ಬೆಂಗಳೂರು: ಇಡೀ ವಿಶ್ವದೆಲ್ಲೆಡೆ ಮಹಾಮಾರಿ ಕೊರೊನಾ ವೈರಸ್ ಭೀತಿ ತಲ್ಲಣ ಆತಂಕ ಸೃಷ್ಟಿಸಿದೆ. ಈ ಮಹಾಮಾರಿ ಭಾರತಕ್ಕೂ ವಕ್ಕರಿಸಿದ್ದು, ಸಿಲಿಕಾನ್ ಸಿಟಿ ಮಂದಿ ಕೂಡ ಬೆಚ್ಚಿ ಬಿದ್ದಿದ್ದಾರೆ. ಜೊತೆಗೆ ಹೋಳಿ ಹಬ್ಬದ ಸಂಭ್ರಮಕ್ಕೂ ಕೊರೊನಾ ಬ್ರೇಕ್ ಹಾಕಲಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಬೇಡಿ, ಜನರ ಗುಂಪಿನಲ್ಲಿ ಯಾರಿಗಾದರೂ ಈ ವೈರಸ್ ಇದ್ದರೆ ಅದು ಹರಡತ್ತೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ಕೊಟ್ಟಿದೆ. ಈ ಕೊರೊನಾ ವೈರಸ್ ಭೀತಿ ಹೋಳಿ ಹಬ್ಬಕ್ಕೂ ಆಗಿದ್ದು ಸಾರ್ವಜನಿಕರು ಅದ್ಧೂರಿಯಾಗಿ ಹೆಚ್ಚಿನ ಜನ ಸೇರಿ ಹಬ್ಬ ಮಾಡಬೇಡಿ ಎಂದು ಮೋದಿ ಮತ್ತು ಗೃಹಮಂತ್ರಿ ಟ್ವೀಟ್ ಮಾಡಿದ್ದರು. ಇದನ್ನೂ ಓದಿ: ಹೆಚ್ಚು ಜನ ಸೇರುವ ಕಾರ್ಯಕ್ರಮದಲ್ಲಿ ಭಾಗವಹಿಸಬೇಡಿ – ಪ್ರಧಾನಿ ಮೋದಿ ಮನವಿ
Advertisement
Experts across the world have advised to reduce mass gatherings to avoid the spread of COVID-19 Novel Coronavirus. Hence, this year I have decided not to participate in any Holi Milan programme.
— Narendra Modi (@narendramodi) March 4, 2020
Advertisement
ಹೋಳಿ ಎಂದು ಕರೆಯುವ ಬಣ್ಣದ ಹಬ್ಬಕ್ಕೆ ರಂಗು ರಂಗಿನ ಬಣ್ಣಗಳು ಚೀನಾ ದೇಶದಿಂದ ಶೇ. 90ರಷ್ಟು ಆಮದು ಆಗುತ್ತಿತ್ತು. ಚೀನಾ ದೇಶದಲ್ಲಿ ಕೊರೊನಾದ ರಂಗೂ ಹೋಳಿ ಹಬ್ಬದ ರಂಗಿಗ್ಗಿಂತ ಹೆಚ್ಚಾಗಿದೆ. ಅಷ್ಟೇ ಅಲ್ಲದೆ ಹೋಳಿ ಆಡಲು ಬಳಸುವ ಸಾಕಷ್ಟು ಆಟಿಕೆಗಳು ಸಹ ಚೀನಾದಿಂದ ಬರುತ್ತಿದ್ದ ವಸ್ತುಗಳೇ ಎನ್ನುವುದು ವಿಪರ್ಯಾಸ.
Advertisement
Advertisement
ಈ ಬಾರಿ ಚೀನಾದಿಂದ ಹೋಳಿ ಹಬ್ಬಕ್ಕೆ ಸಂಬಂಧಿಸಿದ ವಸ್ತುಗಳು ಭಾರತಕ್ಕೇ ಬರುತ್ತಿಲ್ಲ. ಇದರಿಂದ ಬಣ್ಣಗಳ ಬೆಲೆ ದುಪ್ಪಟ್ಟು ಆಗಲಿದೆ. ಹೀಗಾಗಿ ಸಾರ್ವಜನಿಕ ಸ್ಥಳಗಳಲ್ಲಿ, ಸ್ಟಾರ್ ಹೋಟೆಲ್ ಗಳು ಹೋಳಿ ಹಬ್ಬವನ್ನು ಆಚರಣೆ ಮಾಡದೇ ಇರಲು ನಿರ್ಧರ ತೆಗೆದುಕೊಂಡಿದೆ.
ಹೋಳಿ ಹಬ್ಬವನ್ನು ಗುಂಪು ಗುಂಪಾಗಿ ಆಚರಣೆ ಮಾಡುವುದರಿಂದ ಕೊರೊನಾ ಹರಡುವ ಚಾನ್ಸ್ ಇದೆ. ಹೀಗಾಗಿ ಈ ಬಾರಿ ಹೋಳಿಯಿಂದ ದೂರ ಇರುವುದು ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ.