಸಾವಿನ ವಿಚಾರವಾಗಿ ಸಿಐಡಿ ತನಿಖೆ ನಡೆಯುತ್ತಿದೆ. ಈಗಾಗಲೇ ಆ ಇಲಾಖೆಯಿಂದ ದೂರು ಬಂದಿದೆ. 187 ಕೋಟಿ ಹಣ ವರ್ಗಾವಣೆ ಆಗಿದೆ ಅಂತಾ ಒಬ್ಬೊಬ್ಬರು ಒಂದು ಅಮೌಂಟ್ ಹೇಳ್ತಿದ್ದಾರೆ. 84 ಕೋಟಿ, 88 ಕೋಟಿ, 94 ಕೋಟಿ ಅಂತೆಲ್ಲಾ ಹೇಳ್ತಿದ್ದಾರೆ. ತನಿಖೆ ನಡೆಯುತ್ತಿದೆ, ಸತ್ಯ ಹೊರ ಬರುತ್ತೆ. ಬೇರ ಅಕೌಂಟ್‌ಗಳಿಗೆ ಹಣ ಹೋಗಿದೆ ಅಂತಾ ಮಾಹಿತಿ ಇದೆ. ಇದರ ಬಗ್ಗೆ ತನಿಖೆ ನಡೆಯುತ್ತಿದೆ. ಬಿಜೆಪಿ ಯವರು ರಾಜೀನಾಮೆ ಕೇಳ್ತಾನೆ ಇರ್ತಾರೆ. ಪ್ರತಿಯೊಂದು ಘಟನೆಗೂ ರಾಜೀನಾಮೆ ಕೇಳ್ತಾರೆ. ಯಾರ ಸೂಚನೆ ಮೇರೆಗೆ ಹಣ ಹೋಗಿದೆ ಅಂತಾ ತನಿಖೆ ನಡೆಯುತ್ತಿದೆ. ಡೆತ್‌ನೋಟ್‌ನಲ್ಲಿ ಸಚಿವರು ಅಂತಾ ಬರೆದಿದ್ದಾರೆ. ಇದರ ಬಗ್ಗೆ ತನಿಖೆ ನಡೆಯುತ್ತಿದೆ. ನೇರವಾಗಿ ಎಲ್ಲಿಯೂ ಸಚಿವರ ಹೆಸರು ಹೇಳಿಲ್ಲ. ಸಂತೋಷ್ ಪಾಟೀಲ್ ಪ್ರಕರಣದಲ್ಲಿ ಸಚಿವರ ಹೆಸರು ಹೇಳಿದ್ರು. ಹಾಗಾಗಿ ನಾವು ರಾಜೀನಾಮೆ ಕೇಳಿದ್ದು ಎಂದು ಸ್ಪಷ್ಟಪಡಿಸಿದರು.
ಪರಿಷತ್ ಟಿಕೆಟ್ ಹಂಚಿಕೆ ವಿಚಾರವಾಗಿ ಅಸಮಾಧಾನ ಕುರಿತು ಮಾತನಾಡಿ, ಪಕ್ಷಕ್ಕೆ ಕೆಲಸ ಮಾಡಿ ಅನೇಕ ಅನುಭವ ಇರುವವರಿಗೆ ಎಂಎಲ್‌ಸಿ ಅವಕಾಶ ಕೊಡಬೇಕು. ಅವರು ನಮ್ಮ ಸಲಹೆಯನ್ನು ಕೇಳಿಲ್ಲ. ಇಲಾಖೆ ವಿಚಾರವಾಗಿ ನಾನು ಸಿಎಂ ಭೇಟಿ ಮಾಡಿದ್ದು. ಈ ವೇಳೆ ಪರಿಷತ್ ವಿಚಾರ ಚರ್ಚೆಯಾಗಿಲ್ಲ. ಅಲ್ಲಿ ಇರೋದು 7 ಸ್ಥಾನ. ಎಷ್ಟು ಅರ್ಜಿಗಳು ಬಂದಿವೆ ಅಂತಾ ನನಗೆ ಗೊತ್ತಿಲ್ಲ. ನಾನು ಇದನ್ನು ಪತ್ರಿಕೆಯಲ್ಲಿ ನೋಡಿದೆ. ಅದನ್ನು ಸ್ಕ್ರೀನಿಂಗ್ ಮಾಡೋದು ತುಂಬಾ ಕಷ್ಟ. ಮೊದಲೇ ಹೈಪವರ್ ಕಮಿಟಿ ಮಾಡಿ ಸಲಹೆ ಪಡೆಯಬೇಕಿತ್ತು. ಅದು ಇವಾಗ ಕಾಲ ಮೀರಿ ಹೋಗಿದೆ. ಈಗಾಗಲೇ ಸಿಎಂ, ಡಿಸಿಎಂ ದೆಹಲಿಗೆ ಹೋಗಿಬಿಟ್ಟಿದ್ದಾರೆ ಎಂದರು.