ಬೆಂಗಳೂರು: ಮುಡಾ ಹಗರಣ (MUDA Scam) ಸೇರಿದಂತೆ ಪಕ್ಷದ ಸಂಘಟನೆಯ ಬಗ್ಗೆಯೂ ಹೈಕಮಾಂಡ್ ಜೊತೆ ಚರ್ಚೆ ಮಾಡಲಾಗಿದೆ ಎಂದು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ (G Parameshwar) ಹೇಳಿದರು.
ದೆಹಲಿಯಿಂದ ಆಗಮಿಸಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda Airport) ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೆಹಲಿಗೆ ಹೋಗಿ ಹೈಕಮಾಂಡ್ ಜೊತೆ ಚರ್ಚೆ ಮಾಡಿಕೊಂಡು ಬಂದಿದ್ದೇನೆ. ಮುಡಾ ಹಗರಣ ಒಂದೇ ಅಲ್ಲ ಪಕ್ಷ ಸಂಘಟನೆ ಬಗ್ಗೆ ಎಲ್ಲಾ ಚರ್ಚೆ ಮಾಡಿದ್ದೇವೆ. ಸಿಎಂ ಡಿಸಿಎಂ ಮತ್ತು ಹಲವು ಸಚಿವರು ಸಹ ಬಂದಿದ್ದರು. ಸರ್ಕಾರದ ಆಡಳಿತ ಬಗ್ಗೆ ಒಂದಷ್ಟು ಚರ್ಚೆ ಮಾಡಿದ್ದೇವೆ ಎಂದರು. ಇದನ್ನೂ ಓದಿ: Shivamogga | ಕಾಡಾನೆ ದಾಳಿಗೆ ಕೃಷಿ ಕಾರ್ಮಿಕ ಬಲಿ
- Advertisement
ನೀವು ನಿರೀಕ್ಷೆ ಮಾಡಿದಂತ ವಿಚಾರಗಳು ಏನು ಚರ್ಚೆಯಾಗಿಲ್ಲ. ಸಂದರ್ಭ ಬಂದಾಗ ಅರ್ಕಾವತಿ ಡಿನೋಟಿಫಿಕೇಷನ್ ವರದಿ ಬಹಿರಂಗ ಮಾಡುತ್ತೇವೆ. ಸರ್ಕಾರದಲ್ಲಿ ಎಲ್ಲವು ಪಾರದರ್ಶಕವಾಗಿರುತ್ತದೆ. ಆ ರೀತಿ ಮುಚ್ಚಿಡುವಂತದ್ದು ಏನು ಇಲ್ಲ. ಸಚಿವರಿಗೆ ಕೊಕ್ ಅಂತಹ ವಿಚಾರ ಏನು ಚರ್ಚೆ ಆಗಿಲ್ಲ. ಬೈರತಿ ಸುರೇಶ್ ಅವರು ಮಗನ ಮದುವೆಯಲ್ಲಿ ಬ್ಯುಸಿಯಾಗಿದ್ದಾರೆ. ಅದಕ್ಕೆ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ ಅಷ್ಟೇ. ಕಾರ್ಕಳದಲ್ಲಿ ಯುವತಿ ಅತ್ಯಾಚಾರ ಆರೋಪಿಯ ಬಂಧನವಾಗಿದೆ. ಮುಂದೆ ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: J&K Poll Manifesto | ಪಿಡಿಪಿ ಅಧಿಕಾರಕ್ಕೆ ಬಂದ್ರೆ 200 ಯೂನಿಟ್ ವಿದ್ಯುತ್ ಉಚಿತ – ಮೆಹಬೂಬಾ ಮುಫ್ತಿ
- Advertisement