ಜೇಮ್ಸ್ ಬಾಂಡ್, ಹ್ಯಾರಿ ಪಾಟರ್ (Harry Potter) ಸೇರಿದಂತೆ ಸಾಕಷ್ಟು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದ ಸ್ಕಾಟಿಶ್ ನಟ ರಾಬಿ ಕೋಲ್ಟ್ರೇನ್ (Robbie Coltrane) ನಿಧನರಾಗಿದ್ದಾರೆ. ಹ್ಯಾರಿ ಪಾಟರ್ ಸಿನಿಮಾದ ರುಬೆಸ್ ಹ್ಯಾಗ್ರಿಡ್ ಪಾತ್ರದ ಮೂಲಕ ರಾಬಿ ಸಾಕಷ್ಟು ಹೆಸರು ಮಾಡಿದ್ದರು. ಕ್ರ್ಯಾಕರ್ ಸಿರೀಸ್ ನಿಂದಲೂ ಅವರು ಭಾರೀ ಜನಪ್ರಿಯತೆಯನ್ನು ಪಡೆದಿದ್ದರು.
72ರ ವಯಸ್ಸಿನ ರಾಬಿ ಕೋಲ್ಟ್ರೇನ್ ನಿಧನದ ಸುದ್ದಿಯನ್ನು ಅಲ್ಲಿನ ಮಾಧ್ಯಮಗಳು ಖಚಿತ ಪಡಿಸಿದ್ದು, ಸಾವಿಗೆ ಕಾರಣವನ್ನೂ ಮಾತ್ರ ತಿಳಿಸಿಲ್ಲ. ಶುಕ್ರವಾರ ತಡರಾತ್ರಿ ನಟ ನಿಧನರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇವೆ ಎಂದು ರಾಬಿ ಅವರ ಏಜೆಂಟ್ ತಿಳಿಸಿದ್ದಾರೆ. 40 ವರ್ಷದಿಂದ ಅವರ ಏಜೆಂಟ್ ಆಗಿ ಕೆಲಸ ಮಾಡಿದ್ದಕ್ಕೆ ಹೆಮ್ಮೆಯಿದೆ ಎಂದು ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ರಾಜಣ್ಣ ಮೇಲೆ ಪ್ರಶಾಂತ್ ಸಂಬರ್ಗಿ ವಾಗ್ದಾಳಿ
ರಾಬಿ ಸಿನಿಮಾ ರಂಗದಲ್ಲಿ ಮಾತ್ರವಲ್ಲ, ಟಿವಿ ಮತ್ತು ವೆಬ್ ಸಿರೀಸ್ ನಲ್ಲೂ ಕಾಣಿಸಿಕೊಂಡಿದ್ದಾರೆ. 1990ರಲ್ಲಿ ಮೊದಲ ಬಾರಿಗೆ ಕ್ರ್ಯಾಕರ್ ಸಿರೀಸ್ ನಲ್ಲಿ ಅವರು ಡಿಟೆಕ್ಟಿವ್ ಪಾತ್ರ ಮಾಡಿದ್ದಾರೆ. ಆ ಪಾತ್ರ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಈ ನಟನೆಗಾಗಿ ಅವರಿಗೆ ಅಕಾಡಮಿ ಟೆಲಿವಿಷನ್ ಪ್ರಶಸ್ತಿ ಕೂಡ ಬಂದಿತ್ತು. ಅಲ್ಲದೇ, ಜೇಮ್ಸ್ ಬಾಂಡ್ (James Bond) ಸೇರಿದಂತೆ ಹಲವು ಸಿನಿಮಾಗಳಲ್ಲೂ ರಾಬಿ ಕಾಣಿಸಿಕೊಂಡಿದ್ದಾರೆ.