ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆಯ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಆದರೆ, ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಗೃಹ ಇಲಾಖೆ ತಯಾರಿ ನಡೆಸಿದೆ.
ಹೀಗಾಗಿ, ಬಿಜಿಎಸ್ ಆಸ್ಪತ್ರೆಯಲ್ಲಿರುವ ದರ್ಶನ್‌ಗೆ ಟೆನ್ಷನ್ ಶುರುವಾಗಿದೆ. ಹಾಗಾಗಿ, ಗುರುವಾರದವರೆಗೂ ಚಿಕಿತ್ಸೆ ನಡೆಯಲಿದೆ. ಬೆನ್ನುನೋವು, ಕಾಲುನೋವಿಗೆ ಫಿಸಿಯೋಥೆರಪಿ ಮೂಲಕ ನೋವು ಶಮನಕ್ಕೆ ವೈದ್ಯರು ಪ್ಲ್ಯಾನ್ ಮಾಡಿದ್ದಾರೆ. ಪೊಲೀಸರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಹೋಗದಿದ್ದರೆ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಅಲ್ಲು ಅರ್ಜುನ್‌ಗೆ ಮತ್ತೆ ಸಂಕಷ್ಟ – ಜಾಮೀನು ಪ್ರಶ್ನಿಸಿ ತೆಲಂಗಾಣ ಪೊಲೀಸರು ಸುಪ್ರೀಂ ಮೆಟ್ಟಿಲೇರುವ ಸಾಧ್ಯತೆ
Advertisement
Advertisement
ಮಂಗಳವಾರ (ಡಿ.17) ಬಿಜಿಎಸ್ ಆಸ್ಪತ್ರೆಯಲ್ಲಿ ದರ್ಶನ್‌ರನ್ನು ಸಹೋದರ ದಿನಕರ್ ಭೇಟಿಯಾಗಿದ್ದಾರೆ. ಎ6 ಜಗದೀಶ್‌ಗೆ ಬೇಲ್ ಸಿಕ್ಕರೂ ಶೂರಿಟಿ ಸಿಕ್ಕಿಲ್ಲ. ಹಾಗಾಗಿ, ನಟರನ್ನು ನಂಬಿ ಯಾರೂ ಮೋಸ ಹೋಗ್ಬೇಡಿ ಅಂತ ಜಗದೀಶ್ ತಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ, ದರ್ಶನ್ ಬಗ್ಗೆ ನಟ ಮುರಳಿ ಮಾತಾಡಿದ್ದು, ಆಸ್ಪತ್ರೆಯಿಂದ ಬಂದ ಬಳಿಕ ದರ್ಶನ್ ಭೇಟಿ ಮಾಡ್ತೀನಿ ಅಂದಿದ್ದಾರೆ. ಇದನ್ನೂ ಓದಿ: ಪುಸ್ತಕ ಬರೀ ಖಾಲಿ, ಖಾಲಿ – ಸಂವಿಧಾನದ ಹೆಸ್ರಲ್ಲಿ ಇಂತಹ ಮೋಸ ನೋಡಿರಲಿಲ್ಲ: ಅಮಿತ್ ಶಾ