ಬೆಂಗಳೂರು: ಪೆನ್ ಡ್ರೈವ್ ಹಂಚಿದ ತಿಮಿಂಗಿಲ ಯಾರು ಅಂತ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (HD Kumaraswamy) ಅವರಿಗೆ ಗೊತ್ತಿದ್ದರೆ ಮಾಹಿತಿ ಕೊಡಲಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (Dr.G Parameshwar) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ತಿಮಿಂಗಿಲ ಯಾರು ಅಂತ ಗೊತ್ತಿದ್ದರೆ ಹೇಳಬಹುದಲ್ವ. ಕುಮಾರಸ್ವಾಮಿ ತಿಮಿಂಗಿಲ ಯಾರೂ ಅಂತ ಹೇಳಿದರೆ ಮುಗಿದು ಹೋಗುತ್ತದೆ. ತಿಮಿಂಗಿಲ ಯಾರೂ ಅಂತ ಕುಮಾರಸ್ವಾಮಿ ಗೆ ಗೊತ್ತಿದೆ ಹಾಗಾದರೆ ಅದನ್ನು ಹೇಳದೇ ಇರೋದೇ ದೊಡ್ಡ ತಪ್ಪಲ್ವಾ?. ತಿಮಿಂಗಿಲ ಯಾರೂ ಅಂತ ಕುಮಾರಸ್ವಾಮಿ ಹೇಳಿಬಿಡಲಿ. ಅಲ್ಲಿಗೆ ಎಲ್ಲವೂ ಮುಗಿದು ಹೋಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಪೆನ್‌ಡ್ರೈವ್ ಪ್ರಕರಣದಲ್ಲಿ ಕಾಂಗ್ರೆಸ್ ಕೈವಾಡ, ಬಿಜೆಪಿ ಮೇಲೆ ಆರೋಪ ಹೊರಿಸುವ ಪ್ರಯತ್ನ: ಅಶೋಕ್
Advertisement
Advertisement
ಪ್ರಜ್ವಲ್ ಎಲ್ಲಿದ್ದಾನೆ ಎಂಬುದು ಎಸ್ಐಟಿಗೆ (SIT) ಗೊತ್ತಿದೆ. ನಿಮಗೇನಾದರೂ ಮಾಹಿತಿ ಇದೆಯಾ ನಿಮಗೆ? ಪ್ರಜ್ವಲ್ ಎಲ್ಲಿದ್ದಾನೆ ಅಂತ ನಿಮಗೇನಾದರೂ ಗೊತ್ತಿದೆಯಾ?. ಗೊತ್ತಿದ್ದರೆ ಹೇಳಿ ನೀವೇ, ನಮಗೂ ಸಹಾಯ ಆಗುತ್ತದೆ. ಸಿಎಂ ಜೊತೆಗೆ ಸಭೆ ಬಗ್ಗೆ ನಿಮಗೆ ಹೇಳುವ ವಿಚಾರ ಏನೂ ಇಲ್ಲ. ಸಿಎಂ ಕಡೆಯಿಂದ ಕೆಲ ಸೂಚನೆಗಳು ಇದ್ದಾವೆ. ಆದರೆ ನಿಮಗೆ ಹೇಳಲ್ಲ. ಜಾರಕಿಹೊಳಿ ಅವರ ಮನೆಗೆ ಹೋಗಿದ್ದೆ.ಅವರ ಮಗಳು ಚುನಾವಣೆಗೆ ನಿಂತಿದ್ರು. ಅದರ ಬಗ್ಗೆ ಹೋಗಿ ಚರ್ಚೆ ಮಾಡಿದ್ದೆ. ಸಮುದಾಯವಾರು ಡಿಸಿಎಂ ಬಗ್ಗೆ ಚರ್ಚೆ ಮಾಡಿಲ್ಲ. ಭ್ರಷ್ಟಾಚಾರದ ಪೆನ್ ಡ್ರೈವ್ ಇದೆ. ತನಿಖೆ ಮಾಡಿಸುವುದಾದರೆ ಕೊಡ್ತೀನಿ ಎಂದು ದಿನಾ ಹೇಳುತ್ತಿರುತ್ತಾರೆ. ಮೊದಲು ಕೊಡಲಿ. ಕೊಡುವುದಕ್ಕೂ ಮೊದಲು ಹೇಳಿದ್ರೆ ಹೆಂಗೆ ಎಂದು ಹೇಳಿದರು.