ಬೆಂಗಳೂರು: ರಾಜ್ಯ ಭ್ರಷ್ಟಾಚಾರ ಮುಕ್ತವಾಗಲಿ ಎಂಬ ಕಾಳಜಿ ಇದ್ದರೆ ಸಂಸದ ಉಗ್ರಪ್ಪ ಅವರು ಈ ಬಗ್ಗೆ ದೂರು ನಿಡಲಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಕಾಂಗ್ರೆಸ್ ಪ್ರೆಸ್ ಮೀಟ್ ಅಲ್ಲಿ ಕಾಂಗ್ರೆಸ್ ನಾಯಕರಿಂದ ಡಿಕೆಶಿ ವಿರುದ್ಧ ಅಕ್ರಮ ಹೇಳಿಕೆ ಕುರಿತು ಮಾತನಾಡಿದ ಅವರು, ಈ ಬಗ್ಗೆ ಖಂಡಿತವಾಗ್ಲೂ ಉಗ್ರಪ್ಪ ಅವರು ದೂರು ನೀಡಲಿ. ಸುಮೋಟೊ ಕಷ್ಟ, ಹೀಗಾಗಿ ಅವರೇ ದೂರು ನೀಡಲಿ. ಭ್ರಷ್ಟಾಚಾರ ಮುಕ್ತವಾಗಲಿ ಅನ್ನೊ ಕಾಳಜಿ ಇದ್ದರೆ ದೂರು ನೀಡಲಿ. ಅವರು ದೂರು ನೀಡಿದರೆ ಪೊಲೀಸ್ ಇಲಾಖೆಯಿಂದ ತನಿಖೆ ನಡೆಸಲು ಸೂಚಿಸುತ್ತೇನೆ ಎಂದರು.
Advertisement
Advertisement
ಬರೀ ಬಾಯಿ ಮಾತಿನಲ್ಲಿ ಕಿವಿಯಲ್ಲಿ ಹೇಳಿದ್ರೆ ಅದು ಬೊಗಳೆ ಆಗುತ್ತೆ. ನಿಜವಾಗಲೂ ಭ್ರಷ್ಟಾಚಾರದ ಬಗ್ಗೆ ಹೋರಾಟ ಮಾಡಬೇಕು ಅನ್ನುವ ಮನಸಿದ್ದರೆ ದೂರು ಕೊಡ್ಲಿ ಎಂದು ಗೃಹ ಸಚಿವರು ತಿಳಿಸಿದರು. ಇದನ್ನೂ ಓದಿ: ಕೈ ನಾಯಕರಿಂದ್ಲೇ ಡೀಲ್ ರಹಸ್ಯ ಬಯಲು – ಡಿಕೆಶಿಗೆ ಬಿಜೆಪಿ ತಿರುಗೇಟು
Advertisement
Advertisement
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಮಾಧ್ಯಮ ಸಂಯೋಜಕ ಸಲೀಂ ಡೀಲ್ ಆರೋಪ ಮಾಡಿರುವುದು ಇದೀಗ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೀಡಾಗಿದೆ. ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ ವೇಳೆ ಡಿಕೆಶಿ ಆಪ್ತ, ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ ಹಾಗೂ ಸಂಸದ ಉಗ್ರಪ್ಪ ನಡುವೆ ಸಂಭಾಷಣೆ ನಡೆದಿದೆ. ಡಿಕೆಶಿ ಅವರು ಕಲೆಕ್ಷನ್ ಗಿರಾಕಿ ಎಂದು ಹೇಳಿದ್ದರು. ಇದನ್ನೂ ಓದಿ: ರಾಜ್ಯ ಕಾಂಗ್ರೆಸ್ಸಿನಲ್ಲಿ ಪರ್ಸಂಟೇಜ್ ಕೋಲಾಹಲ – ಡಿಕೆಶಿ ಕಲೆಕ್ಷನ್ ಗಿರಾಕಿ ಅಂದ್ರು ಸಲೀಂ
ಜಲಸಂಪನ್ಮೂಲ ಇಲಾಖೆಯಲ್ಲಿ ಹೇಗೆ ಪರ್ಸಂಟೇಜ್ ಫಿಕ್ಸಾಗುತ್ತೆ ಎಂದು ಮಾತನಾಡಿಕೊಂಡಿದ್ದಾರೆ. ಡಿ.ಕೆ ಶಿವಕುಮಾರ್ ಜಲಸಂಪನ್ಮೂಲ ಸಚಿವರಾಗಿದ್ದಾಗ ಪರ್ಸಂಟೇಜ್ ಹೇಗೆ ಹಚ್ಚಾಯ್ತು..?, ಜಲಸಂಪನ್ಮೂಲ ಇಲಾಖೆಯಲ್ಲಿ ಮೊದಲೆಲ್ಲಾ 6 ರಿಂದ 8 ಪರ್ಸೆಂಟ್ ಇತ್ತು. ಡಿಕೆಶಿ ಬಂದ ಮೇಲೆ 12 ಪರ್ಸೆಂಟ್ ಮಾಡಿದರು ಎಂದು ಸಲೀಂ ಅವರು ಉಗ್ರಪ್ಪ ಬಳಿ ಹೇಳಿದ್ದರು. ಈ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ್ದ ಇಬ್ಬರು ನಾಯಕರು ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಅಯ್ಯೋ ಇಲ್ಲ ಸರ್, ಡಿಕೆಶಿ ಕಲೆಕ್ಷನ್ ಗಿರಾಕಿ ಅಲ್ಲ: ಸಲೀಂ, ಉಗ್ರಪ್ಪ ಸಮರ್ಥನೆ