Bengaluru CityDakshina KannadaDistrictsKarnatakaLatestLeading NewsMain Post

ಪ್ರವೀಣ್ ಹಂತಕರು ಯಾರೆಂದು ಗೊತ್ತಾಗಿದೆ, ಶೀಘ್ರವೇ ಬಂಧನ ಮಾಡ್ತೇವೆ: ಆರಗ ಜ್ಞಾನೇಂದ್ರ

ಬೆಂಗಳೂರು: ಪ್ರವೀಣ್ ಬೆಳ್ಳಾರೆ ಹತ್ಯೆ ಕೇಸ್‍ನ ಹಂತಕರು ಯಾರು ಅಂತ ಗೊತ್ತಾಗಿದೆ. ಶೀಘ್ರದಲ್ಲಿಯೇ ಅವರ ಬಂಧನ ಆಗಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರವೀಣ್ ಹತ್ಯೆ ಪ್ರಕರಣ ಸಂಬಂಧ ಇಬ್ಬರನ್ನು ಬೆಂಗಳೂರಿನಲ್ಲಿ ಅರೆಸ್ಟ್ ಮಾಡಲಾಗಿದೆ. ಇವರು ಕೃತ್ಯಕ್ಕೆ ಸಹಾಯ ಮಾಡಿದವರು. ಇದಲ್ಲದೇ ಮತ್ತೆ ಅನೇಕರನ್ನು ವಶಕ್ಕೆ ಪಡೆದು ವಿಚಾರ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಯಾರು ಕೃತ್ಯ ಮಾಡಿದ್ದಾರೆ ಅಂತ ನಮಗೆ ಗೊತ್ತಾಗಿದೆ. ಅವರ ಬಂಧನಕ್ಕೂ ಬಲೆ ಬೀಸಿದ್ದೇವೆ. ಎರಡು-ಮೂರು ದಿನಗಳಲ್ಲಿ ಅವರ ಬಂಧನವೂ ಆಗುತ್ತದೆ. ತನಿಖಾ ಹಂತದಲ್ಲಿ ಇರುವುದರಿಂದ ಹೆಚ್ಚಿನ ಮಾಹಿತಿ ಹೇಳಲು ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ಆಗಸ್ಟ್‌ 2 ವಿಶೇಷ ದಿನ; ನಾನು DP ಬದಲಾಯಿಸಿದ್ದೇನೆ, ನೀವೂ ಬದಲಾಯಿಸಿ – ಜನತೆಗೆ ಮೋದಿ ಕರೆ

ಪ್ರಕರಣದಲ್ಲಿ ಅಮಾಯಕರನ್ನು ಬಂಧನ ಮಾಡಿಲ್ಲ. ಕೃತ್ಯಕ್ಕೆ ಸಹಾಯ ಮಾಡಿದವರ ಬಂಧನ ಈಗ ಆಗಿದೆ. ಹತ್ಯೆ ಮಾಡಿರುವುದು ಯಾರು ಅಂತ ಗೊತ್ತಾಗಿದೆ. ಅವರು ಒಂದೇ ಕಡೆ ಇಲ್ಲದೆ ಓಡಾಡುತ್ತಿದ್ದಾರೆ. ಅವರನ್ನು ಶೀಘ್ರವೇ ಬಂಧನ ಮಾಡುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಇದೇ ವೇಳೆ ಫಾಝಿಲ್ ಪ್ರಕರಣದ ತನಿಖೆ ನಡೆಯುತ್ತಿದೆ. ಯಾರನ್ನು ಈ ಕೇಸ್‍ಯಿಂದ ಬಿಡುವುದಿಲ್ಲ. ಪೊಲೀಸರು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಅನಧಿಕೃತ ಫ್ಲೆಕ್ಸ್, ಬ್ಯಾನರ್ ವಿರುದ್ಧ ಫೀಲ್ಡ್‌ಗಿಳಿದ ಬಿಬಿಎಂಪಿ ಅಧಿಕಾರಿಗಳು

Live Tv

Leave a Reply

Your email address will not be published.

Back to top button