ಹೆಸರಾಂತ ನಟ ರಜನಿಕಾಂತ್ (Rajinikanth) ಅವರ ಜೀವನವನ್ನು (Biopic) ಆಧರಿಸಿದ ಸಿನಿಮಾ ಮಾಡಲು ಬಾಲಿವುಡ್ ನಿರ್ಮಾಪಕರು ಮುಂದೆ ಬಂದಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಈಗಾಗಲೇ ಬಾಲಿವುಡ್ ನಲ್ಲಿ ಸಾಕಷ್ಟು ಚಿತ್ರಗಳನ್ನು ತಯಾರಿಸಿರುವ ಸಾಜಿದ್ ನಾಡಿಯಾದ್ವಾಲ್ (Sajid Nadiadwal) ಅವರು ಈ ಚಿತ್ರಕ್ಕೆ ಹಣ ಹೂಡಲಿದ್ದಾರೆ.
- Advertisement 2
ಹಲವಾರು ವರ್ಷಗಳಿಂದ ರಜನಿ ಬಯೋಪಿಕ್ ಬಗ್ಗೆ ಸುದ್ದಿ ಆಗುತ್ತಲೇ ಇದೆ. ಆದರೆ, ಯಾವುದೂ ನಿಕ್ಕಿ ಆಗಿರಲಿಲ್ಲ. ಈ ಬಾರಿ ನಿರ್ಮಾಪಕರ ಹೆಸರೂ ಬಹಿರಂಗ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಚಿತ್ರ ಬರಬಹುದು. ಅದು ಹಲವು ಭಾಷೆಗಳಲ್ಲೂ ನಿರ್ಮಾಣ ಆಗಬಹುದು.
- Advertisement 3
- Advertisement 4
ಸದ್ಯಕ್ಕೆ ನಿರ್ಮಾಣ ಸಂಸ್ಥೆಯ ಹೆಸರು ಮಾತ್ರ ಕೇಳಿ ಬಂದಿದೆ. ಮುಂದಿನ ದಿನಗಳಲ್ಲಿ ನಿರ್ದೇಶಕರು, ತಾಂತ್ರಿಕ ವರ್ಗ ಹಾಗೂ ರಜನಿ ಪಾತ್ರವನ್ನು ಯಾರು ಮಾಡಲಿದ್ದಾರೆ ಎನ್ನುವ ಮಾಹಿತಿಯೂ ಹೊರಬಹುದು.