ಚಂದನವನ ಮೊದಲೇ ಕಲರ್ ಫುಲ್ ಜಗತ್ತು. ಈ ಜಗತ್ತನ್ನು ಮತ್ತಷ್ಟು ಕಲರ್ ಫುಲ್ ಆಗಿ ಮಾಡಿದೆ ಹೋಳಿ ಹಬ್ಬ. ಸ್ಯಾಂಡಲ್ ವುಡ್ ಮತ್ತು ಕಿರುತೆರೆಯ ಅನೇಕ ತಾರೆಯರು ಇಂದು ಹೋಳಿ ಹಬ್ಬವನ್ನು ಆಚರಿಸಿದ್ದಾರೆ. ಈ ಮೂಲಕ ಎಲ್ಲರ ಬದುಕೂ ಬಣ್ಣವಾಗಿರಲಿ ಎಂದು ಹಾರೈಸಿದ್ದಾರೆ
ಅವನೇ ಶ್ರೀಮನ್ ನಾರಾಯಣ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಶಾನ್ವಿ ಶ್ರೀವಾತ್ಸ ಅವರ ಕುಟುಂಬದೊಂದಿಗೆ ಹೋಳಿ ಆಚರಿಸಿದ್ದಾರೆ. ತಾಯಿ ಮತ್ತು ಕುಟುಂಬದ ಅನೇಕ ಸದಸ್ಯರಿಗೆ ಬಣ್ಣ ಹಚ್ಚವ ಮೂಲಕ ಹೋಳಿ ಆಚರಿಸಿದ್ದಾರೆ. ಇದನ್ನೂ ಓದಿ : ಪುನೀತ್ ಗೆ ಮರಣೋತ್ತರ ‘ ಸಹಕಾರ ರತ್ನ’ ಪ್ರಶಸ್ತಿ: ಸಚಿವ ಎಸ್.ಟಿ.ಸೋಮಶೇಖರ್ ಘೋಷಣೆ
ಕನ್ನಡ ಕಿರುತೆರೆ ನಟಿ, ಬಿಗ್ ಬಾಸ್ ಖ್ಯಾತಿಯ ಕಾವ್ಯ ಶಾಸ್ತ್ರೀ ಕೂಡ ಇಂದು ಸಡಗರದಿಂದ ಹೋಳಿ ಹಬ್ಬವನ್ನು ಆಚರಿಸಿದ್ದಾರೆ. ಫ್ರೆಂಡ್ಸ್ ಮತ್ತು ಕುಟುಂಬದ ಇತರ ಸದಸ್ಯರ ಜೊತೆ ಅವರು ಬಣ್ಣವನ್ನು ವಿನಿಮಯ ಮಾಡಿಕೊಂಡಿದ್ದಾರೆ.
ಕಿರುತೆರೆ ನಟಿ, ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ನೇಹಾ ಗೌಡ ಹೋಳಿ ಹಬ್ಬಕ್ಕೆ ಎಲ್ಲರಿಗೂ ಶುಭಾಶಯ ಕೋರಿದ್ದಾರೆ. ವಿದೇಶದಿಂದ ವಾಪಸ್ಸಾಗಿರುವ ಅವರು ಕುಟುಂಬದೊಂದಿಗೆ ಹೋಳಿಯನ್ನು ಆಚರಿಸಿದ್ದಾರೆ. ಇದನ್ನೂ ಓದಿ : ಕೆಜಿಎಫ್ 2.. ಹುಷಾರ್, ಮಾರ್ಚ್ 21ಕ್ಕೆ ತೂಫಾನ್ ಅಪ್ಪಳಿಸಲಿದೆ!
ಜಾಕಿ, ಭಜರಂಗಿ 2 ಸೇರಿದಂತೆ ಅನೇಕ ಕನ್ನಡ ಸಿನಿಮಾಗಳನ್ನು ಮಾಡಿರುವ, ಮಲಯಾಳಂ ನಟಿ, ಕರ್ನಾಟಕದ ಸೊಸೆ ಭಾವನಾ ಮೆನನ್ ಕೂಡ ಹೋಳಿ ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಭಜರಂಗಿ 2 ಸಿನಿಮಾದಲ್ಲಿಯ ಹೋಳಿ ದೃಶ್ಯದ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.
ಪಾರು ಧಾರಾವಾಹಿಯ ಖ್ಯಾತಿಯ ನಟ ಶರತ್ ಪದ್ಮನಾಭ್ ಕೂಡ ಈ ಬಾರಿ ಹೋಳಿಯನ್ನು ಸಡಗರದಿಂದ ಆಚರಿಸಿದ್ದಾರೆ. ಗೆಳೆಯರು ಮತ್ತು ಆಪ್ತರೊಂದಿಗೆ ಹೋಳಿ ಆಡಿರುವ ಅವರು ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ : ಪಠಾಣ್ ಚಿತ್ರಕ್ಕಾಗಿ ಬಿಕಿನಿ ತೊಟ್ಟ ದೀಪಿಕಾ ಪಡುಕೋಣೆ: ಫೋಟೋ ಲೀಕ್
ಬಿಗ್ ಬಾಸ್ ಖ್ಯಾತಿಯ ತೇಜಸ್ವಿನಿ ಪ್ರಕಾಶ್ ಕೂಡ ಹೋಳಿಯನ್ನು ಕುಟುಂಬದೊಂದಿಗೆ ಆಚರಿಸಿದ್ದಾರೆ. ಆ ಫೋಟೋವನ್ನು ಅಭಿಮಾನಿಗಳಿಗಾಗಿ ಶೇರ್ ಮಾಡಿದ್ದು, ಹೋಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
ಕನ್ನಡದ ಖ್ಯಾತ ನಟ ವಸಿಷ್ಠ ಸಿಂಹ ಕೂಡ ಇಂದು ಬೆಂಗಳೂರಿನಲ್ಲಿ ಮಕ್ಕಳೊಂದಿಗೆ ಹೋಳಿ ಆಡಿದ್ದಾರೆ. ಮಕ್ಕಳ ಜತೆ ಮಕ್ಕಳಾಗಿ ಅವರು ಬಣ್ಣ ಹಚ್ಚಿದ್ದಾರೆ. ಆ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿ ಶುಭಾಶಯ ಹೇಳಿದ್ದಾರೆ.