ಮುಂಬೈ ಬೆಡಗಿ, ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಸಹೋದರನ ಎಂಗೇಜ್‌ಮೆಂಟ್ ಸಂಭ್ರಮದಲ್ಲಿದ್ದಾರೆ ಪ್ರಿಯಾಂಕಾ. ಹೊಸ ಜೋಡಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಹಿಟ್ ಚಿತ್ರ ರಿಜೆಕ್ಟ್ ಮಾಡಿ ಟ್ರೋಲ್‌ನಿಂದ ಬಚಾವ್ ಆದ ಶ್ರೀಲೀಲಾ
Advertisement
ವಿದೇಶದಲ್ಲಿ ಸೆಟಲ್ ಆಗಿರುವ ಪ್ರಿಯಾಂಕಾ ಚೋಪ್ರಾ ಕಳೆದ ಕೆಲದಿನಗಳ ಹಿಂದೆ ಮಗಳ ಜೊತೆ ಭಾರತಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಬ್ಯಾಕ್ ಟು ಬ್ಯಾಕ್ ಕಾರ್ಯಕ್ರಮಗಳಿಗೆ ನಟಿ ಹಾಜರಿ ಹಾಕುತ್ತಿದ್ದಾರೆ. ಆಭರಣ ಮಳಿಗೆ ಚಾಲನೆ ಕಾರ್ಯಕ್ರಮ, ಅಂಬಾನಿ ಕುಟುಂಬದ ಪಾರ್ಟಿ, ಮನ್ನಾರಾ ಚೋಪ್ರಾ ಬರ್ತ್‌ಡೇ ಸೆಲೆಬ್ರೇಶನ್‌ಗಳಲ್ಲಿ ನಟಿ ಭಾಗಿಯಾಗುತ್ತಿದ್ದಾರೆ. ಇದನ್ನೂ ಓದಿ:10 ವರ್ಷಗಳ ನಂತರ ಮತ್ತೆ ಒಂದಾದ ‘ಒಕಾ ಲೈಲಾ ಕೋಸಂ’ ಜೋಡಿ
Advertisement
Advertisement
ಇದೀಗ ಸಹೋದರ ಸಿದ್ಧಾರ್ಥ್ ಚೋಪ್ರಾ (Siddarth Chopra) ಎಂಗೇಜ್‌ಮೆಂಟ್ (Engagement) ಮುಂಬೈನಲ್ಲಿ ಅದ್ಧೂರಿಯಾಗಿ ಜರುಗಿದೆ. ಬಹುಕಾಲದ ಗೆಳತಿ ನೀಲಂ ಜೊತೆ ಸಿದ್ಧಾರ್ಥ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ವೇಳೆ, ಪ್ರಿಯಾಂಕಾ ರೆಡ್ ಕಲರ್ ಸೀರೆಯಲ್ಲಿ ಮಿಂಚಿದ್ದಾರೆ. ಪತಿ ನಿಕ್ ಮತ್ತು ಮಗಳ ಜೊತೆ ಮನೆ ಕಾರ್ಯಕ್ರಮದಲ್ಲಿ ನಟಿ ಕಂಗೊಳಿಸಿದ್ದಾರೆ.
Advertisement
ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಪ್ರಿಯಾಂಕಾ ಸಹೋದರನಿಗೆ ಬಾಲಿವುಡ್ ನಟ-ನಟಿಯರು ಶುಭಹಾರೈಸುತ್ತಿದ್ದಾರೆ.