ಯಶ್ ನಟನೆಯ ‘ಕೆಜಿಎಫ್ 2’ ಸಿನಿಮಾದ ಮೊದಲ ಹಾಡು ಸದ್ಯದಲ್ಲೇ ಬಿಡುಗಡೆ ಆಗಲಿದೆ. ಇದೇ ಮಾರ್ಚ್ 21 ರಂದು ಬೆಳಗ್ಗೆ 11.07ಕ್ಕೆ ‘ತೂಫಾನ್..’ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಮಾಡುವುದಾಗಿ ಹೊಂಬಾಳೆ ಫಿಲ್ಮ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿದೆ. ಇದು ಈ ಸಿನಿಮಾದ ಮೊದಲ ಹಾಡಾಗಿದ್ದು, ತೂಫಾನ್ ಯಾವ ರೀತಿಯಲ್ಲಿಇರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹುಟ್ಟು ಹಾಕಿದೆ.
Advertisement
ಕೆಜಿಎಫ್ ಸಿನಿಮಾದ ಬಹುತೇಕ ಹಾಡುಗಳು ಹಿಟ್ ಆಗಿದ್ದವು. ನಾನಾ ಬಗೆಯ ಸಂಗೀತವನ್ನು ಸಂಯೋಜಿಸಿ ಹಾಡುಗಳನ್ನು ರೆಡಿ ಮಾಡಿದ್ದರು ರವಿ ಬಸ್ರೂರು. ಈ ಸಿನಿಮಾದಲ್ಲೂ ಅಂಥದ್ದೇ ಮಜಾ ಕೊಡುವಂತೆ ಹಾಡುಗಳು ಇವೆಯಂತೆ. ಇದನ್ನೂ ಓದಿ : ಪಠಾಣ್ ಚಿತ್ರಕ್ಕಾಗಿ ಬಿಕಿನಿ ತೊಟ್ಟ ದೀಪಿಕಾ ಪಡುಕೋಣೆ: ಫೋಟೋ ಲೀಕ್
Advertisement
Advertisement
ನಾನಾ ಕಾರಣಗಳಿಂದಾಗಿ ಈ ಸಿನಿಮಾ ಕುತೂಹಲ ಮೂಡಿಸಿದೆ. ಹಲವು ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆ ಆಗುತ್ತಿರುವುದರಿಂದ ಅಷ್ಟೂ ಭಾಷೆಗೂ ಸಲ್ಲುವಂತಹ ತಾರಾಗಣವು ಈ ಸಿನಿಮಾದಲ್ಲಿದೆ. ಯಶ್ ನಾಯಕನಾದರೆ, ಶ್ರೀನಿಧಿ ಶೆಟ್ಟಿ ನಾಯಕಿ, ಬಾಲಿವುಡ್ ಖ್ಯಾತ ನಟ ಸಂಜಯ್ ದತ್ತ ಮತ್ತು ಪ್ರಕಾಶ್ ರೈ, ಬಾಲಿವುಡ್ ನಟಿ ರವಿನಾ ಟಂಡನ್ ಸೇರಿದಂತೆ ದೊಡ್ಡ ತಾರಾ ಬಳಗವೇ ಈ ಸಿನಿಮಾದಲ್ಲಿದೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕನಿಗೆ ಜೀವ ಬೆದರಿಕೆ ‘ವೈ’ ಶ್ರೇಣಿ ಭದ್ರತೆ
Advertisement
ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾಗೆ ವಿಜಯ್ ಕಿರಗಂದೂರು ನಿರ್ಮಾಪಕರು. ಅಲ್ಲದೇ ಕೆಜಿಎಫ್ ಮೊದಲ ಭಾಗ ಮಾಡಿದ್ದ ತಾಂತ್ರಿಕ ವರ್ಗವೇ ಈ ಸಿನಿಮಾದಲ್ಲೂ ಕೆಲಸ ಮಾಡಿದೆ.