– ಚೀನಾದಿಂದ ಬರುವ ವಿಮಾನಗಳನ್ನು ನಿಷೇಧಿಸಿ; ಕೇಂದ್ರಕ್ಕೆ ಮನವಿ
ನವದೆಹಲಿ: ಚೀನಾ ಬಳಿಕ ಭಾರತದಲ್ಲೂ ಹೆಚ್‌ಎಂಪಿವಿ (HMPV) ಸೋಂಕು ಪ್ರಕರಣಗಳು ಪತ್ತೆಯಾಗಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ.
ಅದರಲ್ಲೂ, ಜನವರಿ 13ರಿಂದ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ (Maha Kumbh Mela) ಆರಂಭವಾಗ್ತಿರುವ ಹೊತ್ತಲ್ಲೇ ದೇಶದಲ್ಲಿ ಹೆಚ್‌ಎಂಪಿವಿ ಸೋಂಕು ಪ್ರಕರಣ ಬೆಳಕಿಗೆ ಬಂದಿರೋದು ಉತ್ತರಪ್ರದೇಶ ಸರ್ಕಾರವನ್ನು ಆತಂಕಕ್ಕೆ ದೂಡಿದೆ. ಇದನ್ನೂ ಓದಿ: HMPV ಜಾಗತಿಕವಾಗಿ ಪರಿಚಲನೆಯಲ್ಲಿದೆ – ಐಸಿಎಂಆರ್ ಎಚ್ಚರಿಕೆ
ಚೀನಾದಲ್ಲಿ (China) ಹೆಚ್‌ಎಂಪಿವಿ ಪ್ರಕರಣ ಕಳೆದ 10 ದಿನಗಳಲ್ಲಿ 600 ಪಟ್ಟು ಹೆಚ್ಚಾಗಿದೆ. ಹೀಗಾಗಿ ಲಕ್ಷಾಂತರ ಮಂದಿ ಪಾಲ್ಗೊಳ್ಳುವ ಕುಂಭಮೇಳದಲ್ಲಿ ಸೋಂಕು ಹಬ್ಬಬಹುದು ಎಂಬ ಆತಂಕವನ್ನು ಸಾಧುಗಳು ವ್ಯಕ್ತಪಡಿಸಿದ್ದಾರೆ. ಚೀನಾದಿಂದ ಬರುವ ವಿಮಾನಗಳನ್ನ ತಕ್ಷಣದಿಂದಲೇ ನಿಷೇಧಿಸಿ ಎಂದು ಕೇಂದ್ರವನ್ನು ಅಖಿಲ ಭಾರತ ಅಖಾರ ಪರಿಷತ್ ಆಗ್ರಹಿಸಿದೆ. ಇದನ್ನೂ ಓದಿ: ಚಿಕ್ಕಮಗಳೂರು | ಎಸ್ಟೇಟ್ ಮ್ಯಾನೇಜರ್ ಮೇಲೆ ಅಕ್ರಮ ಬಾಂಗ್ಲಾ ವಲಸಿಗರಿಂದ ಕಲ್ಲು ತೂರಾಟ
ಇನ್ನು, ಮಹಾಕುಂಭಮೇಳದಲ್ಲಿ ಈಗಾಗಲೇ 100 ಬೆಡ್‌ಗಳ ಆಸ್ಪತ್ರೆಯನ್ನು ರೆಡಿ ಮಾಡಲಾಗಿದೆ. ವೈದ್ಯರು, ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಮಧ್ಯೆ, ಮಹಾರಾಷ್ಟ್ರ ಸರ್ಕಾರ ಹೆಚ್‌ಎಂಪಿವಿ ಬಗ್ಗೆ ಮುಂಜಾಗ್ರತೆ ವಹಿಸಿ ಎಂದು ರಾಜ್ಯದ ಜನತೆಗೆ ತಿಳಿಸಿದೆ. ಈ ನಡುವೆ ಕೇಂದ್ರ ಸರ್ಕಾರ ಈಗಲೇ ಕ್ರಮ ಕೈಗೊಳ್ಳುವಂತೆ ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ ಸಾವು ಪ್ರಕರಣ – ಬಿಜೆಪಿ ಸತ್ಯಶೋಧನಾ ತಂಡದಿಂದ ಪರಿಶೀಲನೆ