ಅಡುಗೆಯಲ್ಲಿ, ವಿಶೇಷವಾಗಿ ಮಾಡುವ ಅಡುಗೆ ಮಾಂಸದ ಅಡುಗೆಯಾಗಿದೆ. ನಾವು ಅಡುಗೆ ಮಾಡಲು ಬಳಸುವ ಪದಾರ್ಥಗಳು ಹಿಡಿತದಲ್ಲಿದ್ದಾಗ ಮಾತ್ರ ಅಡುಗೆ ರುಚಿಯಾಗಿ ಆಗುತ್ತದೆ. ನಾವು ಇಂದು ಖಾರವಾದ ಅಡುಗೆ ತಿನ್ನಲು ಬಯಸುವವರಿಗಾಗಿ ರುಚಿಯಾದ ಖಾರವಾದ ಚಿಕನ್ ಲಿವರ್ ಡ್ರೈ ಮಾಡುವ ವಿಧಾನ ಹೇಳುತ್ತಿದ್ದೇವೆ
ಬೇಕಾಗುವ ಸಾಮಗ್ರಿಗಳು:
* ಚಿಕನ್ ಲಿವರ್- ಅರ್ಧ ಕೆಜಿ
* ಈರುಳ್ಳಿ-3
* ಟೊಮೆಟೊ- 1
* ಹಸಿಮೆಣಸಿನಕಾಯಿ -4
* ಕರಿಬೇವು – ಸ್ವಲ್ಪ,
* ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
* ಕಾಳುಮೆಣಸಿನಪುಡಿ – 1 ಚಮಚ,
* ಕೆಂಪು ಮೆಣಸಿನಕಾಯಿಪುಡಿ -1 ಚಮಚ
* ದನಿಯಾ ಪುಡಿ- 1 ಚಮಚ
* ರುಚಿಗೆ ತಕ್ಕಷ್ಟು ಉಪ್ಪು
* ಅರಿಸಿಣ- ಸ್ವಲ್ಪ
* ಕೊತ್ತಂಬರಿ ಸೊಪ್ಪು – ಸ್ವಲ್ಪ
* ಅಡುಗೆ ಎಣ್ಣೆ- ಅರ್ಧ ಕಪ್
Advertisement
Advertisement
ಮಾಡುವ ವಿಧಾನ:
* ಒಂದು ಬಾಣಲೆಯನ್ನು ಬಿಸಿಗಿಟ್ಟು, ಅಡುಗೆ ಎಣ್ಣೆ ಹಾಕಿ ಅದಕ್ಕೆ ಈರುಳ್ಳಿ, ಟೊಮೆಟೊ, ಹಸಿಮೆಣಸಿನಕಾಯಿ, ಕರಿಬೇವು ಸೇರಿಸಿ ಚೆನ್ನಾಗಿ ಹುರಿದುಕೊಳ್ಳಿ.
Advertisement
* ನಂತರ ಚಿಕನ್ ಲಿವರ್ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು, ಅರಿಸಿಣ, ಕೆಂಪುಮೆಣಸಿನ ಪುಡಿ, ಕೊತ್ತಂಬರಿ ಪುಡಿ ಹಾಕಿ ಚಿಕನ್ ಲಿವರ್ ಅನ್ನು ಬೇಯಿಸಿಕೊಳ್ಳಿ.
Advertisement
* ನೀರು ಸೇರಿಸುವ ಅವಶ್ಯಕತೆ ಇಲ್ಲ. ಲಿವರ್ ಬೆಂದ ನಂತರ ಕಾಳುಮೆಣಸಿನ ಪುಡಿ, ಗರಂಮಸಾಲೆ ಸೇರಿಸಿ ಮತ್ತೆ ಬೇಯಿಸಿ ಕೊನೆಯದಾಗಿ ಕೊತ್ತಂಬರಿಯನ್ನು ಹಾಕಿದರೆ ಚಿಕನ್ ಲಿವರ್ ಡ್ರೈ ಸಿದ್ಧವಾಗುತ್ತದೆ.