ಮಹಾನಟಿ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಹಾಗೂ ಅನೇಕ ಹಿಟ್ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ ಕೀರ್ತಿ ಸುರೇಶ್ (Keerthy Suresh) ಅವರ ಹುಟ್ಟು ಹಬ್ಬಕ್ಕೆ ಶುಭಾಶಯಗಳನ್ನು ಹೇಳುವ ಮೂಲಕ ಕುತೂಹಲ ಮೂಡಿಸಿದೆ ಹೊಂಬಾಳೆ ಫಿಲ್ಮ್ಸ್. ಈ ಟ್ವಿಟ್ ಒಂದಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದ್ದು, ಹೊಂಬಾಳೆ ನಿರ್ಮಾಣದ ಮುಂದಿನ ಸಿನಿಮಾದಲ್ಲಿ ಕೀರ್ತಿ ಸುರೇಶ್ ನಟಿಸಲಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ.
ಹೊಂಬಾಳೆ ಫಿಲ್ಮ್ಸ್ (Hombale Films) ಬ್ಯಾನರ್ ಅಡಿ ಈಗಾಗಲೇ ತೆಲುಗಿನಲ್ಲಿ ಸಲಾರ್ ಮೂಡಿ ಬರುತ್ತಿದ್ದರೆ, ಮಲಯಾಳಂ ಸಿನಿಮಾ ರಂಗದಲ್ಲೂ ಚಿತ್ರ ಮಾಡುತ್ತಿದ್ದಾರೆ. ತಮಿಳಿಗಾಗಿ ಚಿತ್ರವೊಂದನ್ನು ಮಾಡಲು ಸಿದ್ಧತೆ ಮಾಡಿಕೊಂಡಿದ್ದು, ಅದಕ್ಕೆ ಸುಧಾ ಕೊಂಗರ ನಿರ್ದೇಶಕಿ ಎಂದು ಈಗಾಗಲೇ ಗೊತ್ತು ಮಾಡಲಾಗಿದೆ. ಸುಧಾ ಮಾಡಲಿರುವ ಚಿತ್ರಕ್ಕೆ ಕೀರ್ತಿ ಸುರೇಶ್ ನಾಯಕಿ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ‘ಬಿಗ್ ಬಾಸ್ ಸೀಸನ್ 9’ರ ಮೊದಲ ಮಹಿಳಾ ಕ್ಯಾಪ್ಟನ್ ಆಗಿ ದೀಪಿಕಾ ದಾಸ್ ಆಯ್ಕೆ
ಸುಧಾ ಕೊಂಗಾರ (Sudha Kongara) ನಿರ್ದೇಶನದ ಚಿತ್ರದಲ್ಲಿ ಕೀರ್ತಿ ಸುರೇಶ್ ನಾಯಕಿಯಾದರೆ, ತಮಿಳಿನ ಖ್ಯಾತ ನಟ ಸಿಂಬು (Simbu) ನಾಯಕ ಎನ್ನಲಾಗುತ್ತಿದೆ. ಈ ಕಾರಣಕ್ಕಾಗಿಯೇ ಕೀರ್ತಿ ಸುರೇಶ್ ಅವರ ಹುಟ್ಟು ಹಬ್ಬಕ್ಕೆ ಹೊಂಬಾಳೆ ಫಿಲ್ಮ್ಸ್ ವಿಶ್ ಮಾಡಿದೆ. ಹೊಂಬಾಳೆ ಬ್ಯಾನರ್ ನಲ್ಲಿ ಮೂಡಿ ಬಂದ ಕಾಂತಾರ ಸಿನಿಮಾ ಬಗ್ಗೆ ಸಿಂಬು ಕೂಡ ಮೆಚ್ಚುಗೆ ಮಾತುಗಳನ್ನಾಡಿದ್ದರು. ಈ ಮೂಲಕ ಅವರು ಒಂದು ಸಣ್ಣ ಸುಳಿವು ಕೊಟ್ಟಿದ್ದರು.
ಬಹುತೇಕ ಸಿಂಬು ಜೊತೆಯೇ ಕೀರ್ತಿ ಸುರೇಶ್ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಥವಾ ಯುವರಾಜ್ ಕುಮಾರ್ (Yuvraj Kumar) ಗಾಗಿ ಹೊಂಬಾಳೆ ಸಿನಿಮಾವೊಂದನ್ನು ಘೋಷಿಸಿದ್ದು, ಈ ಚಿತ್ರಕ್ಕಾದರೂ ಅವರು ಬರಲಿದ್ದಾರೆ ಎನ್ನುವ ಮಾತೂ ಜೋರಾಗಿದೆ. ಒಟ್ಟಿನಲ್ಲಿ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಮೂಡಿ ಬರಲಿರುವ ಮುಂದಿನ ಸಿನಿಮಾದಲ್ಲಿ ಕೀರ್ತಿ ಸುರೇಶ್ ನಾಯಕಿ ಪಕ್ಕಾ ಎಂದೇ ಹೇಳಲಾಗುತ್ತಿದೆ.