ವಾಷಿಂಗ್ಟನ್: ಹಾಲಿವುಡ್ ಜನಪ್ರಿಯ ನಟಿ, ಮಾಡೆಲ್ ಓಲ್ಗಾ ಕುರಿಲೆಂಕೊ ಕೊರೊನಾ ಸೋಂಕಿನ ವಿರುದ್ಧ ಹೋರಾಡಿ ಗೆದ್ದಿದ್ದಾರೆ.
ಈ ವಿಚಾರವನ್ನು ಜೇಮ್ಸ್ ಬಾಂಡ್ ನಟಿ ಓಲ್ಗಾ ತಮ್ಮ ಇನ್‍ಸ್ಟಾಗ್ರಾಮ್ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ‘ನಾನು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇನೆ. ಒಂದು ವಾರ ನಾನು ತುಂಬಾ ಕೆಟ್ಟದಾಗಿ ಕಾಲ ಕಳೆದೆ. ಏಕೆಂದರೆ ಹೆಚ್ಚಿನ ಸಮಯ ಜ್ವರ ಮತ್ತು ತಲೆನೋವಿನಿಂದ ಹಾಸಿಗೆಯಲ್ಲಿದ್ದೆ. ಈ ಸಮಯದಲ್ಲಿ ನಾನು ಸತ್ತುಬಿಡುತ್ತೇನೆ ಎಂಬ ಭಯ ಕೂಡ ಆರಂಭವಾಗಿತ್ತು ಎಂದು ಬರೆದುಕೊಂಡಿದ್ದಾರೆ.
Advertisement
https://www.instagram.com/p/B-DPRf1ha-q/
Advertisement
ಎರಡನೇ ವಾರದಲ್ಲಿ ಜ್ವರ ಹೋಯಿತು. ಆದರೆ ಸ್ವಲ್ಪ ಪ್ರಮಾಣದಲ್ಲಿ ಕಫ ಇತ್ತು. ಈಗ ಸಂಪೂರ್ಣವಾಗಿ ಗುಣಮುಖಳಾಗಿರುವೆ. ಈಗ ನಾನು ನನ್ನ ಮಗನೊಂದಿಗೆ ಸಮಯ ಕಳೆಯುತ್ತಿದ್ದೇನೆ ಎಂದು 40 ವರ್ಷದ ನಟಿ ಓಲ್ಗಾ ತಿಳಿಸಿದ್ದಾರೆ.
Advertisement
ಇದಕ್ಕೂ ಮುನ್ನ ಅಂದ್ರೆ ಮಾರ್ಚ್ 20ರಂದು ಓಲ್ಗಾ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದ ಫೋಟೋ ಪೋಸ್ಟ್ ಮಾಡಿದ್ದರು. ಅಷ್ಟೇ ಅಲ್ಲದೆ ಮಾರ್ಚ್ 15ರಂದು ಅವರು, ಕೊರೊನಾ ಸೋಂಕು ತಗುಲಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದರು. `ನನಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಹಾಗಾಗಿ ಮನೆಯಲ್ಲೇ ಇದ್ದೇನೆ. ವಾಸ್ತವಾಗಿ ಒಂದು ವಾರದಿಂದ ನಾನು ಅನಾರೋಗ್ಯದಿಂದ ಬಳಲುತ್ತಿದ್ದೆ. ಜ್ವರ, ಆಯಾಸದ ಲಕ್ಷಣಗಳು ನನ್ನಲ್ಲಿವೆ. ನೀವು ಎಚ್ಚರದಿಂದಿರಿ. ಇದನ್ನು ಗಂಭೀರವಾಗಿ ಪರಿಗಣಿಸಿ’ ಎಂದು ಬರೆದುಕೊಂಡಿದ್ದರು.
Advertisement
https://www.instagram.com/p/B94THD4Je_a/?utm_source=ig_embed
ನಟಿ ಓಲ್ಗಾ ಅವರಿಗೆ ಕೊರೊನಾ ಸೋಂಕು ತಗುಲಿರುವ ವಿಚಾರ ತಿಳಿದು ಸ್ನೇಹಿತರು, ಅಭಿಮಾನಿಗಳು ಆದಷ್ಟು ಬೇಗ ಚೇತರಿಸಿಕೊಳ್ಳಿ ಕಮೆಂಟ್ ಮಾಡಿದ್ದರು. `ದೇವರೇ, ಶೀಘ್ರ ಚೇತರಿಸಿಕೊಳ್ಳಿ ಎಂದು ನಿಮಗಾಗಿ ನಾವು ಪ್ರಾರ್ಥಿಸುತ್ತಿದ್ದೇವೆ’ ಎಂದು ಉಕ್ರೇನ್ ನಟಿ ಮಿಲ್ಲಾ ಜೋವೋವಿಚ್ ಕಾಮೆಂಟ್ ಮೂಲಕ ತಿಳಿಸಿದ್ದರು.