ಬೆಂಗಳೂರು: ಯಾವುದೇ ಕಾರಣಕ್ಕೂ ನಾನು ಎರಡೂವರೆ ವರ್ಷದ ಬಳಿಕ ಸಚಿವ ಸ್ಥಾನ ಬಿಟ್ಟುಕೊಡುವುದಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ (G.Parameshwar) ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವೇಳೆ ಎರಡೂವರೆ ವರ್ಷ ಆದ ಮೇಲೆ ಹಿರಿಯ ಸಚಿವರು ಸಚಿವ ಸ್ಥಾನ ತ್ಯಾಗ ಮಾಡಬೇಕು ಎಂಬ ಸಚಿವ ಮುನಿಯಪ್ಪ (K.H Muniyappa) ಹೇಳಿಕೆಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಮುನಿಯಪ್ಪ ಅವರ ಹೇಳಿಕೆಗೆ ನನ್ನ ಸಹಮತ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ರೈಲಿನಲ್ಲಿ ನಾಲ್ವರಿಗೆ ಶೂಟೌಟ್ ಮಾಡಿದ್ದ ಅಧಿಕಾರಿ ಸೇವೆಯಿಂದ ವಜಾ
ಸಚಿವ ಮುನಿಯಪ್ಪ ಅವರ ಮಾತಿಗೆ ನನ್ನ ಒಪ್ಪಿಗೆ ಇಲ್ಲ. ನಾನು ಯಾಕೆ ಎರಡೂವರೆ ವರ್ಷ ಆದ ಮೇಲೆ ಸಚಿವ ಸ್ಥಾನ ತ್ಯಾಗ ಮಾಡಲಿ? ಅವರ ವೈಯಕ್ತಿಕ ಅಭಿಪ್ರಾಯದಲ್ಲಿ ತ್ಯಾಗದ ಬಗ್ಗೆ ಹೇಳಿರಬಹುದು. ಆ ವಿಚಾರದಲ್ಲಿ ತಪ್ಪೇನು ಇಲ್ಲ. ಅವರು ಹೇಳಿದರೆ, ಅವರು ಸ್ಥಾನ ಬಿಟ್ಟು ಕೊಡುತ್ತಾರೆ. ನಾನು ಯಾಕೆ ಸಚಿವ ಸ್ಥಾನ ಬಿಟ್ಟು ಕೊಡಲಿ. ನಾನು ಸ್ಥಾನ ಬಿಟ್ಟು ಕೊಡುವ ಬಗ್ಗೆ ಮಾತನಾಡಿಲ್ಲ ಎಂದು ಹೇಳಿದ್ದಾರೆ.
ಸಿಎಂ ಆಗೋ ಅವಕಾಶ ಬಂದರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಅವರು, ಅದು ಅವಕಾಶ ಬಂದ ಮೇಲೆ ನೋಡೊಣ ಎಂದು ತೆರಳಿದ್ದಾರೆ. ಇದನ್ನೂ ಓದಿ: 271 ಪ್ರಯಾಣಿಕರಿದ್ದ ವಿಮಾನದಲ್ಲಿ ಪೈಲಟ್‌ಗೆ ಹೃದಯಾಘಾತ – ತುರ್ತು ಭೂಸ್ಪರ್ಶ ಮಾಡಿದ ಸಹ ಪೈಲಟ್‌ಗಳು
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]